ಶೃಂಗೇರಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶೃಂಗೇರಿಹಿಂದೂ ದರ್ಮ, ಸಂಸ್ಕೃತಿ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಹಿಂದೂಗಳ ಭಾವನೆ ಜತೆ ಚೆಲ್ಲಾಟವಾಡುತ್ತಿದ್ದಾರೆ. ದೌರ್ಜನ್ಯ, ಲವ್ ಜಿಹಾದ್, ಗೋಹತ್ಯೆ,ಮತಾಂಧತೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಭದ್ರಾವತಿ ವಿಶ್ವ ಹಿಂದೂ ಪರಿಷತ್ ಸಂಘಟನೆ ರಾಘವನ್ ವಡಿವೇಲ್ ಎಚ್ಚರಿಸಿದರು.
ಶೃಂಗೇರಿಯಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್, ಬಜರಂಗದಳ ಆಯೋಜಿಸಿದ ಲವ್ ಜಿಹಾದ್, ಗೋಹತ್ಯೆ,ಮತಾಂತರ ಚಟುಟಿಕೆಗಳ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಗೋವು ಹಿಂದೂಗಳಿಗೆ ಪೂಜನೀಯ. ಗೋವು ಶ್ರೇಷ್ಟ. ಇತ್ತೀಚಿನ ದಿನಗಳಲ್ಲಿ ಅಕ್ರಮ ಗೋ ಸಾಗಟ, ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಸಾವಿರಾರು ಕೋಟಿ ರು. ದಂಧೆ ನಡೆಯುತ್ತಿದೆ. ಮನೆಯಲ್ಲಿ ಕಟ್ಟಿ ಹಾಕಿದ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಕೇಸ್ ಹಾಕಲಾಗುತ್ತಿದೆ.ಹಿಂದೂ ಧರ್ಮ, ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಗೋಹತ್ಯೆ ತಡೆಗೆ ಕೇಂದ್ರ, ರಾಜ್ಯಗಳಲ್ಲಿ ಕಾನೂನುಗಳಿದ್ದರೂ ನಡೆಯುತ್ತಿದೆ. ಅಮಾಯಕ ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಹೆಸರಲ್ಲಿ ಕಾಮಾಂಧರಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಯುವತಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆ, ದೌರ್ಯನ್ಯ ನಡೆಯುತ್ತಿದೆ.
ಹಿಂದೂ ಧರ್ಮ ಗುರಿಯಾಗಿಸಿಕೊಂಡು ವಿವಿಧ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಶಿಕ್ಷಣ, ಆರ್ಥಿಕತೆ ಹೆಸರಲ್ಲಿ ಮತಾಂತರ ನಡೆಯುತ್ತಿದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಮಕ್ಕಳಿಗೆ ಹಣೆಗೆ ಕುಂಕುಮ, ಬಳೆ ಹಾಕುವ ಹಿಂದೂ ಸಂಸ್ಕೃತಿ ಅನುಸರಿಸದಂತೆ ಒತ್ತಡ ಹೇರಲಾಗುತ್ತಿದೆ. ಈಗಾಗಲೇ ನಾಗಾಲ್ಯಾಂಡ್ ನಲ್ಲಿ ಶೇ 90 ರಷ್ಟು ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆ. ಹಿಂದೂಗಳು ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಮತಾಂತರಿಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.
ದಿವೀರ್ ಮಲ್ನಾಡ್ ಪ್ರಾಸ್ತಾವಿಕ ಮಾತನಾಡಿ ಶೃಂಗೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಲವ್ ಜಿಹಾದ್, ಮತಾಂತರ, ಗೋಹತ್ಯೆ ಹೆಚ್ಚಿದ್ದು ಇತ್ತೀಚೆಗೆ ಶೃಂಗೇರಿಯಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಮೇಲೆ ಅನ್ಯ ಕೋಮಿನ ವ್ಯಕ್ತಿ ಲೈಂಗಿಕ ಕಿರುಕುಳ ನಡೆಸಿದ ಹೇಯ ಕೃತ್ಯ ನಡೆದಿದೆ. ಹಿಂದೂ ಸಂಘಟಕರು ಒಗ್ಗಟ್ಟಾಗಿ ಇಂತಹ ನೀಚ ಕೃತ್ಯ ನಡೆಸಿದವನನ್ನು ಪೊಲೀಸರು ಬಂಧಿಸುವಲ್ಲಿ ಒತ್ತಡ ಹಾಕಿ ಯಶಸ್ವಿಯಾದರು. ನಾವು ಇಂತಹ ದುಷ್ಟಶಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಪಟ್ಟಣದ ಬಸ್ ನಿಲ್ದಾಣದಿಂದ ವೆಲ್ ಕಂ ಗೇಟ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಜರಂಗದಳ ಜಿಲ್ಲಾ ಘಟಕದ ಮಹೇಂದ್ರ, ಹಿಂದೂ ಪರ ಸಂಘಟನೆಯ ಅಜಿತ್ ಕಳಸ, ಮದನ್, ವಿಶ್ವಹಿಂದೂ ಪರಿಷತ್ ನ ಕೆ.ಪಿ.ಸುರೇಶ್ ಕುಮಾರ್, ಮಾಜಿ ಸಚಿವ ಡಿ.ಎನ್.ಜೀವರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.29 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದಲ್ಲಿ ವಿಶ್ವಹಿಂದೂ ಪರಿಷತ್,ಬಜರಂಗದಳ ಸಂಘಟನೆ ಲವ್ ಜಿಹಾದ್, ಗೋಹತ್ಯೆ,ಮತಾಂತರ ಚಟುವಟಿಕೆ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.