ಕರ್ತವ್ಯಲೋಪ ಆರೋಪದ ಹಿನ್ನೆಲೆ ಬನಹಟ್ಟಿ ಸಿಪಿಐ ಎಚ್.ಆರ್.ಪಾಟೀಲರನ್ನು ಬೆಳಗಾವಿ ಉತ್ತರ ವಲಯ ಐಜಿಪಿ ಡಾ.ಚೇತನ್‌ಸಿಂಗ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕರ್ತವ್ಯಲೋಪ ಆರೋಪದ ಹಿನ್ನೆಲೆ ಬನಹಟ್ಟಿ ಸಿಪಿಐ ಎಚ್.ಆರ್.ಪಾಟೀಲರನ್ನು ಬೆಳಗಾವಿ ಉತ್ತರ ವಲಯ ಐಜಿಪಿ ಡಾ.ಚೇತನ್‌ಸಿಂಗ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಪಾಟೀಲ ಅಮಾನತು ಕ್ರಮ ಪೊಲೀಸ್ ಪಡೆಯಲ್ಲಿ ಸಂಚಲನ ಮೂಡಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಶಿಸ್ತು ಉಲ್ಲಂಘನೆ ಆರೋಪದಡಿ ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಇಲಾಖೆಗೆ ವಿಧೇಯನಾಗಿ ಇರದಿರುವುದು. ಎಸ್‌ಪಿ ವಿರುದ್ಧ ಸುದ್ದಿಗೋಷ್ಠಿ ಕರೆಯುವುದಾಗಿ ಬೆದರಿಕೆ. ಮೇಲಧಿಕಾರಿಗಳ ಕಾನೂನುಬದ್ಧ ಆದೇಶಗಳ ಉಲ್ಲಂಘನೆ. ಶಬ್ ಎ ಬರಾತ್ ದಿನದ ರಾತ್ರಿ ಬಂದೋಬಸ್ತ್ ಕರ್ತವ್ಯ ಕೈಗೊಳ್ಳದೇ ಕುಡಿದ ಅಮಲಿನಲ್ಲಿ ಮೇಲಧಿಕಾರಿಗಳೊಡನೆ ವಾಗ್ವಾದ ಮಾಡಿರುವುದು ಕಾರಣವೆಂದು ಹೇಳಲಾಗುತ್ತಿದೆಯಾದರೂ ನಿಖರ ಕಾರಣ ಆದೇಶಪತ್ರದಲ್ಲಿಲ್ಲ.