ವಿಜೃಂಭಣೆಯ ಬೆಟ್ಟದೊಡೆಯ ಬಂಡೇ ರಂಗನಾಥ ರಥೋತ್ಸವ

| Published : Mar 27 2024, 01:10 AM IST

ವಿಜೃಂಭಣೆಯ ಬೆಟ್ಟದೊಡೆಯ ಬಂಡೇ ರಂಗನಾಥ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವದ ನಿಮಿತ್ತ ಬೆಳಗ್ಗೆ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಡಿತೇರನ್ನು ಎಳೆಯಲಾಯಿತು

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ತಾಲೂಕಿನ ತಂಬ್ರಹಳ್ಳಿ ಐತಿಹಾಸಿಕ ಶ್ರೀ ಬಂಡೇ ರಂಗನಾಥ ಸ್ವಾಮಿ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ಬೆಳಗ್ಗೆ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಡಿತೇರನ್ನು ಎಳೆಯಲಾಯಿತು. ಸಂಜೆ ರಂಗನಾಥ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿ ಸಕಲ ವಾದ್ಯಗೋಷ್ಠಿಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ಮಾಡಲಾಯಿತು. ನಂತರ ಸ್ವಾಾಮಿಯ ಪಟಾಕ್ಷಿಯನ್ನು ಹರಾಜು ಮಾಡಲಾಯಿತು. ಪಟಾಕ್ಷಿಯನ್ನು ತಂಬ್ರಹಳ್ಳಿ ಗ್ರಾಾಮದ ಸುಣಗಾರ ಹನುಮಂತ ₹181000 ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ಹಗರಿಬೊಮ್ಮನಹಳ್ಳಿ ಪುರಸಭೆ ಸದಸ್ಯ ಬುಕಿಟ್‌ಗಾರ ಗಂಗಾಧರ, ವರ್ತಕ ಕುಮಾರ ಅವರು ಜಾತ್ರೆಗೆ ಬಂದ ಜನರ ನೀರಿನದಾಹ ತೀರಿಸಲು ಬೃಹತ್ ಅರವಟ್ಟಿಗೆ ಸ್ಥಾಪಿಸಿ ಜನಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಸರಕೋಡು ಲಕ್ಷ್ಮಣ, ಧರ್ಮಕರ್ತ ಉದಯಭಾಸ್ಕರ್, ಅರ್ಚಕ ಯಲ್ಲಪ್ಪಗೌಡ ಪೂಜಾರ್, ನಿವೃತ್ತ ಇಒ ಟಿ. ವೆಂಕೋಬಪ್ಪ, ಕಾರ್ಯದರ್ಶಿ ಸುಣಗಾರ ಪರುಶುರಾಮ, ಸಮಿತಿಯ ರೆಡ್ಡಿ ಮಂಜುನಾಥ ಪಾಟೀಲ್, ಸರಾಯಿ ಮಂಜುನಾಥ, ಎಚ್.ಬಿ. ಗಂಗಾಧರಗೌಡ, ಸುಣಗಾರ ಮಂಜುನಾಥ, ಕಡ್ಡಿ ಚನ್ನಬಸಪ್ಪ, ಕರಿಬಸಯ್ಯ, ಕ್ಯಾದ್ಗಿಹಳ್ಳಿ ನಿಂಗಪ್ಪ, ಏಣಿಗಿ ರಾಮಣ್ಣ, ಆನೇಕಲ್ ವಿರೂಪಾಕ್ಷಿ, ಗ್ರಂಥಾಲಯ ಮೇಲ್ವಿಚಾರಕ ಟಿ. ಪಾಂಡುರಂಗಪ್ಪ, ಕಟ್ಟಿಮನಿ ಹಾಲೇಶ್, ಸತ್ಯಪ್ಪ ಇತರರಿದ್ದರು.