ಸಾರಾಂಶ
ಮೇಯರ್ ಮನೋಜ್ ಕುಮಾರ್ ಸುರಕ್ಷಾ ಚೆಕ್ ವಿತರಣೆ ಮಾಡಿದರು. ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ಅಶ್ವಿನ್ ಕುಮಾರ್ ಲಾಭಾಂಶ ವಿತರಿಸಿದರು. ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಜನಮಂಗಲ ಪರಿಕರ ವಿತರಣೆ ಮಾಡಿದರು. ನಿರ್ಗತಿಕರ ಮಾಸಾಶನ ಮಂಜೂರಾತಿ ಪತ್ರ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ವಿತರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ವಿದೇಶದಿಂದಲೂ ಜನರು ಆಗಮಿಸಿ ಅಧ್ಯಯನ ನಡೆಸಿ ಅವರಲ್ಲಿ ಅನುಷ್ಠಾನಗೊಳಿಸಲು ಮುಂದಾಗುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸ್ವಾರ್ಥ, ಭ್ರಷ್ಟಾಚಾರ ತುಂಬಿರುವಾಗ ಧರ್ಮಸ್ಥಳ ಯೋಜನೆಯಲ್ಲಿ ಯಾವುದೇ ಸ್ವಾರ್ಥಗಳಿಲ್ಲದೆ ದೇವರ ಕಾರ್ಯ ಎಂಬ ರೀತಿ ನಡೆಯುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪ್ರವರ್ತಿತ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಮಂಗಳೂರು ಹಾಗೂ ಬಜಪೆ ಇವರ ಆಶ್ರಯದಲ್ಲಿ ನಗರದ ಕಸಬಾ ಬೆಂಗ್ರೆಯ ಫುಟ್ಬಾಲ್ ಮೈದಾನದಲ್ಲಿ ಶನಿವಾರ ನಡೆದ ಕೇಂದ್ರ ಒಕ್ಕೂಟ ಪದಗ್ರಹಣ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಫಲಾನುಭವಿಗಳಿಗೆ ಬೆಂಚ್, ಡೆಸ್ಕ್ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಎಸ್‌ಕೆಡಿಆರ್‌ಡಿಪಿ ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಬ್ಯಾಂಕಿಗೆ ಬೇಕಾದ ದಾಖಲೆಗಳನ್ನು ಒದಗಿಸಲು ಜನರಿಗೆ ಆಗದೆ ಸಾಲ ಪಡೆಯುವಲ್ಲಿ ವಂಚಿತರಾಗುತ್ತಿದ್ದ ಸಂದರ್ಭದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರು ಜನರ ಪರವಾಗಿ ನಾನು ಗ್ಯಾರಂಟಿ ನಿಲ್ಲುತ್ತೇನೆ ಎಂದು ದೃಢ ಸಂಕಲ್ಪ ಮಾಡಿದ್ದರು. ಸುಲಭವಾಗಿ ರಾಜ್ಯದ 55 ಲಕ್ಷ ಕುಟುಂಬಗಳಿಗೆ ಸಾಲ ಸಿಗುವಂತಹ ವ್ಯವಸ್ಥೆ ಕಲ್ಪಿಸಿದರು ಎಂದರು.ಮೇಯರ್ ಮನೋಜ್ ಕುಮಾರ್ ಸುರಕ್ಷಾ ಚೆಕ್ ವಿತರಣೆ ಮಾಡಿದರು. ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ಅಶ್ವಿನ್ ಕುಮಾರ್ ಲಾಭಾಂಶ ವಿತರಿಸಿದರು. ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಜನಮಂಗಲ ಪರಿಕರ ವಿತರಣೆ ಮಾಡಿದರು. ನಿರ್ಗತಿಕರ ಮಾಸಾಶನ ಮಂಜೂರಾತಿ ಪತ್ರ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ವಿತರಣೆ ನಡೆಯಿತು.ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್ ದೀಪಂ ಅಧ್ಯಕ್ಷತೆ ವಹಿಸಿದ್ದರು.ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್, ಜನಜಾಗೃತಿ ವೇದಿಕೆ ಮಂಗಳೂರು ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಸ್ತ್ರೀ ಜಾಗೃತಿ ಸಮನ್ವಯ ಅಧಿಕಾರಿ ಡಾ. ಶಂಶಾದ್ ಕುಂಜತ್‌ಬೈಲ್, ಪ್ರಮುಖರಾದ ಮಹಾಬಲ ಚೌಟ, ಶಾಂತಾರಾಮ ಪೈ, ಬ್ಯಾಂಕ್ ಬರೋಡಾದ ನಿತಿನ್, ವಿಜಯ್ ಕುಮಾರ್, ಜನಜಾಗೃತಿ ವೇದಿಕೆ ಮಂಗಳೂರು ತಾಲೂಕು ನಿಕಟ ಪೂರ್ವ ಅಧ್ಯಕ್ಷ ಸದಾಶಿವ ಶೆಟ್ಟಿ, ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಎಂ., ಮಮತಾ ಎನ್. ಶೆಟ್ಟಿ, ನೂತನ ಅಧ್ಯಕ್ಷರಾದ ಗೀತಾ ಪ್ರವೀಣ್, ರಾಜೇಶ್ ಶೆಟ್ಟಿ ಮತ್ತಿತರರು ಇದ್ದರು.