ಸಾರಾಂಶ
ತರೀಕೆರೆ, ಶಾಲಾ ಕಾಲೇಜು ಪಠ್ಯಗಳಲ್ಲಿ ಹೆಚ್ಚು ಜನಪದ ಗದ್ಯ ಪದ್ಯಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಕನ್ನಡಜಾನಪದ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮವಸತಿ ಶಾಲೆಯಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆಶಾಲಾ ಕಾಲೇಜು ಪಠ್ಯಗಳಲ್ಲಿ ಹೆಚ್ಚು ಜನಪದ ಗದ್ಯ ಪದ್ಯಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಕನ್ನಡಜಾನಪದ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದ್ದಾರೆ.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ದಿಂದ ಸಮೀಪದ ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕನ್ನಡ ಜಾನಪದ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾದರೆ ಅದನ್ನು ಉಳಿಸಿ ಬೆಳೆಸುತ್ತಿರುವುದು ಮಹಿಳೆಯರು. ತಾಯಿ ಗರ್ಭದಿಂದ ಪ್ರಾರಂಭವಾಗುವ ಜಾನಪದ ಚಟ್ಟದವರೆಗೂ ಇರುತ್ತದೆ. ಮೊಬೈಲೀಕರಣ ಜಾಗತೀಕರಣ ಹಾಗೂ ಕಂಪ್ಯೂಟರಿಕರಣ ಎಷ್ಟು ಬೆಳೆದರು ಜಾನಪದದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೂ. ಅದು ಬದಲಾವಣೆಗೊಳ್ಳುತ್ತಾ ಮುಂದುವರಿಯುತ್ತದೆ ಎಂದು ತಿಳಿಸಿದರು. ಜಿಲ್ಲಾ ಜಾನಪದ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಮ್ಮ ಮಾತನಾಡಿ ಮಾರ್ಚ್ ತಿಂಗಳಲ್ಲಿ ತಾಲೂಕು ಗೊಂಡೆದಹಳ್ಳಿ ಯಲ್ಲಿ ಅಜ್ಜಂಪುರ ತಾಲೂಕು ಪ್ರಥಮ ಮಹಿಳಾ ಸಮ್ಮೇಳನ ಮತ್ತು ಜಿಲ್ಲಾ ಮಟ್ಟದ ರಂಗೋಲಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.ಪ್ರಾಂಶುಪಾಲ ಶಿವರಾಜ್ ಮಾತನಾಡಿ ಜಾನಪದ ಎಲ್ಲಾ ಕಲೆಗಳಿಗೂ ಮೂಲ ಇದನ್ನು ಎಲ್ಲಾ ಹಂತದಲ್ಲಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು. ಸೋಬಾನೆ ಕಲಾವಿದೆ ಗಂಗಮ್ಮ, ರಾಜೇಶ್ವರಿ ಇವರನ್ನು ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ದೀಪಿಕಾ ಎಂಎಸ್ ಕೃತಿಕಾ ಎಲ್ ಹಾಗೂ ಕನ್ನಡ ಭಾಷೆ ಶಿಕ್ಷಕಿ ಆಶಾರಾಣಿ, ನವೀನ್ ಸಿ.ಜಿ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಓಣಿ ತೋಟ ರತ್ನಾಕರ್, ಚಂದ್ರಶೇಖರ್ , ಕಲ್ಪನಾ ಸುಧಾಮ, ಆಶಾಭೋಸ್ಲೆ, ಯಾಶೀಕಾ ಪ್ರಭಾಕರ್, ವಿಜಯ ಕುಮಾರಿ, ಶೋಭಾ ಶ್ರೀನಿವಾಸ್, ಗಾಯಿತ್ರಮ್ಮ, ಸವಿತಾ, ಸಾಜಿಯಾ, ಮಧು ಶಿರಗಲೀಪುರ ಪುಟ್ಟಮ್ಮ, ರಘು,ಸ್ವಾಮಿ, ಜ್ಯೋತಿ, ಚೇತನ್, ಮಾಲತಿ, ರಂಜಿತಾ ಶ್ರೀನಿವಾಸ್ ಶಿಕ್ಷಕ ವರ್ಗ ಭಾಗವಹಿಸಿದ್ದರು.27ಕೆಟಿಆರ್.ಕೆ.10ಃತರೀಕೆರೆ ಸಮೀಪದ ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕನ್ನಡ ಜಾನಪದ ರಾಜ್ಯೋತ್ಸವವನ್ನು ಕನ್ನಡ ಜಾನಪದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಉದ್ಘಾಟಿಸಿದರು. ಜಿಲ್ಲಾ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ ಮತ್ತಿತರರು ಇದ್ದರು.