ಬೆಂಗಳೂರು: ಪ್ರಗತಿ ಮೀಡಿಯಾ ಸಂಸ್ಥೆ ಬೆಂಗಳೂರು ವತಿಯಿಂದ ಶೈಕ್ಷಣಿಕ ಕ್ಷೇತ್ರದ ಉದಯೋನ್ಮುಖ ಸಾಧಕರಿಗೆ ನೀಡುವ ವಿದ್ಯಾರತ್ನ ಪ್ರಶಸ್ತಿಯನ್ನು ಈಡನ್ ಗ್ಲೋಬಲ್ ಶಾಲೆಯ ಶಿಕ್ಷಕ ಝುನೈಫ್ ಕೋಲ್ಪೆ ಅವರು ಪಡೆದುಕೊಂಡದರು. ಸದಾಶಿವನಗರದ ಹೈಡ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್, ಮಾಜಿ ಶಾಸಕ ರಮೇಶ್ ಗೌಡ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಶಿವಕುಮಾರ್ ನಾಗರನವಿಲೆ ಮತ್ತು ಪ್ರಗತಿ ಮೀಡಿಯಾ ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ಜೈನ್ ಹಾಗೂ ವಿವಿಧ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಈಡನ್ ಗ್ಲೋಬಲ್ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಝುನೈಫ್ ಕೋಲ್ಪೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಖ್ಯಾತ ಬರಹಗಾರರಾಗಿ ಮತ್ತು ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಉಡುಪಿ ನಾರಾಯಣ ಗುರು ಪುರಸ್ಕಾರ, ತೇಜಸ್ವಿ ಪಥ ಅವಾರ್ಡ್ (ಮೈಸೂರು), ಯುವ ಧ್ವನಿ ಪುರಸ್ಕಾರ (ಬೆಂಗಳೂರು), ಭಾವೈಕ್ಯತ ಸಾಹಿತ್ಯ ರತ್ನ (ಮಂಗಳೂರು) ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.