ಬಿ.ಎಸ್.ಯಡಿಯೂರಪ್ಪ ಮೇಲೆ ಆಯನೂರು ಮಂಜುನಾಥ್ ಆರೋಪ ಸಲ್ಲದು : ಹರತಾಳು ಹಾಲಪ್ಪ ಕಿಡಿ

| Published : Sep 04 2024, 01:54 AM IST / Updated: Sep 04 2024, 12:35 PM IST

ಬಿ.ಎಸ್.ಯಡಿಯೂರಪ್ಪ ಮೇಲೆ ಆಯನೂರು ಮಂಜುನಾಥ್ ಆರೋಪ ಸಲ್ಲದು : ಹರತಾಳು ಹಾಲಪ್ಪ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಹ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ಅವರ ಸಖ್ಯ ತೊರೆದ ನಂತರ ಎಂದೂ ಸಹ ಅವರ ಬಗ್ಗೆ ಮಾತನಾಡಲಿಲ್ಲ, ಹಾಗೆ ಹಿರಿಯ ಬಗ್ಗೆ ಹಾಗೆ ಅವಹೇಳನಕಾರಿ ಹೇಳಿಕೆ ಸಲ್ಲದು ಎಂದು ಹರತಾಳು ಹಾಲಪ್ಪ ಹೇಳಿದರು.

 ಶಿವಮೊಗ್ಗ : ಬಿ.ಎಸ್.ಯಡಿಯೂರಪ್ಪ ಅವರಿಂದಲೇ ರಾಜಕೀಯವಾಗಿ ಬೆಳೆದು ಹಲವು ಸ್ಥಾನಮಾನಗಳನ್ನು ಕಂಡ ಆಯನೂರು ಮಂಜುನಾಥ್ ಈಗ ಅವರ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿಕಾರಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿನ ಕೆಲವು ನಾಯಕರ ಮನವನ್ನು ಮೆಚ್ಚಿಸುವುದಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪನವರು ಬೇರೆ ರಾಜಕಾರಣಿಗಳಂತೆ ತಾಂತ್ರಿಕವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದವರಲ್ಲ. ನ್ಯಾಯಾ ಲಯದಲ್ಲಿ ತಮ್ಮ ಎಲ್ಲಾ ಹಗರಣಗಳ ವಿಚಾರಣೆಯನ್ನು ಎದುರಿಸಿ ಕ್ಲೀನ್ ಚಿಟ್ ತೆಗೆದುಕೊಂಡವರು. ಅಂತಹ ನಾಯಕರ ಬಗ್ಗೆ ಮತ್ತು ಹಿರಿತನದ ಬಗ್ಗೆ ಅರಿವಿಲ್ಲದೆ ಆಯನೂರು ಮಂಜುನಾಥ್ ರವರು ಬಹಳ ಹಗುರವಾಗಿ ಮಾತನಾಡಿದ್ದಾರೆ ಇದನ್ನು ನಮ್ಮ ಪಕ್ಷ ಖಡಾಖಂಡಿತವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಎಸ್.ರುದ್ರೇಗೌಡ ಮಾತನಾಡಿ, ಯಾರಿಂದ ಆಯನೂರು ಮಂಜುನಾಥ್ ರಾಜಕೀಯವಾಗಿ ಬೆಳೆದರೋ ಅವರ ಬಗ್ಗೆಯೇ ಕೆಟ್ಟ ಭಾವನೆ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಬೇಡದ ವಿಷಯವನ್ನ ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮರೆಮಾಚಲು ಯತ್ನಿಸಿದ್ದಾರೆ. ಒಬ್ಬ ಹಿರಿಯ ನಾಯಕನ ಬಗ್ಗೆ ಆಯನೂರು ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ಬಿ.ಎಸ್.ವೈ. ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ದತ್ತಾತ್ರಿ. ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಇದ್ದರು.

‘ಗರಡಿ’ಗೆ ಗೌರವ ಕೊಡುವುದು ನಮ್ಮ ಬಾಧ್ಯತೆ:

ನಾನು ಸಹ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ಅವರ ಸಖ್ಯ ತೊರೆದ ನಂತರ ಎಂದೂ ಸಹ ಅವರ ಬಗ್ಗೆ ಮಾತನಾಡಲಿಲ್ಲ. ಕಾಗೋಡು ತಿಮ್ಮಪ್ಪನವರ ಬಗ್ಗೆಯೂ ಕೂಡ ನಾನು ಎಂದೂ ಮಾತನಾಡಿದವನಲ್ಲ. ಏಕೆಂದರೆ ಅವರ ಹಿರಿತನವನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು.