ಸೊಳ್ಳೆ ನಿಯಂತ್ರಣಕ್ಕೆ ಹೆಡಿಗಿಬಾಳ್ ಟ್ರಸ್ಟ್‌ನಿಂದ ಔಷಧಿ ಸಿಂಪರಣೆ

| Published : Sep 04 2024, 01:54 AM IST

ಸೊಳ್ಳೆ ನಿಯಂತ್ರಣಕ್ಕೆ ಹೆಡಿಗಿಬಾಳ್ ಟ್ರಸ್ಟ್‌ನಿಂದ ಔಷಧಿ ಸಿಂಪರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ, ಸ್ಲಂ ಏರಿಯಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸ್ವಂತ ಖರ್ಚಿನಲ್ಲಿ ಯಂತ್ರ ಖರೀದಿಸಿ ಔಷಧಿ ಸಿಂಪರಣೆ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿರುವುದು ಸ್ತುತ್ಯಾರ್ಹ

ಕನ್ನಡಪ್ರಭ ವಾರ್ತೆ ಸಿಂಧನೂರು

ಎಚ್.ಮರಿಯಪ್ಪ ವಕೀಲರು ಹೆಡಿಗಿಬಾಳ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಳೀಯ ಬಸ್ ನಿಲ್ದಾಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಔಷಧಿ ಸಿಂಪರಣೆ ಕಾರ್ಯಕ್ರಮಕ್ಕೆ ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು ಚಾಲನೆ ನೀಡಿದರು.ನಂತರ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ, ಸ್ಲಂ ಏರಿಯಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸ್ವಂತ ಖರ್ಚಿನಲ್ಲಿ ಯಂತ್ರ ಖರೀದಿಸಿ ಔಷಧಿ ಸಿಂಪರಣೆ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿರುವುದು ಸ್ತುತ್ಯಾರ್ಹವಾಗಿದೆ. ರಾಜ್ಯದಲ್ಲಿ ಡೆಂಘೀ ಮಹಾಮಾರಿ ವಿಪರೀತ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ, ಆರೋಗ್ಯ ಇಲಾಖೆಯೊಂದಿಗೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡುವ ಸ್ವಚ್ಛತೆ ಬಗ್ಗೆ ಜೊತೆಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಎಸ್.ಆರ್.ಖಾದ್ರಿ ಮುಕ್ಕುಂದಾ ವಕೀಲ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ಬಸ್ ಡಿಪೋ ವ್ಯವಸ್ಥಾಪಕ ಪ್ರಕಾಶ್ ದೊಡ್ಡಮನಿ, ವಕೀಲ ಜೆ.ರಾಯಪ್ಪ, ಟ್ರಸ್ಟ್ ಅಧ್ಯಕ್ಷ, ವಕೀಲ ಎಚ್.ಮರಿಯಪ್ಪ ಹೆಡಗಿಬಾಳ, ಉಪಾಧ್ಯಕ್ಷ ಕೆ.ಮಹೇಶ ಸುಕಾಲಪೇಟೆ, ಸದಸ್ಯ ವಿಜಯಕುಮಾರ ಕೆ.ಸಿ, ವಕೀಲ ಶಿವಕುಮರ ಶಿವನಗುತ್ತಿ, ವಕೀಲ ಜಾವೀದ್ ಮುಲ್ಲಾ, ಮಾಧ್ಯಮ ವಕ್ತಾರ ಮಂಜುನಾಥ ಸಾಸಲಮರಿ ಇದ್ದರು.