ಬೈಲೂರು ದೇವಳ ಶತಚಂಡಿಕಾಯಾಗ ವಿಜ್ಞಾಪನಾ ಪತ್ರ ಬಿಡುಗಡೆ

| Published : Oct 27 2024, 02:27 AM IST

ಸಾರಾಂಶ

ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನಡೆಯಲಿರುವ ಶತಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆಯ ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭ ಶನಿವಾರ ದೇವಸ್ಥಾನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನಡೆಯಲಿರುವ ಶತಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆಯ ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭ ಶನಿವಾರ ದೇವಸ್ಥಾನದಲ್ಲಿ ನಡೆಯಿತು.

ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಪ್ರಮುಖರಿಗೆ ಹಸ್ತಾಂತರಿಸಿದರು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ದೇವರಿಗೆ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುವುದು ಒಂದು ವಿಧವಾದರೇ ವಿಶೇಷ ಸಂದರ್ಭಗಳಲ್ಲಿ ಹೊಮಹವನಗಳ ಮೂಲಕ ಪೂಜೆ ಸಲ್ಲಿಸುವುದು ಇನ್ನೊಂದು ವಿಧ. ಅಗ್ನಿ ಮೂಲಕ ದೇವತೆಗಳಿಗೆ ಹವಿಸ್ಸು ನೀಡಿದರೆ ಅದರ ಪ್ರತಿಫಲವಾಗಿ ದೇಶದಲ್ಲಿ ಕಾಲಕಾಲಕ್ಕೆ ಮಳೆಬೆಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಪ್ರಾಚೀನವಾದ ಈ ದೇವಿ ದೇವಸ್ಥಾನದಲ್ಲಿ ಶತಚಂಡಿಕ ಯಾಗದಿಂದ ಸಮಾಜಕ್ಕೆ ಕಲ್ಯಾಣವಾಗುತ್ತದೆ ಎಂದು ಹಾರೈಸಿದರು.

ಶಾಸಕ ಯಶ್ಪಾಲ್ ಸುವರ್ಣ, ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಗಣ್ಯರಾದ ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣ ರಾವ್ ಕೊಡಂಚ, ವಿದ್ವಾನ್ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ, ಅರ್ಚಕ ವರದರಾಜ್ ಭಟ್,‌ ಶ್ರೀನಿವಾಸ ಆಚಾರ್ಯ, ಸುದರ್ಶನ್ ಸೇರಿಗಾರ್ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಗತಿಸಿದರು. ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮ ಸಂಯೋಜಿಸಿದರು.