ಕನ್ನಡಪ್ರಭ ವಾರ್ತೆ ಮಧುಗಿರಿ
ಹಿಂದುಳಿದ ವರ್ಗಗಳ ಸಮಾಜ ಸುಧಾರಕ ಡಿ.ದೇವರಜಾ ಅರಸು ಅವರು ರೂಪಿಸಿದ ಯೋಜನೆಗಳಿಂದ ಇಂದು ನಾವು ಸಮಾಜದಲ್ಲಿ ಬದಲಾವಣೆ ಕಾರಣಲು ಸಾಧ್ಯವಾಗಿದೆ ಎಂದು ಎಸಿ ಗೋಟೂರು ಶಿವಪ್ಪ ತಿಳಿಸಿದರು.ಇಲ್ಲಿನ ಕಸಾಪ ಭವನದ ಕೆ.ಎನ್.ರಾಜಣ್ಣ ಅವರ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜು ಅರಸುರವರ 111 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿಯೊಂದು ವ್ಯವಸ್ಥೆಯನ್ನು ಕೊಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಸಮಾಜದಲ್ಲಿ ಅಸ್ರ್ಪಶ್ಯತೆ ಹಾಗೂ ಜೀತದಾಳು ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜೊತೆಯಲ್ಲಿ ರಾಜ್ಯದಿಂದ 26 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿದ್ದರು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ಮಾತನಾಡಿ, ಎಲ್.ಜಿ.ಹಾವನೂರು ಆಯೋಗ ರಚಿಸಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡಿದರು. 65 ಸಾವಿರ ಜೀತದಾಳುಗಳ ವಿಮುಕ್ತಿ, 518 ಹಾಸ್ಟಲ್ ಪ್ರಾರಂಭಿಸಿದರು. ಹಿಂದುಳಿದ ವರ್ಗಗಳ ಸಮುದಾಯದವರಿಗೆ ರಾಜಕೀಯ ಶಕ್ತಿ ತುಂಬಿದವರಲ್ಲಿ ಪ್ರಮುಖರಾಗಿದ್ದರು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆ.ಎನ್.ಜಯರಾಮಯ್ಯ ಅರಸು ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು.ಡಿಡಿಪಿಐ ಮಾಧವರೆಡ್ಡಿ,ಚೀಫ್ ಆಫೀಸರ್ ಸುರೇಶ್,ತಹಸೀಲ್ದಾರ್ ನಂದಿನಿ, ಎಇಇ ಸಂಪತ್ ಕುಮಾರ್,ಸಿಡಿಪಿಓ ಕುಮಾರ್ ನಾಯಕ ,ಪಿಡಬ್ಲೂಯುಡಿ ಇಇ ಹನುಮಂತರಾವ್, ಎಇಇ ಮಂಜುನಾಥ್, ಟಿಎಚ್ಓ ಡಾ. ಆನಂದ್, ನೊಂದಾಣಾಧಿಕಾರಿ ಸತೀಶ್,ಬೆಸ್ಕಾಂ ಎಇಇ ಮಾಯಕಣ್ಣ ನಾಯಕ,ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ಬಲಿಜ ಸಂಘದ ಕಾರ್ಯದರ್ಶಿ ಎಂ.ವೆಂಕಟರಾಮು,ಸೋಮ ವಂಶ ಆರ್ಯ ಕ್ಷತ್ರಿಯ ಟ್ರಸ್ಟ್ಕು ಕಾರ್ಯದರ್ಶಿ ಜಿ.ನಾರಾಯಣರಾಜು,ಕುರುಬರ ಸಂಘದ ಅಧ್ಯಕ್ಷ ಎಂ.ಡಿ.ಆನಂದ್ ಕುಮಾರ್,ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಈಶ್ವರಯ್ಯ ಹಾಗೂ ವಿದ್ಯಾರ್ಥಿಗಳು ಇದ್ದರು.
ಫೋಟೋ: