ಸಾರಾಂಶ
ಕುಂದಾಣ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಉದ್ಯೋಗವಕಾಶ ಕಲ್ಪಿಸಿದಾಗ ಮಾತ್ರ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ರೀಜನಲ್ ಕಾಲೇಜ್ ಅಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಸತ್ಯರಂಜನ್ ಮಂಡಲ್ ತಿಳಿಸಿದರು.
ಕುಂದಾಣ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಉದ್ಯೋಗವಕಾಶ ಕಲ್ಪಿಸಿದಾಗ ಮಾತ್ರ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ರೀಜನಲ್ ಕಾಲೇಜ್ ಅಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಸತ್ಯರಂಜನ್ ಮಂಡಲ್ ತಿಳಿಸಿದರು.
ಹೋಬಳಿಯ ವೆಂಕಟಗಿರಿ ಕೋಟೆ ಸಮೀಪದ ರೀಜನಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ೨೦೨೩-೨೪ನೇ ಸಾಲಿನ ಕ್ಯಾಂಪಸ್ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಗೆ ನ್ಯಾಕ್ ಎ ಶ್ರೇಣಿ ಮಾನ್ಯತೆ ಪಡೆದಿದೆ. ಸಂಸ್ಥೆಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಿಲಯನ್ಸ್, ಡೆಲಾಯ್ಟ್, ಇನ್ಫೋಸಿಸ್, ಪಿರಮಾಲ್ ಫೈನಾನ್ಸ್ ಇತ್ಯಾದಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವಕಾಶಗಳು ದೊರೆತು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಉತ್ತಮ ಭವಿಷ್ಯಕ್ಕೆ ಉದ್ಯೋಗಿಗಳು ಶ್ರಮ ಹಾಕಬೇಕು. ಪ್ರತಿವರ್ಷ ಸುಮಾರು ೨೦೦ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಉದ್ಯೋಗ ಮೇಳಕ್ಕೆ ಪ್ರತಿಷ್ಠಿತ ೧೬೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ಬಹುತೇಕ ವಿದ್ಯಾರ್ಥಿಗಳು ಕೆಲಸ ಪಡೆದುಕೊಳ್ಳುತ್ತಾರೆ ಎಂದರು.ವಿದ್ಯಾರ್ಥಿನಿ ಭಾವನ ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಣಕ್ಕೆ ಉತ್ತಮ ವಾತಾವರಣ ಕಲ್ಪಿಸಿದ್ದಾರೆ. ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕ ಗಳಿಸಿದರೆ ಕಾಲೇಜಿಂದಲೇ ಉತ್ತಮ ಕಂಪನಿಗಳಲ್ಲಿ ಉದ್ಯೋಗವಕಾಶಗಳು ಲಭಿಸಲಿವೆ ಎಂದರು.
ಇದೆ ವೇಳೆ ರೀಜನಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ಡೀನ್ ಕಮಲ್ ಭೌಮಿಕ್, ಎಚ್.ಆರ್.ಸುದೀಪ್ ಕುಮಾರ್‌ಸೇನ್, ಸಿಬ್ಬಂದಿ ವರ್ಗದವರು ಹಾಜರಿದ್ದರು.(ಫೋಟೋ ಕ್ಯಾಪ್ಷನ್)
ಕುಂದಾಣ ಹೋಬಳಿಯ ವೆಂಕಟಗಿರಿ ಕೋಟೆ ಸಮೀಪದ ರೀಜನಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ೨೦೨೩-೨೪ನೇ ಸಾಲಿನ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿತು.