ಸಾರಾಂಶ
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುಕಲಾವಿದರಿಗೆ ಕಾಣಿಸಿದ ಎಲ್ಲದರಲ್ಲಿಯೂ ವಿಷಯ ವಸ್ತು ಸಿಗುತ್ತದೆ. ನಮಗೆ ಯಾವುದು ಅನುಪಯುಕ್ತವೋ ಅದು ಅವರಿಗೆ ಉಪಯುಕ್ತ, ಬೇಡವಾದ ಪ್ಲಾಸ್ಟಿಕ್ ಅವರಿಗೆ ಅರಿವು ಮೂಡಿಸುವ ಸಾಧನ ಅಥವಾ ಇನ್ನಾವುದೋ ಆಕೃತಿಗೆ ಪೂರಕ ವಸ್ತು, ನಮಗೇ ತಿಳಿಯದೇ ಚಟವಾಗಿರುವ ಮೊಬೈಲ್ ಎಲ್ಲವೂ ಕಲಾತ್ಮಕ ಜಗತ್ತು ಸೃಷ್ಟಿಸಲು ಇರುವ ಸರಕು.
ಇಂತಹದೊಂದು ಅದ್ಭುತ ಕಲಾ ಲೋಕವನ್ನು ಕಾವಾ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಸೃಷ್ಟಿಸಿದ್ದಾರೆ. ರಾಜ್ಯದ ಪ್ರತಿಷ್ಠಿತ ಕಲಾ ಕಾಲೇಜುಗಳಲ್ಲಿ ಒಂದಾದ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ದೇಶದಾದ್ಯಂತ ತನ್ನ ಶಿಷ್ಯ ಜಗತ್ತನ್ನು ಹಂಚಿದೆ.ಮೊಬೈಲ್‌ಎಂಬ ಮಾಯೆಯ ಮೋಹಕ್ಕೆ ಬಲಿಯಾದವರಿಗೆ ವಯಸ್ಸಿನ ಮಿತಿ ಇಲ್ಲ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಮೊಬೈಲ್‌ದಾಸರಾದವರೆ. ಎಳೆ ಮಗುವೂ ಮೊಬೈಲ್‌ಇಲ್ಲದೆ ಊಟ ಮಾಡಲಾರದ ಸ್ಥಿತಿ ತಲುಪಿದ್ದರೆ, ವೃದ್ಧರು ವಿವಿಧ ಆ್ಯಪ್‌ಗಳ ಮೂಲಕ ಮೋಸ ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ವಯಸ್ಕರು ತಮ್ಮ ಅತ್ಯಮೂಲ್ಯ ಸಮಯವನ್ನು ರೀಲ್ಸ್ ನಲ್ಲಿ ಕಳೆಯುತ್ತಿದ್ದಾರೆ.
ಸಮಯ ಕಳೆಯಲು ಹತ್ತಾರು ಮಾರ್ಗ, ದಾರಿ ತಪ್ಪಲು ನೂರಾರು ವೆಬ್‌ಸೈಟ್‌ಗಳು ಹೀಗೆ ಒಂದೆರಡಲ್ಲ. ಕೇವಲ ಮಾತುಕತೆಗೆ ಸೀಮಿತವಾಗಿದ್ದ ಮೊಬೈಲ್‌ಎಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬುದನ್ನು ಕಾವಾ ವಿದ್ಯಾರ್ಥಿಗಳು ತಮ್ಮ ಕಲಾಕೃತಿಯ ಮೂಲಕ ಉಣ ಬಡಿಸಿದ್ದಾರೆ.ಮೊಬೈಲ್‌ಹೇಳಿ ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಅವರ ಮಾನಸಿಕ ಬೆಳವಣಿಗೆಯನ್ನು ಹೇಗೆ ಕುಂಠಿತ ಮಾಡುತ್ತದೆ ಎಂಬುದನ್ನು ಥರ್ಮಾಕೋಲ್ ಬಳಸಿ ವಿವಿಧ ಆಕೃತಿ ರಚಿಸಿ ಅರಿವು ಮೂಡಿಸಿದ್ದಾರೆ.
ಮೊಬೈಲ್‌ದಾಸರಾಗಿ ಅನೇಕರು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ. ತಮ್ಮ ನೈಜ ಜೀವನದ ಸಂತಸವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಇಲ್ಲಿ ಅದ್ಭುತವಾಗಿ ತೆರೆದಿಟ್ಟಿದ್ದಾರೆ.ದಸರಾ ಅಂಗವಾಗಿ ಲಲಿತ ಕಲೆಗಳ ಉಪ ಸಮಿತಿಯ ಸಹಯೋಗದಲ್ಲಿ ಕಾವಾ ಆವರಣದಲ್ಲಿ ಆಯೋಜಿಸಿರುವ ಈ ಕಲಾಕೃತಿಗಳ ಪ್ರದರ್ಶನಕ್ಕೆ ಪ್ರತಿನಿತ್ಯ ನೂರಾರು ಮಂದಿ ಕಲಾಪ್ರಿಯರು ಭೇಟಿ ನೀಡುತ್ತಿದ್ದಾರೆ. ಕಲಾವಿದರಿಗೆ ಸಾಮಾಜಿಕ ಕಳಕಳಿ, ಸಾಮಾಜಿಕ ಜವಾಬ್ದಾರಿ ಇರಬೇಕು ಎಂಬುದನ್ನು ತಮ್ಮ ಕಲಾಕೃತಿಗಳ ಮೂಲಕವೇ ಇಲ್ಲಿ ಉಣಬಡಿಸಿದ್ದಾರೆ.
ಮಕ್ಕಳು ಪಬ್ಜಿ ಮತ್ತಿತರ ಗೇಮ್‌ಗಳಲ್ಲಿ ಮುಳುಗಿದ್ದರೆ, ವಯಸ್ಕರು ಇನ್‌ಸ್ಟ, ಫೇಸ್‌ಬುಕ್, ತ್ರೆಡ್, ಸ್ನಾಪ್‌ಮುಂತಾದವುಗಳ ದಾಸರಾಗಿ ಬದುಕು ನಡೆಸುತ್ತಿದ್ದಾರೆ. ಇನ್ನು ವೃದ್ಧರೂ ಕೂಡ ಫೇಸ್‌ನಲ್ಲಿ ಮುಳುಗಿ ಹೋಗಿದ್ದಾರೆ.ಇದರ ಜತೆಗೆ ಕರ್ನಾಟಕದ ಶಾಸ್ತ್ರೀಯ ಚಿತ್ರಕಲೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಮೈಸೂರು ಭಾಗಕ್ಕೆ ವಲಸೆ ಬಂದ ಕಲಾವಿದರು.
ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಮೈಸೂರು ಪ್ರದೇಶದ ಸ್ಥಳೀಯ ಸಂಪ್ರದಾಯದೊಡನೆ ಬೆರೆತು ಮೂಡಿದ ಚಿತ್ರಗಳು ಇವೆ.ದಸರಾ ವೈಭವ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಗಳ ವೈವಿಧ್ಯಮಯ ಚಿತ್ರದ ಪ್ರದರ್ಶನವೂ ತನ್ನ ಮೋಹಕತೆಯಿಂದ ಜನರನ್ನು ಸೆಳೆದುಕೊಳ್ಳುತ್ತಿದೆ. ದೇವತೆಗಳ ಮತ್ತು ಪುರಾಣ ಕಥೆಗಳನ್ನು ಆಧರಿಸಿ ಮೂಡಿಬಂದಿರುವ ಸಾಂಪ್ರದಾಯಿಕ ಕಲಾಕೃತಿಗಳು ಅಲ್ಲಿ ಕಾಣಸಿಗುತ್ತದೆ.
ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಶಿವ- ಪಾರ್ವತಿ, ವಿರಾಜಮಾನವಾಗಿ ಕುಳಿತಿರುವ ಚಾಮುಂಡೇಶ್ವರಿ, ಮಹಿಷಾಸುರ ಮರ್ದಿನಿ, ಕೃಷ್ಣ, ವಿಷ್ಣು, ಬುದ್ಧ ಸೇರಿದಂತೆ 40 ಚಿತ್ರಗಳನ್ನು 30ಕ್ಕೂ ಹೆಚ್ಚು ಕಲಾವಿದರು ಚಿತ್ರಿಸಿದ್ದಾರೆ.