ಬಂಟ್ವಾಳ: ಬಿಜೆಪಿ ಬಲಗೊಳಿಸಲು ಪ್ರಶಿಕ್ಷಣ ಮಹಾಭಿಯಾನ ನಡೆಯುತ್ತಿದ್ದು, ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ ಜಿಲ್ಲೆಯ ಮೊದಲ ಕಾರ್ಯಕ್ರಮ ಆರಂಭಗೊಂಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.ಒಡ್ಡೂರ್ ಫಾರ್ಮ್ಸ್‌ನಲ್ಲಿ ಬಿಜೆಪಿ ಬಂಟ್ವಾಳ ವತಿಯಿಂದ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಮಟ್ಟದ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು 24 ಗಂಟೆಗಳ ಪ್ರಶಿಕ್ಷಣವಾಗಿದ್ದು, ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ ಮಹಾಭಿಯಾನ ಆರಂಭಗೊಂಡಿದ್ದು, ಪಕ್ಷದ ಸಿದ್ಧಾಂತಗಳನ್ನು ತಿಳಿಹೇಳಲು ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.ಬಂಟ್ವಾಳ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಶಿಕ್ಷಣ ಅಭಿಯಾನ ಸಹಸಂಚಾಲಕ ವಿಕಾಸ್ ಪುತ್ತೂರು, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಕ್ಷೇತ್ರದ ಪ್ರಶಿಕ್ಷಣ ಅಭಿಯಾನ ಸಹಸಂಚಾಲಕಿ ಲಖಿತಾ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಮಹಾಶಕ್ತಿ ಕೇಂದ್ರಗಳ ಸಂಚಾಲಕರಾದ ವಸಂತ ಕುಮಾರ್ ಅಣ್ಣಳಿಕೆ, ಪುರುಷೋತ್ತಮ ಸಾಲಿಯಾನ್, ರವೀಶ್ ಶೆಟ್ಟಿ ಕರ್ಕಳ , ಪ್ರಮುಖರಾದ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಲಯ ಕಾರ್ಯದರ್ಶಿ ಪ್ರಣಾಮ್ ರಾಜ್ ಅಜ್ಜಿಬೆಟ್ಟು ವೈಯಕ್ತಿಕ ಗೀತೆ ಹಾಡಿದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಶ್ರೀ ಗೋಳ್ತಮಜಲು ವಂದೇ ಮಾತರಂ ಹಾಡಿದರು. ಬಂಟ್ವಾಳ ಮಂಡಲ ಪ್ರಶಿಕ್ಷಣ ಮಹಾಭಿಯಾನ ಸಂಚಾಲಕ ಹಾಗೂ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಸ್ವಾಗತಿಸಿದರು. ಹರೀಶ್ ಪಡು ನಿರ್ವಹಿಸಿದರು. ಪುರುಷೋತ್ತಮ ಶೆಟ್ಟಿ ವಾಮದಪದವು ಸಹಕರಿಸಿದರು.