ಬಾಲ ಹನುಮಂತನ ಜಾತ್ರಾ ಮಹೋತ್ಸವ ಹಿಂದೂ- ಮುಸ್ಲಿಂ ಸಾಮರಸ್ಯ ಸಾರಿದ ಜಾತ್ರೆಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ (ಯಡಿಯಾಪೂರ) ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಬಾಲ ಹನುಮಂತನ ಜಾತ್ರಾ ಮಹೋತ್ಸವ ಹಿಂದೂ- ಮುಸ್ಲಿಂ ಸಾಮರಸ್ಯ ಸಾರಿದ ಜಾತ್ರೆಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ (ಯಡಿಯಾಪೂರ) ಹೇಳಿದರು.ಪಟ್ಟಣದ ಗಂಗಾನಗರದಲ್ಲಿ ನಡೆದ 12ನೇ ವರ್ಷದ ಬಾಲ ಹನುಮಾನ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹನುಮಾನ್ ಜನಿಸಿದ್ದು, ನಮ್ಮ ರಾಜ್ಯದಲ್ಲಿ ಹನುಮಾನ ಮಂದಿರ ಇಲ್ಲದ ಊರಿಲ್ಲ. ಭಕ್ತಿ ಮತ್ತು ಶಕ್ತಿಯ ಸ್ವರೂಪಿಯಾಗಿ ಅಸಂಖ್ಯಾತರ ಭಕ್ತರ ಪಾಲಿನ ಕಾಮಧೇನುವಾಗಿದ್ದಾನೆ ಎಂದರು.ಮುಖಂಡರಾದ ಸಿ.ಕೆ.ಕುದರಿ ಹಾಗೂ ಡಾ.ಆರ್.ಆರ್.ನಾಯಕ ಮಾತನಾಡಿ, ಪಟ್ಟಣದ ಬಾಲ ಹನುಮಾನ್ ಜಾತ್ರಾ ಮಹೋತ್ಸವ ಪ್ರತಿವರ್ಷ ಭಾರಿ ವೈಭವ, ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ನಿಂಗು ಯಂಬತ್ನಾಳ ಅವರ ನೇತೃತ್ವದ ತಂಡ ಈ ಬಾರಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲಾ ಧರ್ಮದವರು ಬಾಲಹನುಮಾನ ಜಾತ್ರೆಯಲಿ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದ್ದಾರೆ ಎಂದು ಸಂಘಟಕರಿಗೆ ಅಭಿನಂದಿಸಿದರು.ರಾಜಕೀಯ ಮುಖಂಡರು, ಪತ್ರಕರ್ತರು, ಪ.ಪಂ ಸದಸ್ಯರು, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕರಿಸಿದ್ದೇಶ್ವರ ದೇವಸ್ಥಾನದ ಸ್ವಾಮೀಜಿಗಳು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ರಿಯಾಜ್ ಯಲಿಗಾರ, ಪಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಸದಸ್ಯರುಗಳಾದ ಕಾಸುಗೌಡ ಬಿರಾದಾರ (ಜಲಕತ್ತಿ), ಕಾಸಪ್ಪ ಜಮಾದಾರ, ಜಾತ್ರಾ ಕಮಿಟಿ ಅಧ್ಯಕ್ಷ ನಿಂಗು ಯಂಬತ್ನಾಳ, ಮುಖಂಡರುಗಳಾದ ಡಾ.ಸತೀಶ ನಾಡಗೌಡ, ವಿನೋದಗೌಡ ಪಾಟೀಲ, ಕಾಶಿನಾಥ ತಳಕೇರಿ, ಕುಮಾರಸ್ವಾಮಿ ಹಿರೇಮಠ, ಶಂಕರಗೌಡ ಪಾಟೀಲ, ಮುನ್ನಾ ಮಳಖೇಡ, ಪ್ರಕಾಶ ಮಲ್ಹಾರಿ, ಸೋಮು ದೇವೂರ, ವಿನೋದ ಚವ್ಹಾಣ, ಮಲ್ಲನಗೌಡ, ಪ್ರಕಾಶ ಗುಡಿಮನಿ, ಎ.ಡಿ.ಮುಲ್ಲಾ, ಸಂಪತ್ ಜಮಾದಾರ, ರಹೀಮಾನ ಕನಕಲ್, ಮಲ್ಲಿಕಾರ್ಜುನ ಅವಟಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಮುಖಂಡರಾದ ಶ್ರೀಧರ ನಾಡಗೌಡ ನಿರೂಪಿಸಿ, ವಂದಿಸಿದರು.ಹನುಮಂತನನ್ನು ಅತ್ಯಂತ ಶ್ರದ್ಧಾವಂತ ಹಾಗೂ ಶಕ್ತಿಶಾಲಿ ದೇವರುಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ದೈಹಿಕವಾಗಿ ಸಮರ್ಥಶಾಲಿ ಎಂದೆನಿಸಿರುವ ಹನುಮಾನ್ ದೇವರು ರಾಮನ ಮೇಲಿನ ಪ್ರೀತಿ ಹಾಗೂ ಭಕ್ತಿಗೆ ಕೂಡ ಹೆಸರುವಾಸಿಯಾಗಿದ್ದಾರೆ.
-ಬಸನಗೌಡ ಪಾಟೀಲ (ಯಡಿಯಾಪೂರ), ಬಿಜೆಪಿ ಮುಖಂಡರು ಹಾಗೂ ಜಿಪಂ ಮಾಜಿ ಅಧ್ಯಕ್ಷರು.