ಸಾರಾಂಶ
- ಗುರುಮಠಕಲ್ ಶಾಸಕ ಶರಣಗೌಡ ಕಂದಕೂರಗೆ ಗ್ರಾಮ ಪಂಚಾಯತಿ ನೌಕರರ ಸಂಘದಿಂದದ ಮನವಿ
ಕನ್ನಡಪ್ರಭ ವಾರ್ತೆ ಯಾದಗಿರಿಗ್ರಾಮ ಪಂಚಾಯತಿ ನೌಕರರ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸುವಂತೆ ಜಿಲ್ಲೆಯ ಶಾಸಕರಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ಒತ್ತಾಯಿಸಿದೆ.
ಈ ಸಂಬಂಧ ನಗರದಲ್ಲಿನ ಗುರುಮಠಕಲ್ ಹಾಗೂ ಯಾದಗಿರಿ ಶಾಸಕರ ಕಚೇರಿಗಳಿಗೆ ತೆರಳಿದ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ರಾಜ್ಯದಲ್ಲಿ ಸುಮಾರು 63 ಸಾವಿರ ಗ್ರಾಮ ಪಂಚಾಯತಿ ನೌಕರರು ಕರ ವೂಲಿಗಾರರಾಗಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ, ಸ್ವಚ್ಛತಾಗಾರರು, ಸಿಪಾಯಿ ಮತ್ತು ವಾಟರ್‌ಮನ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿರಂತರ ಹೋರಾಟ ಮಾಡಿದ್ದರ ಫಲವಾಗಿ ನೌಕರರನ್ನು ಕನಿಷ್ಠ ವೇತನ ಕಾಯಿದೆಯಲ್ಲಿ ಸೇರಿಸಲಾಗಿದೆ. ಆದರೆ, ಈ ವೇತನವೂ ಸಾಕಾಗುತ್ತಿಲ್ಲ. ಸ್ವಚ್ಛವಾಹಿನಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ಗುಲಾಮರಂತೆ ದುಡಿಕೊಳ್ಳುತ್ತಿದೆ. ಇವರನ್ನು ಪಂಚಾಯತಿ ನೌಕರರು ಎಂದು ಪರಿಗಣಿಸಬೇಕು ಮತ್ತು ನಿಗದಿತ ವೇತನ ನೀಡಬೇಕು ಎಂದು ಆಗ್ರಹಿಸಿದರು.1994 ರಿಂದ 2017ರವರೆಗೆ ಪಂಚಾಯತಿ ನೌಕರರಿಗೆ ತೆರಿಗೆ ವಸೂಲಿ ಮಾಡಿಯೇ ವೇತನ ಸಿಗುತ್ತಿತ್ತು. ಆ ಸಂದರ್ಭದಲ್ಲಿ 50 ಸಾವಿರ ರು.ಗಳಲ್ಲಿ ದುಡಿಯುತ್ತಿದ್ದವರಿಗೆ ಹೋರಾಟದ ಮೂಲಕ ಸರಕಾರದ ಗಮನ ಸೆಳೆದಾಗ, 2018 ರಿಂದ ಸರಕಾರದ ನಿಧಿಯಿಂದ ವೇತನ ಪಡೆಯುವಂತಾಗಿದೆ. ಆದರೆ, ಪ್ರತಿ ತಿಂಗಳು ವೇತನ ಸಿಗದೆ ಒದ್ದಾಡುತ್ತಿದ್ದಾರೆ. 5-6 ವರ್ಷಗಳಿಂದ ನೌಕರರಿಗೆ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕು ಎಂದರು.
ಪಂಚಾಯತಿ ನೌಕರರಿಗೆ ಮತ್ತು ಸ್ವಚ್ಛವಾಹಿನಿ ನೌಕರರಿಗೆ ಪ್ರತಿ ತಿಂಗಳು ವೇತನ ಸಿಗುವಂತೆ ಮತ್ತು ನೌಕರರ ಪ್ರಮುಖ ಬೇಡಿಕೆ ಇತ್ಯರ್ಥವಾಗುವಂತೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ, ಮುಂಗಡ ಪತ್ರದ ಅಧಿವೇಶನದಲ್ಲಿ ಧ್ವನಿ ಎತ್ತಿ ಸರಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ದೊರೆ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಳಿಚಕ್ರ, ಗುರುಮಠಕಲ್ ತಾಲೂಕು ಅಧ್ಯಕ್ಷ ಮಹಾದೇವಪ್ಪ ಯಂಪಾಡ, ವಡಗೇರಿ ಅಧ್ಯಕ್ಷ ಮುನಿಯಪ್ಪ ಗೌಡ ಕುರುಕುಂದಾ, ಮಲ್ಲಿಕರ್ಜುನ ಬಂದಳ್ಳಿ, ಈರಣ್ಣ ಹಯ್ಯಾಳ ಬಿ, ಅಂಜಪ್ಪ ಅಜಲಾಪುರ, ಅನಿತಾ ಹಳಿಗೇರಾ, ಶರಣಮ್ಮ ಯರಗೋಳ, ಹಣಮಂತ್ರಾಯ ಗೋನಾಲ, ಮಲ್ಲಿಕಾರ್ಜುನ ವರ್ಕನಳ್ಳಿ, ಸಿದ್ರಾಮಪ್ಪ ತುಮಕೂರು, ಕಾಮೇಶ ಮುದ್ನಾಳ, ಶಿವಪ್ಪ ಠಾಣಗುಂದಿ, ಯಂಕಪ್ಪ, ಮುದುಕಪ್ಪ, ತಾಯಪ್ಪ, ವಾಸಯ್ಯ ಸ್ವಾಮಿ ಐಕೂರ ಸೇರಿ ಅನೇಕರಿದ್ದರು.
-22ವೈಡಿಆರ್19 : ಗ್ರಾಮ ಪಂಚಾಯತಿ ನೌಕರರ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸುವಂತೆ ಜಿಲ್ಲೆಯ ಶಾಸಕರಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರಲ್ಲಿ ತೆರಳಿ ಮನವಿ ಸಲ್ಲಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))