ನವೆಂಬರ್‌ 17ರಂದು ಕೊರವಿ ಗ್ರೀನ್‌ ಸಿಟಿ ಟೌನ್‌ಶಿಪ್‌ ಬಡಾವಣೆಯ ಭೂಮಿಪೂಜೆ

| Published : Nov 15 2024, 12:40 AM IST

ನವೆಂಬರ್‌ 17ರಂದು ಕೊರವಿ ಗ್ರೀನ್‌ ಸಿಟಿ ಟೌನ್‌ಶಿಪ್‌ ಬಡಾವಣೆಯ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರವಿ ಡೆವಲಪರ್ಸ್‌ನಿಂದ ಈಗಾಗಲೇ 22 ಪ್ರಾಜಕ್ಟ್‌ ಪೂರ್ಣಗೊಳಿಸಲಾಗಿದೆ. 23ನೇ ಪ್ರಾಜೆಕ್ಟ್‌ ಆಗಿ ಗರಗ ರಸ್ತೆಯಲ್ಲಿ ಗ್ರೀನ್ ಸಿಟಿ ಟೌನ್‌ಶಿಪ್ ಬಡಾವಣೆ ನಿರ್ಮಿಸಲಾಗುತ್ತಿದೆ. ಈ ಬಡಾವಣೆಯಲ್ಲಿ 1550ಕ್ಕೂ ಹೆಚ್ಚು ನಿವೇಶನಗಳಿವೆ.

ಹುಬ್ಬಳ್ಳಿ:

ಧಾರವಾಡ ಟಾಟಾ ಮೋಟರ್ಸ್‌ ಹತ್ತಿರದ ಗರಗ ರಸ್ತೆಯಲ್ಲಿ ಕೊರವಿ ಡೆವಲಪರ್ಸ್ ಸುಮಾರು 125 ಎಕರೆ ಜಮೀನಿನಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಕೊರವಿ ಗ್ರೀನ್ ಸಿಟಿ ಟೌನ್‌ಶಿಪ್ ವಿನ್ಯಾಸದ ಬೃಹತ್ ಬಡಾವಣೆಯ ಭೂಮಿಪೂಜೆ ಕಾರ್ಯಕ್ರಮ ನ. 17ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕೊರವಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕೊರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರವಿ ಡೆವಲಪರ್ಸ್‌ನಿಂದ ಈಗಾಗಲೇ 22 ಪ್ರಾಜಕ್ಟ್‌ ಪೂರ್ಣಗೊಳಿಸಲಾಗಿದೆ. 23ನೇ ಪ್ರಾಜೆಕ್ಟ್‌ ಆಗಿ ಗರಗ ರಸ್ತೆಯಲ್ಲಿ ಗ್ರೀನ್ ಸಿಟಿ ಟೌನ್‌ಶಿಪ್ ಬಡಾವಣೆ ನಿರ್ಮಿಸಲಾಗುತ್ತಿದೆ. ಈ ಬಡಾವಣೆಯಲ್ಲಿ 1550ಕ್ಕೂ ಹೆಚ್ಚು ನಿವೇಶನಗಳಿದ್ದು, ಶಾಲೆ, ಕಾಲೇಜು, ಆಸ್ಪತ್ರೆ, ಪಂಚತಾರಾ ಹೊಟೇಲ್, ಫಂಕ್ಷನ್ ಹಾಲ್, ಸ್ವಿಮ್ಮಿಂಗ್‌ಫೂಲ್, ಜಿಮ್, ಪೆಟ್ರೋಲ್ ಬಂಕ್, ಮೈದಾನ, ವಿಶಾಲ ಉದ್ಯಾನ ಸೇರಿದಂತೆ ಅನೇಕ ಸೌಲಭ್ಯಕ್ಕೆ ಜಾಗೆ ಮೀಸಲಿರಿಸಲಾಗಿದೆ ಎಂದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರು, ಎರಡೆತ್ತಿನಮಠದ ಸಿದ್ದಲಿಂಗ ಶ್ರೀ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಲಿದ್ದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.ಚೇತನ್ ಬ್ಯುಸಿನೆಸ್ ಕಾಲೇಜು ನಿರ್ದೇಶಕ ಡಾ. ವಿಶ್ವನಾಥ ಕೊರವಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿಯೇ ಇದೊಂದು ಬೃಹತ್ ಪ್ರೊಜೆಕ್ಟ್‌ ಆಗಿದೆ. ಜನಸಾಮಾನ್ಯರಿಗೂ ನಿವೇಶನ ಕಲ್ಪಿಸಬೇಕೆಂಬ ಉದ್ದೇಶದಿಂದ ಸುಲಭ ಕಂತುಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.