ಸಾರಾಂಶ
ಬಾರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ತಲೆ, ಮುಖಕ್ಕೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆಗೆ ಪ್ರಯತ್ನಿಸಿದ್ದ ಪ್ರಕರಣದ ಇಬ್ಬರು ಅಪರಾಧಿಗಳಿಗೆ ತಲಾ 5 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ ₹31 ಸಾವಿರ ದಂಡ ವಿಧಿಸಿ ನಗರದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ದಾವಣಗೆರೆ: ಬಾರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ತಲೆ, ಮುಖಕ್ಕೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆಗೆ ಪ್ರಯತ್ನಿಸಿದ್ದ ಪ್ರಕರಣದ ಇಬ್ಬರು ಅಪರಾಧಿಗಳಿಗೆ ತಲಾ 5 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ ₹31 ಸಾವಿರ ದಂಡ ವಿಧಿಸಿ ನಗರದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹರಿಹರದ ವಿದ್ಯಾನಗರ ನಿವಾಸಿ ಬಳ್ಳಾರಿ ನಾಗರಾಜ (44), ದಾವಣಗೆರೆ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯ ದೇವೇಗೌಡ (32) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಹರಿಹರ ನಗರದ ಸ್ವಪ್ನ ಬಾರ್ ಲೀಸ್ ಮಾಲೀಕರಾಗಿದ್ದ ಪ್ರಭಾಕರ ಜೊತೆ ಬಳ್ಳಾರಿ ನಾಗರಾಜ ಪಾಲುದಾರನಾಗಿದ್ದ. ಬಾರ್ ವ್ಯವಹಾರಸ ಲೆಕ್ಕಪತ್ರ ಕೇಳುತ್ತಿದ್ದ ಹಿನ್ನೆಲೆ 2020ರ ಮಾ.21ರ ರಾತ್ರಿ ಮನೆಯಲ್ಲಿದ್ದ ಪ್ರಭಾಕರ ಮೇಲೆ ಬಳ್ಳಾರಿ ನಾಗರಾಜ, ದೇವೇಗೌಡ, ಬಾಬು ಹಾಗೂ ಇತರೆ ಇಬ್ಬರು ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದರು.ದಂಡದ ಮೊತ್ತದಲ್ಲಿ ಒಟ್ಟು ₹60 ಸಾವಿರಗಳನ್ನು ನೊಂದ ಪ್ರಭಾಕರ್ ಅವರಿಗೆ ನೀಡುವಂತೆ, ಉಳಿದ ₹2 ಸಾವಿರವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ತೀರ್ಪು ನೀಡಿದರು. ಪಿರ್ಯಾದಿ ಪರ ಸರ್ಕಾರಿ ವಕೀಲ ಕೆ.ಎಸ್.ಸತೀಶ ವಾದ ಮಂಡಿಸಿದ್ದರು.
- - - (ಸಾಂದರ್ಭಿಕ ಚಿತ್ರ)