ಕನ್ನಡಪ್ರಭ ವಾರ್ತೆ ಸಾವಳಗಿ

ರಸ್ತೆ, ಒಳಚರಂಡಿ, ಸಮುದಾಯ ಭವನ, ಆರೋಗ್ಯ, ನೀರಾವರಿ, ಶಿಕ್ಷಣ ಮತ್ತು ವಿದ್ಯುತ್ತ ಸೇರಿದಂತೆ ಹಲವು ಕಾಮಗಾರಿ ಕೈಗೊಂಡು ಅಥಣಿ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಭಾನುವಾರ ₹ 65 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆ ಹಲವು ಸಾಧನೆ ಮಾಡಿದೆ. ಅಥಣಿ ಕ್ಷೇತ್ರಕ್ಕೆ ಸರ್ಕಾರದಿಂದ ₹ 2500 ಕೋಟಿಗಿಂತಲೂ ಹೆಚ್ಚಿನ ನೀರಾವರಿ, ಶಾಲಾ ಕೊಠಡಿ, ಸಮುದಾಯ ಭವನ, ರಸ್ತೆ, ವಿದ್ಯುತ್ ಘಟಕಗಳು, ಕುಡಿಯುವ ನೀರು, ಶಾಲಾ-ಕಾಲೇಜಗಳ ಕಟ್ಟಡ ಸೇರಿ ಹಲವು ಕಾಮಗಾರಿಗಳನ್ನು ಕೈಗೊಂಡು ರೈತರ, ಕೂಲಿ ಕಾರ್ಮಿಕರ ಏಳೆಗಾಗಿ ಶ್ರಮಿಸುತ್ತಿದೆ. ಬರುವ ದಿನಗಳಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತಂದು ಆಥಣಿ ಕ್ಷೇತ್ರವನ್ನು ಇನ್ನಷ್ಟು ಸುಂದರ, ಸ್ವಚ್ಛ ಹಾಗೂ ಸುಸಜ್ಜಿತವಾಗಿ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿಯೇ ಮಾದರಿ ಕ್ಷೇತವನ್ನಾಗಿ ಮಾಡಲಾಗುವದು ಎಂದು ಭರವಸೆ ನೀಡಿದರು.

ಪಿಕೆಪಿಎಸ್ ಅಧ್ಯಕ್ಷ ಕಳಸಪ್ಪ ಹೊನಗೌಡ ಮಾತನಾಡಿ, ಶಾಸಕ ಲಕ್ಷ್ಮಣ ಸವದಿಯವರು ಅಥಣಿ ಮತಕ್ಷೇತದ ಜನರ ಏಳೆಗ್ಗೆ ಹಲವು ಯೋಜನೆಗಳನ್ನು ತಂದು ಆಸರೆಯಾಗಿದ್ದಾರೆ. ಅವರು ಅಭಿವೃದ್ಧಿಯ ಹರಿಕಾರರು ಎಂದರು.

ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಸಮುಧಾಯ ಆರೋಗ್ಯ ಅಧಿಕಾರಿ ಖಂಡುಬಾ ಶಿಂಧೆ, ಮುಖಂಡರಾದ ರಾವಸಾಬ ಹೊನಗೌಡ, ಗುಳಪ್ಪ ಗೌಡಪ್ಪನವರ, ಶಂಕರ ಕೆಂಚಗೊಂಡ, ಸದಾಶಿವ ಹೊನಗೌಡ, ಶಿವಾನಂದ ಪಾಟೀಲ, ಸಾನಿಂಗಗೌಡ ಹೊನಗೌಡ,ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಸಮುಧಾಯ ಆರೋಗ್ಯ ಅಧಿಕಾರಿ ಖಂಡುಬಾ ಶಿಂಧೆ, ಮುಖಂಡರಾದ ರಾವಸಾಬ ಹೊನಗೌಡ, ಗುಳಪ್ಪ ಗೌಡಪ್ಪನವರ, ಶಂಕರ ಕೆಂಚಗೊಂಡ, ಸದಾಶಿವ ಹೊನಗೌಡ, ಶಿವಾನಂದ ಪಾಟೀಲ, ಸಾನಿಂಗಗೌಡ ಹೊನಗೌಡ, ಶಿವಲಿಂಗ ಹೋನಗೌಡ, ಧರೇಪ್ಪ ಬ್ಯಾಡರಟ್ಟಿ, ಸಿದರಾಯ ಜಮಖಂಡಿ, ಬಸವರಾಜ ಕೆಂಚಗೊಂಡ, ಅನಿಲ ಶಿಂದೆ, ರಾವಸಾಬ ಹೊನಗೌಡ, ಗುಳಪ್ಪ ಗೌಡಪ್ಪನವರ, ಸುರೇಶ ಗುಳಪ್ಪನವರ, ಗುತ್ತಿಗೆದಾರ ಅನಿಲ ಶಿಂದೆ, ಸಂತೋಷ ಗಾಲಿ, ವಿನೋದ ಪಾಟೀಲ, ವಿಜಯಶ್ರೀ ದುಮಕನಾಳ, ಗೀತಾ ಹಟ್ಟಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.