ಸಾರಾಂಶ
ನೀಟ್ 2024ರ ಫಲಿತಾಂಶದಲ್ಲಿ ದಾವಣಗೆರೆಯ ಸರ್ ಎಂವಿ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ತರಬೇತಿಗೆ ಹೆಸರು ವಾಸಿ ಆಗಿರುವ ಮಧ್ಯ ಕರ್ನಾಟಕದ ಹೆಮ್ಮೆಯ ಸಂಸ್ಥೆ ಸರ್ ಎಂವಿ ಕಾಲೇಜು ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಅಂಕ ಗಳಿಸಿ ಸಂಸ್ಥೆ ಹಿರಿಮೆ ಹೆಚ್ಚಿಸಿದ್ದಾರೆ.
ದಾವಣಗೆರೆ: ನೀಟ್ 2024ರ ಫಲಿತಾಂಶದಲ್ಲಿ ಸರ್ ಎಂವಿ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ತರಬೇತಿಗೆ ಹೆಸರು ವಾಸಿ ಆಗಿರುವ ಮಧ್ಯ ಕರ್ನಾಟಕದ ಹೆಮ್ಮೆಯ ಸಂಸ್ಥೆ ಸರ್ ಎಂವಿ ಕಾಲೇಜು ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಅಂಕ ಗಳಿಸಿ ಸಂಸ್ಥೆ ಹಿರಿಮೆ ಹೆಚ್ಚಿಸಿದ್ದಾರೆ.ವಿದ್ಯಾರ್ಥಿನಿ ಕೆ.ಸೃಷ್ಟಿ 720ಕ್ಕೆ 711 ಅಂಕಗಳ ಗಳಿಸಿ ಸಂಸ್ಥೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆರ್.ದುಶ್ಶಂತ್ 720ಕ್ಕೆ 710 ಅಂಕ, ಕೆ.ಪ್ರಜ್ವಲ್, ಜಿ.ಎ.ಅಂಶಿಕ್, ಎಸ್.ಬಿ.ಕೊಟ್ರೇಶ್, ಸಿ.ಪಿ.ಆಕಾಶ್, ಕೆ.ನವಾಜ್ 720ಕ್ಕೆ 705 ಅಂಕಗಳನ್ನು ಗಳಿಸಿದ್ದಾರೆ. ಮೊಹಮ್ಮದ್ ಸುಹೇಲ್ 720ಕ್ಕೆ 700 ಅಂಕ ಗಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯ 8 ವಿದ್ಯಾರ್ಥಿಗಳು 700ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದು, ಕರ್ನಾಟಕ ರಾಜ್ಯದಲ್ಲಿಯೇ ಇದು ಅಭೂತಪೂರ್ವ ಸಾಧನೆಯಾಗಿದೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.- - - -4ಕೆಡಿವಿಜಿ34ಃ: ಕೆ.ಸೃಷ್ಟಿ
-B4ಕೆಡಿವಿಜಿ35ಃ: ಕೆ.ಪ್ರಜ್ವಲ್-4ಕೆಡಿವಿಜಿ36ಃ ಜಿ.ಎ.ಅಂಶಿಕ್ -4ಕೆಡಿವಿಜಿ37ಃ: ಎಸ್.ಬಿ.ಕೊಟ್ರೇಶ್
-4ಕೆಡಿವಿಜಿ38ಃ: ಸಿ.ಪಿ.ಆಕಾಶ್-4ಕೆಡಿವಿಜಿ39ಃ: ಕೆ.ನವಾಜ್ -4ಕೆಡಿವಿಜಿ40ಃ: ದುಷ್ಯಂತ್
-4ಕೆಡಿವಿಜಿ41ಃ: ಮಹಮದ್ ಸುಹೇಲ್- - -