ಕನ್ನಡಪ್ರಭ ವಾರ್ತೆ ಸಿದ್ದಾಪುರತಾಲೂಕಿನ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ₹2.35 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಲಂಬಾಪುರ ಮುಖ್ಯ ರಸ್ತೆಯಿಂದ ಹರಗಿವರೆಗಿನ ರಸ್ತೆ(₹20 ಲಕ್ಷ), ವಾಜಗೋಡ ಗ್ರಾಪಂ ವ್ಯಾಪ್ತಿಯ ಐಸೂರು ದೇವಸ್ಥಾನದಿಂದ ದೊಂಬೆ ಜಗಳೆಮನೆ ರಸ್ತೆ(₹20 ಲಕ್ಷ), ಕಾನಳ್ಳಿ ಊರೊಳಗಿನ ರಸ್ತೆ(₹20 ಲಕ್ಷ), ಮುಂಡಿಗೆತಗ್ಗಿನಿಂದ ಬೆಳ್ಳಿಮಡಕೆ ರಸ್ತೆ(₹20 ಲಕ್ಷ), ಕಾವಂಚೂರು ಗ್ರಾಪಂ ವ್ಯಾಪ್ತಿಯ ಗೋಳಗೋಡ ಸೇತುವೆಯಿಂದ ಮತ್ತಿಗಾರ ಹಾನಂಬಿವರೆಗಿನ ರಸ್ತೆ(₹35 ಲಕ್ಷ), ಮತ್ತಿಗಾರ ರಸ್ತೆ(₹20 ಲಕ್ಷ), ಹಾರೇಕೊಪ್ಪ ರಸ್ತೆ(₹20 ಲಕ್ಷ), ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹೆಗ್ಗೋಡಮನೆ ರಸ್ತೆಯಿಂದ ಬಡಗಿಕುಂಬ್ರಿ ರಸ್ತೆ(₹10 ಲಕ್ಷ), 16ನೇ ಮೈಲಿಗಲ್ಲು ಮುಖ್ಯ ರಸ್ತೆಯಿಂದ ಹಲಸಗಾರ ರಸ್ತೆ(₹20 ಲಕ್ಷ), ಮುಠಳ್ಳಿ ಮುಖ್ಯ ರಸ್ತೆಯಿಂದ ಹೊಸಕೊಪ್ಪ ಊರವರೆಗಿನ ರಸ್ತೆ(₹20 ಲಕ್ಷ) ಹಾಗೂ ಹಳಿಯಾಳ ಊರಿನ ರಸ್ತೆ(₹30 ಲಕ್ಷ) ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಾಲದ ಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಇದೇ ವೇಳೆ ತಾಲೂಕಿನ ಅರಳಿಹೊಂಡದ ಭೂತೇಶ್ವರ ದೇವರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದು ಊರಿನ ಅಗತ್ಯ ಮೂಲಭೂತ ಸೌಲಭ್ಯಕ್ಕೆ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಹಾಗೂ ಸ್ಥಳೀಯ ಮುಖಂಡರಿದ್ದರು.₹2.35 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೀಮಣ್ಣ ಭೂಮಿಪೂಜೆ
ತಾಲೂಕಿನ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ₹2.35 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.