ಸಾರಾಂಶ
ಹೊಸಕೋಟೆ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ರೈತರ ಬದುಕು ಹಸನಾಗಲಿದೆ. ರೈತರ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ರೈತರ ಬದುಕು ಹಸನಾಗಲಿದೆ. ರೈತರ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಸೊಣ್ಣದೇನಹಳ್ಳಿ ಗೇಟ್ ಬಳಿ 20 ಕೋಟಿ ವೆಚ್ಚದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಹೆದ್ದಾರಿ ೩೫ರ ಶಿಡ್ಲಘಟ್ಟ ರಸ್ತೆಯನ್ನು ಉಪನಗರ ವರ್ತುಲ ರಸ್ತೆವರೆಗೂ ದ್ವಿಪಥ ರಸ್ತೆ ಹಾಗೂ ನಗರೇನಹಳ್ಳಿವರೆಗೂ 10 ಮೀಟರ್ ರಸ್ತೆ ಮರು ಡಾಂಬರಿಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ಮಹಾನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ಪಟ್ಟಣ ಭೌಗೋಳಿಕವಾಗಿ ಹೂವು ಹಣ್ಣು ತರಕಾರಿ ಬೆಳೆಯುವಂತಹ ಪ್ರದೇಶವಾಗಿದೆ. ನಗರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶಗಳಿದ್ದು, ಬಡಾವಣೆಗಳು ಸಹ ಕ್ಷೀಪ್ರಗತಿಯಲ್ಲಿ ಉಗಮವಾಗುತ್ತಿವೆ. ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ಹೈವೇ ಇಲ್ಲೇ ಹಾದು ಹೋಗಿರುವ ಪರಿಣಾಮ ಸುತ್ತಮುತ್ತಲಿನ ರಸ್ತೆಗಳು ಅಭಿವೃದ್ಧಿ ಕಾಣಬೇಕಾಗಿದೆ. ಆದ್ದರಿಂದ ಉಪನಗರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು.ಈ ವೇಳೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿಎನ್ ಗೋಪಾಲಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ಉದ್ಯಮಿ ಬಿ.ವಿ ಬೈರೇಗೌಡ, ಮುಖಂಡರಾದ ಹುಲ್ಲೂರು ರಾಜಗೋಪಾಲ್, ಗ್ರಾಪಂ ಸದಸ್ಯ ಮಲ್ಲಿಮಾಕನಪುರ ತಮಯ್ಯಗೌಡ, ಇತರರು ಹಾಜರಿದ್ದರು.
ಫೋಟೋ : 23 ಹೆಚ್‌ಎಸ್ ಕೆ 1ಹೊಸಕೋಟೆ ತಾಲೂಕಿನ ಸೊಣ್ಣದೇನಹಳ್ಳಿ ಗೇಟ್ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.
;Resize=(128,128))
;Resize=(128,128))