ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಯಿತು.ಮೆಗಾ ಮಾರುಕಟ್ಟೆಯಲ್ಲಿ ಒಟ್ಟು 133 ವಾಣಿಜ್ಯ ಮಳಿಗೆಗಳಿವೆ. ಈಗಾಗಲೇ ಕೆಲವು ವಾಣಿಜ್ಯ ಮಳಿಗೆಗಳನ್ನು ಈ ಹಿಂದೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಪಡೆದುಕೊಂಡಿದ್ದಾರೆ. ಶನಿವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಂಭತ್ತು ಜನರು ಭಾಗಿಯಾಗಿದ್ದರು. ನಾಲ್ಕು ಜನರು ಮಳಿಗೆ ಪಡೆದುಕೊಂಡರು.
ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಅಧಿಕಾರಿಗಳಿಂದ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ಭಾನುವಾರ ಸರ್ಕಾರಿ ರಜಾ ದಿನವಾಗಿರುವುದರಿಂದ ಬ್ಯಾಂಕ್ ರಜೆ ಇದ್ದು, ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಠೇವಣಿ ಇಡಲು ತೊಂದರೆಯಾಗುವುದರಿಂದ ಸೋಮವಾರ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಶನಿವಾರ ಮೆಗಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಂಭತ್ತು ಜನರು ಭಾಗವಹಿಸಿದ್ದರು. ನಾಲ್ಕು ವಾಣಿಜ್ಯ ಮಳಿಗೆಗಳು ಇಂದಿನ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಮಂಜೂರಾದವು. ಕೆಳಮಹಡಿಯಲ್ಲಿರುವ ವಾಣಿಜ್ಯ ಮಳಿಗೆ ಸಂಖ್ಯೆ ಬಿ.3 ಕೆ ಅನ್ನು ಬೇಬಿ ರಾಠೋಡ 11,50,000 ಠೇವಣಿ ಮೊತ್ತಕ್ಕೆ, ಕೆಳಮಹಡಿಯಲ್ಲಿರುವ ವಾಣಿಜ್ಯ ಮಳಿಗೆ ಸಂಖ್ಯೆ ಬಿ53 ಅನ್ನು ವಿಜಯಕುಮಾರ ಪವಾರ ₹ 14,00,000 ಠೇವಣಿ ಮೊತ್ತಕ್ಕೆ, ಕೆಳಮಹಡಿಯಲ್ಲಿರುವ ವಾಣಿಜ್ಯ ಮಳಿಗೆ ಸಂಖ್ಯೆ ಬಿ51 ಅನ್ನು ರಮೇಶ ಬಿರಾದಾರ ₹ 9,10,00 ಠೇವಣಿ ಮೊತ್ತಕ್ಕೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಮಳಿಗೆ ಸಂಖ್ಯೆ ಜಿ 21ನ್ನು ಮೀಸಲಾತಿ ಸಮೃದ್ಧಿ ಎಂಜಿನಿಯರ್ ₹ 9,80,000 ಠೇವಣಿ ಮೊತ್ತಕ್ಕೆ ಪಡೆದರು. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ₹ 44,40,000 ಠೇವಣಿ ಸಂಗ್ರಹ ಆಗಿದೆ. ಇನ್ನೂ 94 ವಾಣಿಜ್ಯ ಮಳಿಗೆಗಳು ಉಳಿದುಕೊಂಡಿದ್ದು, ಸೋಮವಾರ ನಡೆಯುವ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಾರಸ್ಥರು ಭಾಗಿಯಾಗಿ ವಾಣಿಜ್ಯ ಮಳಿಗೆಗಳನ್ನು ಪಡೆದುಕೊಳ್ಳಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಮಾಹಿತಿ ನೀಡಿದರು.
ಶನಿವಾರ ಜರುಗಿದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಗಿ, ಪುರಸಭೆ ಅಭಿಯಂತರರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಜಿಪಂ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ಪುರಸಭೆ ಕಂದಾಯ ನಿರೀಕ್ಷಕ ಗೀತಾಂಜಲಿ ದಾಸರ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಕರ ವಸೂಲಿಗಾರ ರಾಜು ರಾಠೋಡ ಸೇರಿದಂತೆ ಇತರರು ಇದ್ದರು.