ಶಿಲ್ಪಿ ಅರುಣ್‌ ಯೋಗಿರಾಜ್‌, ಮೊಯ್ಲಿ, ಹೇಮಾ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2024, 02:00 AM IST

ಶಿಲ್ಪಿ ಅರುಣ್‌ ಯೋಗಿರಾಜ್‌, ಮೊಯ್ಲಿ, ಹೇಮಾ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಪ್ರತಿಷ್ಠಿತ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಹಿರಿಯ ನಟಿ ಹೇಮಾ ಚೌಧರಿ, ಅಯೋಧ್ಯೆ ಶ್ರೀರಾಮನ ಶಿಲ್ಪಿ ಅರುಣ್‌ ಯೋಗಿರಾಜ್‌ ಸೇರಿದಂತೆ 69 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭದ ಎ.ಜಿ.ಕಾರಟಗಿ ಅವರಿಗೆ ಪ್ರಶಸ್ತಿ ಕೊಪ್ಪಳ ಜಿಲ್ಲೆ ಕಾರಟಗಿಯ ಬಿಡಿ ವರದಿಗಾರ ಎ.ಜಿ.ಕಾರಟಗಿ

----ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಪ್ರತಿಷ್ಠಿತ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಹಿರಿಯ ನಟಿ ಹೇಮಾ ಚೌಧರಿ, ಅಯೋಧ್ಯೆ ಶ್ರೀರಾಮನ ಶಿಲ್ಪಿ ಅರುಣ್‌ ಯೋಗಿರಾಜ್‌ ಸೇರಿದಂತೆ 69 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿಯ ಕನ್ನಡಪ್ರಭದ ಬಿಡಿ ವರದಿಗಾರ ಅಮರ ಗುಂಡಪ್ಪ ಕಾರಟಗಿ (ಎ.ಜಿ.ಕಾರಟಗಿ) ಅವರಿಗೂ ಪ್ರಶಸ್ತಿ ಸಂದಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಈ ಮಾಹಿತಿ ನೀಡಿದ್ದು, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1575 ನೇರ ಅರ್ಜಿಗಳು ಬಂದಿದ್ದವು. ಸೇವಾ ಸಿಂಧೂ ಪೋರ್ಟಲ್‌ನಲ್ಲಿ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿ ಆಯ್ಕೆಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಬಯಲಾಟ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ಬೀದರ್‌ ಜಿಲ್ಲೆಯ ಅಂಧ ಜಾನಪದ ಕಲಾವಿದ ನರಸಿಂಹಲು ಹಾಗೂ 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ಪಟ್ಟಿ ಇಂತಿದೆ:

ಜಾನಪದ:

ಇಮಾಮಸಾಬ ಎಂ.ವಲ್ಲೆಪನವರ (ಧಾರವಾಡ), ಅಶ್ವರಾಮಣ್ಣ (ಬಳ್ಳಾರಿ), ಕುಮಾರಯ್ಯ (ಹಾಸನ), ವೀರಭದ್ರಯ್ಯ(ಚಿಕ್ಕಬಳ್ಳಾಪುರ), ಅಂಧ ಕಲಾವಿದ ನರಸಿಂಹಲು (ಬೀದರ), ಬಸವರಾಜ ಸಂಗಪ್ಪ ಹಾರಿವಾಳ(ವಿಜಯಪುರ), ಎಸ್‌.ಜಿ. ಲಕ್ಷ್ಮೀದೇವಮ್ಮ(ಚಿಕ್ಕಮಗಳೂರು), ಪಿಚ್ಚಳ್ಳಿ ಶ್ರೀನಿವಾಸ(ಕೋಲಾರ), ಲೋಕಯ್ಯ ಶೇರ (ದಕ್ಷಿಣ ಕನ್ನಡ).

ಚಲನಚಿತ್ರ-ಕಿರುತೆರೆ:

ಹೇಮಾ ಚೌಧರಿ ಮತ್ತು ಎಂ.ಎಸ್‌.ನರಸಿಂಹಮೂರ್ತಿ (ಬೆಂಗಳೂರು ನಗರ).

ಸಂಗೀತ:

ಪಿ.ರಾಜಗೋಪಾಲ, ಎ.ಎನ್‌.ಸದಾಶಿವಪ್ಪ (ರಾಯಚೂರು). ನೃತ್ಯ: ವಿದುಷಿ ಲಲಿತಾರಾವ್‌ (ಮೈಸೂರು).

ಆಡಳಿತ:

ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ.ರಂಗನಾಥ್‌ (ಬೆಂಗಳೂರು ನಗರ).

ಸಮಾಜಸೇವೆ:

ವೀರಸಂಗಯ್ಯ (ವಿಜಯನಗರ), ಹೀರಾಚಂದ್‌ ವಾಗ್ಮಾರೆ (ಬೀದರ್‌), ಮಲ್ಲಮ್ಮ ಸೂಲಗಿತ್ತಿ (ರಾಯಚೂರು), ದಿಲೀಪ್‌ ಕುಮಾರ್‌ (ಚಿತ್ರದುರ್ಗ).

ಸಂಕೀರ್ಣ:

ಹುಲಿಕಲ್ ನಟರಾಜ(ತುಮಕೂರು), ಡಾ,ಎಚ್.ಆರ್.‌ ಸ್ವಾಮಿ (ಚಿತ್ರದುರ್ಗ), ಆ.ನ. ಪ್ರಹ್ಲಾದ ರಾವ್ (ಕೋಲಾರ), ಕೆ. ಅಜೀತ್ ಕುಮಾರ್ ರೈ (ಬೆಂಗಳೂರು ನಗರ), ಇರ್ಫಾನ್ ರಜಾಕ್ (ಬೆಂಗಳೂರು ನಗರ), ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ(ಹಾವೇರಿ).

ಹೊರನಾಡು-ಹೊರದೇಶ:

ಕನ್ನಯ್ಯ ನಾಯ್ಡು, ತುಂಬೆ ಗ್ರೂಪ್ಸ್‌ನ ಡಾ.ತುಂಬೆ ಮೊಹಿಯುದ್ದೀನ್‌ (ಯುಎಇ), ಚಂದ್ರಶೇಖರ ನಾಯಕ್‌ (ಅಮೆರಿಕ),

ಪರಿಸರ:

ಆಲ್ಮಿತ್ರಾ ಪಟೇಲ್‌ (ಬೆಂಗಳೂರು ನಗರ)

ಕೃಷಿ:

ಶಿವನಾಪುರ ರಮೇಶ (ಬೆಂಗಳೂರು ಗ್ರಾಮಾಂತರ), ಪುಟ್ಟೀರಮ್ಮ (ಚಾಮರಾಜನಗರ).

ಮಾಧ್ಯಮ:

ಎನ್‌.ಎಸ್‌.ಶಂಕರ್‌(ದಾವಣಗೆರೆ), ಸನತ್‌ಕುಮಾರ್‌ ಬೆಳಗಲಿ(ಬಾಗಲಕೋಟೆ), ಎ.ಜಿ.ಕಾರಟಗಿ(ಕೊಪ್ಪಳ), ರಾಮಕೃಷ್ಣ ಬಡಶೇಶಿ(ಕಲಬುರಗಿ).

ವಿಜ್ಞಾನ-ತಂತ್ರಜ್ಞಾನ:

ಪ್ರೊ.ಟಿ.ವಿ.ರಾಮಚಂದ್ರ ಮತ್ತು ಸುಬ್ಬಯ್ಯ ಅರುಣನ್‌(ಬೆಂಗಳೂರು ನಗರ), ಸಹಕಾರ: ವಿರೂಪಾಕ್ಷಪ್ಪ ನೇಕಾರ(ಬಳ್ಳಾರಿ), ಯಕ್ಷಗಾನ: ಕೇಶವ್‌ ಹೆಗಡೆ (ಉತ್ತರ ಕನ್ನಡ), ಸೀತಾರಾಮ ತೋಳ್ಪಾಡಿ(ದಕ್ಷಿಣ ಕನ್ನಡ), ಬಯಲಾಟ: ಅಂಧ ಕಲಾವಿದ ಸಿದ್ದಪ್ಪ ಕರಿಯಪ್ಪ ಕುರಿ (ಬಾಗಲಕೋಟೆ), ನಾರಾಯಣಪ್ಪ ಶಿಳ್ಳೇಕ್ಯಾತ(ವಿಜಯನಗರ),

ರಂಗಭೂಮಿ:

ಸರಸ್ವತಿ ಜುಲೈಕ ಬೇಗಂ(ಯಾದಗಿರಿ), ಎಚ್‌.ಬಿ.ಓಬಳೇಶ್(ಚಿತ್ರದುರ್ಗ), ಭಾಗ್ಯಶ್ರೀ ರವಿ (ಕೋಲಾರ), ಡಿ.ರಾಮು(ಮೈಸೂರು), ಎಚ್‌.ಜನಾರ್ದನ್ (ಮೈಸೂರು), ಹನುಮಾನದಾಸ ವ. ಪವಾರ (ಬಾಗಲಕೋಟೆ).

ಸಾಹಿತ್ಯ:

ಬಿ.ಟಿ.ಲಲಿತಾ ನಾಯಕ್(ಚಿಕ್ಕಮಗಳೂರು), ಅಲ್ಲಮಪ್ರಭು ಬೆಟ್ಟದೂರು(ಕೊಪ್ಪಳ), ಡಾ.ಎಂ.ವೀರಪ್ಪ ಮೊಯ್ಲಿ(ಉಡುಪಿ), ಹನುಮಂತರಾವ್‌ ದೊಡ್ಡಮನಿ (ಕಲಬುರಗಿ), ಡಾ.ಬಾಳಾಸಾಹೇಬ್ ಲೋಕಾಪುರ(ಬೆಳಗಾವಿ), ಬೈರಮಂಗಲ ರಾಮೇಗೌಡ(ರಾಮನಗರ), ಡಾ.ಪ್ರಶಾಂತ್‌ ಮಾಡ್ತಾ (ದಕ್ಷಿಣ ಕನ್ನಡ).

ಶಿಕ್ಷಣ:

ಡಾ.ವಿ.ಕಮಲಮ್ಮ(ಬೆಂಗಳೂರು ನಗರ), ಪ್ರೊ. ರಾಜೇಂದ್ರ ಶೆಟ್ಟಿ(ದಕ್ಷಿಣ ಕನ್ನಡ), ಡಾ.ಪದ್ಮಾಶೇಖರ್‌(ಕೊಡಗು). ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್‌(ಬೆಂಗಳೂರು ನಗರ), ಗೌತಮ್ ವರ್ಮ(ರಾಮನಗರ), ಆರ್. ಉಮಾದೇವಿ (ಬೆಂಗಳೂರು ನಗರ). ನ್ಯಾಯಾಂಗ: ಬಾಲನ್‌(ಕೋಲಾರ), ಶಿಲ್ಪಕಲೆ: ಬಸವರಾಜ ಬಡಿಗೇರ(ಬೆಂಗಳೂರು ನಗರ), ಅರುಣ್‌ ಯೋಗಿರಾಜ್‌ (ಮೈಸೂರು), ಚಿತ್ರಕಲೆ: ಪ್ರಭು ಹರಸೂರು(ತುಮಕೂರು) ಮತ್ತು ಕರಕುಶಲ: ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ ಸಿರಿವಂತೆ(ಶಿವಮೊಗ್ಗ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

-----

₹5 ಲಕ್ಷ, 25 ಗ್ರಾಂ ಚಿನ್ನ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ತಲಾ 5 ಲಕ್ಷ ರು.ನಗದು, 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ನ.1ರಂದು ವಿಧಾನಸೌಧದ ಎದುರು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.