ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬಿ.ಎಸ್.ಎಸ್. ವಿದ್ಯೋದಯ ಶಾಲೆಯಲ್ಲಿ ವಿಭಿನ್ನ ಮಾದರಿಯಲ್ಲಿ ಪರಿಸರ ದಿನ ಆಚರಿಸಲಾಯಿತು.ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳುವ ವೇದವಾಕ್ಯ ಇಂದು ಬದಲಾಗಿ ಪರಿಸರ ರಕ್ಷತಿ ರಕ್ಷಿತಃ ಎಂದಾಗಿದೆ. ಇದ್ದರೆ ಮರ ಬರದೆಂದಿಗೂ ಬರ, ದೇಶಕ್ಕೆ ವರ ಘೋಷಣೆಯೊಂದಿಗೆ ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂ. 5 ರಂದು ವಿಶ್ವದಾದ್ಯಂತ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರ ಕಾಳಜಿ ಜೊತೆಗೆ ಮಕ್ಕಳಲ್ಲಿ ಪರಿಸರದ ಮಹತ್ವ ತಿಳಿಸಿ ಜಾಗೃತಿಗೊಳಿಸುವ ಉದ್ದೇಶದಿಂದ ಬಿಎಸ್.ಎಸ್. ವಿದ್ಯೋದಯ ಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.ನಮ್ಮೆಲ್ಲರ ಆಶ್ರಯ ತಾಣ ಭೂಮಿ, ಅದರ ರಕ್ಷಣೆಯ ಹೊಣೆಯೆ ವಿಶ್ವ ಪರಿಸರ ದಿನಾಚರಣೆಯ ಆಶಯವಾಗಿದೆ.ಪರಿಸರ ಸಂರಕ್ಷಿಸುವ ಕಾರ್ಯಗಳಿಗೆ ಉತ್ತೇಜನ ನೀಡುವುದು ಅದರ ಉದ್ದೇಶವಾಗಿದೆ. ಬಿಎಸ್.ಎಸ್. ವಿದ್ಯೋದಯ ಶಾಲೆಯಲ್ಲಿ ಮಕ್ಕಳು ಕೈಯಲ್ಲಿ ಗಿಡಗಳನ್ನು ಹಿಡಿದು ಹಸಿರು ಬಣ್ಣದ ವಸ್ತ್ರಧರಿಸಿ ಶಾಲೆಗೆ ಬಂದರು.ಶಾಲೆಯ ಸುತ್ತಮುತ್ತ ಗಿಡಗಳನ್ನು ನೆಡುವುದು ನೀರು ಹಾಕುವುದು, ಸಣ್ಣ ಮಕ್ಕಳಿಂದ ವಿವಿಧ ಬಗೆಯ ಬೀಜಗಳನ್ನು ಸಂಗ್ರಹಿಸಿ ಶಾಲೆ ಆವರಣದಲ್ಲಿ ಬಿತ್ತನೆ ಮಾಡಿಸಲಾಯಿತು.5ನೇ ತರಗತಿಯ ಮಕ್ಕಳಿಂದ ಪ್ರಹಸನ (ನಾಟಕ) ವೊಂದನ್ನು ಪ್ರದರ್ಶಿಸಲಾಯಿತು. ಭೂಮಿ, ನೀರು, ಗಾಳಿ ಹೇಗೆ ಕಲುಷಿತಗೊಳ್ಳುತ್ತಿದೆ, ಇದರಲ್ಲಿ ಮನುಷ್ಯನ ಪಾತ್ರ ಎಷ್ಟು? ಹೇಗೆ ಮನುಷ್ಯರಾದ ನಾವು ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಬೇಕು ಎಂಬುದಾಗಿ ತಿಳಿವಳಿಕೆ ಮೂಡಿಸಿದರು.ಪರಿಸರ ಸ್ನೇಹಿ ಪ್ರತಿಜ್ಞೆಯನ್ನು ಮಾಡಿ ಎಲ್ಲರ ಗಮನ ಸೆಳೆದರು. ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ಅನ್ನು ತ್ಯೆಜಿಸಿ, ಹುಟ್ಟುಹಬ್ಬದ ವೇಳೆ ಚಾಕ್ಲೇಟ್ ವಿತರಿಸುವುದನ್ನು ನಿಷೇದಿಸುವುದರ ಮೂಲಕ ಶಾಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಒಂದಾದರು.ಸಣ್ಣಮಕ್ಕಳು ವಿಭಿನ್ನ ರೀತಿಯ ವೇಷಭೂಷಣದೊಂದಿಗೆ ಸಮಾರಂಭದಲ್ಲಿ ನೆರೆದಿದ್ದವರನ್ನು ಆಕರ್ಷಿಸಿದರು.