ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಧಾನಮಂತ್ರಿಗಳ ಆಶಯದಂತೆ ಭಾರತ ಸರ್ಕಾರದ ಕ್ರೀಡಾ ಸಚಿವಾಲಯ, ಸಾಯಿ ಸೈಕ್ಲಿಂಗ್‌ ಫೆಡರೆಷನ್‌ ಆಫ್‌ ಇಂಡಿಯಾ, ಕರ್ನಾಟಕ ಸ್ಟೇಟ್ ಸ್ಪೋರ್ಟ್ಸ್‌ ಅಥಾರಿಟಿ, ಕರ್ನಾಟಕ ಸೈಕ್ಲಿಂಗ್‌ ಅಸೋಸಿಯೆಷನ್‌ ಹಾಗೂ ಬೆಳಗಾವಿ ಡಿಸ್ಟಿಕ್ಟ್‌ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೆಷನ್‌ ಸಹಯೋಗದಲ್ಲಿ ನಗರದ ಡಬಲ್ ರೋಡ್, ಹನುಮಾನ ನಗರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸಿಟಿ ಸೈಕ್ಲಿಂಗ್ ಲೀಗ್ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ ಮಹಾಪೋಷಕರು ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ವಿವೇಕರಾವ ವಸಂತರಾವ ಪಾಟೀಲ ಸೈಕಲ್ ರೇಸ್‌ಗೆ ಚಾಲನೆ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಸೈಕಲ್ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸ್ಪರ್ಧೆಯ ನಂತರ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ ಆಯೋಜಿಸಲಾಯಿತು. ವಿಶೇಷವಾಗಿ ರಾಯಬಾಗದಿಂದ ಆಗಮಿಸಿದ 100ಕ್ಕೂ ಹೆಚ್ಚು ಸೈಕಲ್ ಕ್ರೀಡಾಪಟುಗಳು ಭಾಗವಹಿಸಿದ್ದರು. ಬೆಳಗಾವಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಅನಿಲ ಎಂ.ಪೋತದಾರ ಸಂಪೂರ್ಣ ಸ್ಪರ್ಧೆಯ ಉಸ್ತುವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.ಬೆಳಗಾವಿ ದಕ್ಷಿಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಎಸ್.ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಬಿಇಒ ಬೆಳಗಾವಿ, ಪೊಲೀಸ್ ಇಲಾಖೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಸಹಕಾರ ನೀಡಿದವು.ಇದೇ ವೇಳೆ, ಸ್ಪರ್ಧೆಯ ಸಂಘಟನೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಆರ್.ಎಚ್.ಪೂಜಾರಿ ಹಾಗೂ ಬೆಳಗಾವಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನ ಎಲ್ಲ ಪದಾಧಿಕಾರಿಗಳು ಸಮರ್ಥವಾಗಿ ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಇದಲ್ಲದೆ ಟಿ24 ಕಂಪನಿಯವರು 300 ಟಿ-ಶರ್ಟ್‌ಗಳು ಹಾಗೂ ಸಾಫ್ಟ್ ಡ್ರಿಂಕ್ಸ್‌ಗಳನ್ನು ನೀಡುವ ಮೂಲಕ ಸೈಕ್ಲಿಂಗ್‌ಗೆ ಪ್ರೋತ್ಸಾಹ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದರು.ಈ ಕಾರ್ಯಕ್ರಮವು ಮಹಿಳೆಯರಲ್ಲಿ ಸೈಕ್ಲಿಂಗ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಕ್ರೀಡಾ ಸಂಸ್ಕೃತಿಯ ಅಭಿವೃದ್ಧಿಗೆ ಉತ್ತೇಜನ ನೀಡಿತು.ಬೆಳಗಾವಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆರ್‌.ಎಚ್‌.ಪೂಜಾರಿ, ಸಿದ್ದಪ್ಪ ಕೊಟ್ರೆ, ಎಂ.ಪಿ.ಮರ್ನೂರ, ಅಶೋಕ ನಾಯಕ, ಬಾಳು ಸುಳೆಬಾವಿಕರ, ಗಂಗಾಧರ ಕೊಟ್ರೆ, ಪುಂಡಲಿಕ ಇಟ್ನಾಳ, ಹೊಳೆಯಪ್ಪ ದಡ್ಡಿ, ಎಲ್‌.ಎಚ್‌.ಪೂಜಾರಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸೈಕಲಿಂಗ್‌ ಪ್ರೇಮಿಗಳು ಉಪಸ್ಥಿತರಿದ್ದರು. ಮಹಿಳೆಯರ ವಿಭಾಗ

14 ವರ್ಷ: ಪ್ರಜ್ಞಾ ವಿ.ಕುಟ್ರೆ, ನಿಸರ್ಗ ಎಸ್‌.ತೆಲಿ, ಸರ್ಣಿಕಾ ಎಸ್‌.ಸುತಾರ

16 ವರ್ಷ: ಋುತ್‌ ಎಫ್‌.ಪಿಂಟೋ, ಪ್ರಿಯಾಂಕಾ ಪಿ.ಕಿರ್ಜಾತ, ಪ್ರಾರ್ಜಲಿ ಜಿ. ಮಾಯನ್ನಾಚೆ


18 ವರ್ಷ: ದಾನೇಶ್ವರಿ ವಿ.ಪೆಟ್ಕರ್‌, ಗೌರಿ ಎಂ.ಪಂಚಗೆ, ದಿವ್ಯಾ ಜಿ.ಖೋತ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡರು.ಆರೋಗ್ಯಪೂರ್ಣ ಜೀವನಕ್ಕೆ ಸೈಕ್ಲಿಂಗ್‌ ಅತ್ಯಂತ ಮಹತ್ವದ್ದಾಗಿದ್ದು, ನಿತ್ಯ ಸೈಕ್ಲಿಂಗ್‌ ಮಾಡುವುದರಿಂದ ಶಾಶ್ವಕೋಶ ಸೇರಿದಂತೆ ಅಂಗಾಂಗಗಳ ಸದೃಢತೆಗೆ ಪೂರಕವಾದ ವ್ಯಾಯಾಮ ದೊರೆಯಲಿದೆ. ಹೀಗಾಗಿ ಸೈಕಲ್‌ ಬಳಕೆ ಮಾಡುವ ಮೂಲಕ ಪಿಟ್‌ ಇಂಡಿಯಾ ಕಲ್ಪನೆಗೆ ಬಲ ತುಂಬಬೇಕು. ಮಾಲಿನ್ಯ ಮುಕ್ತ ವಾತಾವರಣಕ್ಕೆ ಎಲ್ಲರೂ ಕೈ ಜೋಡಿಸಬೇಕು.

-ವಿವೇಕರಾವ್ ವಸಂತರಾವ ಪಾಟೀಲ,

ವಿಧಾನ ಪರಿಷತ್‌ನ ಮಾಜಿ ಸದಸ್ಯರು.