ಬಾಬು ರಾಜೇಂದ್ರಪ್ರಸಾದ್ ಸ್ಮಾರಕ ಪ್ರೌಢಶಾಲೆಗೆ ಚಾಂಪಿಯನ್ ಶಿಪ್

| Published : Sep 04 2024, 01:54 AM IST

ಬಾಬು ರಾಜೇಂದ್ರಪ್ರಸಾದ್ ಸ್ಮಾರಕ ಪ್ರೌಢಶಾಲೆಗೆ ಚಾಂಪಿಯನ್ ಶಿಪ್
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಶಾಲೆ ಆಡಳಿತ ಮಂಡಳಿ ವರ್ಗ, ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರು ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್ .ಪೇಟೆ

ತಾಲೂಕಿನ ಅಕ್ಕಿಹೆಬ್ಬಾಳು ಶಾಲಾ ಆವರಣದಲ್ಲಿ ನಡೆದ 2024- 25 ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೀರುವಳ್ಳಿಯ ಬಾಬು ರಾಜೇಂದ್ರ ಪ್ರಸಾದ್ ಸ್ಮಾರಕ ಪ್ರೌಢಶಾಲೆ ಮಕ್ಕಳು ಸತತ 3ನೇ ಬಾರಿಗೆ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡರು.

ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಆಶ್ರಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ಕ್ರೀಡಾಪಟುಗಳು ಆಟ ಮತ್ತು ಮೇಲಾಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ 105 ಅಂಕ ಗಳಿಸಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಶಾಲೆ ಆಡಳಿತ ಮಂಡಳಿ ವರ್ಗ, ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರು ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಮೋದ್ ಮತ್ತು ತಂಡ ಪ್ರಥಮ, ಖೋ ,ಖೋ ಪ್ರಜ್ವಲ್ ಸಿ.ಎನ್. ಮತ್ತು ತಂಡ ಪ್ರಥಮ ಸ್ಥಾನ, ಪ್ರಜ್ವಲ್ ಸಿ.ಎನ್ ಚಕ್ರ ಎಸೆತ ಪ್ರಥಮ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರೀತಿ ಮತ್ತು ತಂಡ ಪ್ರಥಮ, ಖೋ ಖೋ ಸೌಂದರ್ಯ ಮತ್ತು ತಂಡ ಪ್ರಥಮ, ಸಂಧ್ಯಾ ಬಿ.ಡಿ ತ್ರಿವಿಧ ಜಿಗಿತ ಪ್ರಥಮ, ಲಾಂಗ್ ಜಂಪ್ ಪ್ರಥಮ ಹಾಗೂ 100 ಮೀಟರ್ ಓಟ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ.

ಹೇಮಲತಾ ತ್ರಿವಿಧ ಜಿಗಿತ ತೃತೀಯ, ಮಾನ್ಯ 100 ಮೀಟರ್ ಓಟ ದ್ವಿತೀಯ, ಮಣಿ 400 ಮೀಟರ್ ಓಟ ಪ್ರಥಮ, ಪೂರ್ಣಿಮಾ 400 ಮೀಟರ್ ಓಟ ದ್ವಿತೀಯ, ಸೌಂದರ್ಯ 200 ಮೀಟರ್ ಓಟ ಪ್ರಥಮ, ಶಶಿಕಲಾ 1500 ಮೀಟರ್ ಓಟ ದ್ವಿತೀಯ, ಸೌಂದರ್ಯ 3000 ಓಟ ಪ್ರಥಮ, 4*100 ಮೀಟರ್ ರಿಲೇ ಸೌಂದರ್ಯ ಮತ್ತು ತಂಡ ಪ್ರಥಮ, 4*400 ರಿಲೇ ಓಟ ಸೌಂದರ್ಯ ಮತ್ತು ತಂಡ ಪ್ರಥಮ ಸ್ಥಾನ ಪಡೆದು ಎಲ್ಲರೂ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.