ಬಂಗಾರಪೇಟೆ: ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

| Published : Aug 09 2025, 12:00 AM IST

ಸಾರಾಂಶ

ಪ್ರತಿ ಭಾರಿ ಮಳೆ ಬಂದರೆ ಬಂಗಾರಪೇಟೆಯ ಬಾಲಚಂದ್ರ ಚಿತ್ರಮಂದಿರ ರಸ್ತೆ ಸಿ.ರಹೀಂ ಕಾಂಪೌಂಡ್‌ಗಳಲ್ಲಿ ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯದೆ ರಸ್ತೆ ತುಂಬುವುದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರ ಚೆಲ್ಲಲು ಮನೆಮಂದಿಯಲ್ಲ ಹರಸಾಹಸ ಪಟ್ಟರು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿ ನಾಗರಿಕರನ್ನು ಹೈರಾಣ ಮಾಡಿದರೆ ಬಾಲಚಂದ್ರ ಚಿತ್ರಮಂದಿರ ರಸ್ತೆಯಂತೂ ಸಂಪೂರ್ಣವಾಗಿ ಜಲಾವೃತವಾಗಿ ಮಿನಿ ಕೆರೆಯಂತಾಗಿ ಮಾರ್ಪಟ್ಟಿತ್ತು.ಶುಕ್ರವಾರ ಮಧ್ಯಾಹ್ನ ೩ಗಂಟೆ ನಂತರ ಆರಂಭವಾದ ಭಾರಿ ಮಳೆ ಸುಮಾರು ಒಂದು ಗಂಟೆ ಕಾಲಸುರಿಯಿತು. ತಗ್ಗು ಪ್ರದೇಶವಾದ ಸೇಠ್ ಕಾಂಪೌಂಡ್ ಬಡಾವಣೆಯಲ್ಲಿ ಎಲ್ಲಾ ರಸ್ತೆಗಳು ಮಳೆ ನೀರಿನ ಜೊತೆ ಕೊಳಚೆ ನೀರು ಮಿಶ್ರಣಗೊಂಡು ಮನೆಗಳ ಮುಂದೆ ಹರಿಯಿತು. ಕೆಲವು ಮನೆಗಳಿಗೂ ನೀರು ನುಗ್ಗಿ ಆತಂಕ ಸೃಷ್ಟಿಸಿತು.

ವಾಹನ ಸಂಚಾರ ಅಸ್ತವ್ಯಸ್ತ

ಪ್ರತಿ ಭಾರಿ ಮಳೆ ಬಂದರೆ ಈ ಬಡಾವಣೆ ಸೇರಿದಂತೆ ಬಾಲಚಂದ್ರ ಚಿತ್ರಮಂದಿರ ರಸ್ತೆ ಸಿ.ರಹೀಂ ಕಾಂಪೌಂಡ್‌ಗಳಲ್ಲಿ ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯದೆ ರಸ್ತೆ ತುಂಬುವುದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರ ಚೆಲ್ಲಲು ಮನೆಮಂದಿಯಲ್ಲ ಹರಸಾಹಸ ಪಟ್ಟರು. ಈ ರಸ್ತೆಯ ಚರಂಡಿಗಳು ಕಿರಿದಾಗಿದ್ದು, ಹೂಳಿನಿಂದ ತುಂಬಿವೆ. ಮಳೆ ನೀರು ರಸ್ತೆಗಳ ಮೇಲೆ ಹರಿದಿದು ರಸ್ತೆಗಳು ಕೆರೆಯಂತಾಗಿತ್ತದೆ.

ರಸ್ತೆ ಪಕ್ಕದಲ್ಲೆ ಇರುವ ಅಂಗಡಿಗಳಿಗೂ ನೀರು ನುಗ್ಗಿತು,ಇದರಿಂದ ಫಾಸ್ಟ್ ಫುಡ್,ಕಬಾಬ್ ಅಂಗಡಿಗಳ ಒಳಗೆ ಮಳೆ ನೀರಿನ ಜೊತೆ ಕೊಳಚೆ ನೀರು ಹರಿದು ಅವಾಂತರ ಸೃಷ್ಟಿಸಿತು,ಇದೇ ರೀತಿ ವೆಂಕಟೇಶ್ವರ ಶಾಲೆ ರಸ್ತೆ ಇಲ್ಲಿಯೂ ಸಹ ರಸ್ತೆಗಳೆಲ್ಲಾ ಕೆರೆಯಂತಾಗಿ ಜನರು ಸಂಚರಿಸಲು ಮಳೆ ನಿಂತ ಬಳಿಕವೂ ನೀರು ಸಂಪೂರ್ಣ ಹರಿದುಹೋಗುವವರೆಗೆ ವಾಹನ ಸವಾರರು ಪರದಾಡಿದರು. ಅದೇ ರೀತಿ ಸ್ಲಂ ಪ್ರದೇಶದಲ್ಲಿಯೂ ಸಹ ಮಳೆ ಅವಾಂತರ ಸೃಷ್ಟಿಸಿತು.

ಕೆರೆಯಂತಾದ ರಸ್ತೆಗಳು

ಇದೇ ರೀತಿ ವೆಂಕಟೇಶ್ವರ ಶಾಲೆ ರಸ್ತೆ ಇಲ್ಲಿಯೂ ಸಹ ರಸ್ತೆಗಳೆಲ್ಲಾ ಕೆರೆಯಂತಾಗಿ ಜನರು ಸಂಚರಿಸಲು ಮಳೆ ನಿಂತ ಅರ್ಧಗಂಟೆಯಾದರೂ ಪರದಾಡಿದರು. ವಾಹನ ಸವಾರರು ಪರದಾಡಿದರು. ಅದೇ ರೀತಿ ಸ್ಲಂ ಪ್ರದೇಶದಲ್ಲಿಯೂ ಸಹ ಮಳೆ ಅವಾಂತರ ಸೃಷ್ಟಿಸಿತು. ಆದರೆ ಮಳೆ ಇಲ್ಲದೆ ಆಕಾಶದತ್ತ ಮುಖ ಮಾಡಿದ್ದ ರೈತರಿಗೆ ಶುಕ್ರವಾರದ ಮಳೆ ತೃಪ್ತಿ ತಂದಿದೆ.