ಸಾರಾಂಶ
ಮುಂಡಗೋಡ: ಭಾನುವಾರ ಸಂಜೆ ಬಿಜೆಪಿಯವರು ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಮತಯಾಚಿಸಿದರು.
ಇಲ್ಲಿಯ ಗ್ರಾಮ ದೇವಿ ಮಾರಿಕಾಂಬಾ ದೇವಾಲಯದಿಂದ ಹೊರಟ ರೋಡ್ ಶೋ ಶಿವಾಜಿ ಸರ್ಕಲ್ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರಪತ್ರ ಹಂಚುವ ಮೂಲಕ ನರೇಂದ್ರ ಮೋದಿ ಹಾಗೂ ಅಭ್ಯರ್ಥಿ ಪರವಾಗಿ ಘೋಷಣೆ ಮೊಳಗಿಸಿದರು.ಬಳಿಕ ಬಂಕಾಪುರ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ತೆರಳಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಮಾಡಿದ ಸಾದನೆಗಳ ಬಗ್ಗೆ ವಿವರಿಸಿ ಪಾದಯಾತ್ರೆಯನ್ನು ಮೊಟಕುಗೊಳಿಸಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ವಿನಾಯಕ ರಾಯ್ಕರ, ನಾಗರಾಜ ಕುನ್ನೂರ, ಸುನೀಲ ವೇಣೇಕರ, ಮಂಜುನಾಥ ಪಾಟೀಲ, ಪಿ.ಜಿ. ತಂಗಚ್ಚನ್, ಗುರು ಕಾಮತ್, ವೀಣಾ ಓಶಿಮಠ, ಸೌಮ್ಯ ರೇವಣಕರ, ತೃಪ್ತಿ ಬಜಂತ್ರಿ, ಜಯಸುಧಾ ಭೋವಿ, ಅಶೋಕ ಚಲವಾದಿ, ಮಂಜುನಾಥ ರ‍್ಮಲಕರ, ಶಕುಂತಲಾ ನಾಯಕ, ನಿರ್ಮಲಾ ಬೆಂಡ್ಲಗಟ್ಟಿ, ಸುವರ್ಣ ಕೊಟಗುಣಸಿ, ತುಕಾರಾಮ ಇಂಗಳೆ, ಭರತರಾಜ ಹದಳಗಿ, ನಿಂಗಜ್ಜ ಕೋಣನಕೇರಿ, ಮಂಜುನಾಥ ಹಿರೇಮಠ, ಶಂಕರ ಲಮಾಣಿ, ಗೌರಮ್ಮ ಕೊಳ್ಳಾನವರ, ಮಂಜುನಾಥ ಶೇಟ್ ಮುಂತಾದವರು ಉಪಸ್ಥಿತರಿದ್ದರು.ಕಾಂಗ್ರೆಸ್ ಮನೆಗೆ ಕಳುಹಿಸಲು ಮತದಾರರು ಸಜ್ಜು
ಶಿರಸಿ: ಕಾಂಗ್ರೆಸ್ಸಿಗರಿಗೆ ಚೊಂಬು ಬಹಳ ಪ್ರೀತಿ. ೬೫ ವರ್ಷ ದೇಶಕ್ಕೆ ಚೊಂಬು ಹಿಡಿಸಿದ್ದಾರೆ. ಈಗ ಪುನಃ ಚೊಂಬು ಹಿಡಿಸಲು ಬಂದಿರುವ ಕಾಂಗ್ರೆಸಿಗರನ್ನು ಮತದಾರರು ಮನೆಗೆ ಕಳುಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ವಾಗ್ದಾಳಿ ನಡೆಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವ ವಹಿಸಿದ್ದವರು ಸುಳ್ಳಿನ ಪ್ರಚಾರ, ಹತಾಶರಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಮೀಸಲಾತಿ ಬದಲಾಯಿಸಲು ಅವಕಾಶವಿಲ್ಲ. ಸಂವಿಧಾನದ ಕುರಿತು ಅಮಿತ್ ಶಾ ಹೇಳಿಕೆಯನ್ನು ತಿರುಚಿದ ಕಾಂಗ್ರೆಸ್‌ನ ಕೆಲವರು ಕಂಬಿ ಎಣಿಸುವ ದಿನ ಹತ್ತಿರ ಬರಲಿದೆ. ೨೦೧೫ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಪೂರ್ವದಲ್ಲಿ ಉದ್ಯೋಗ ಸೃಷ್ಟಿ ಮಾಡದೇ ದೇಶವನ್ನು ದಿವಾಳಿ ಅಂಚಿಗೆ ತಲುಪಿಸಿರುವುದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು.
೨೦೨೩- ೨೪ರಲ್ಲಿ ದೇಶದಲ್ಲಿ ಖಾತರಿ ಉದ್ಯೋಗ ಹೊಂದಿರುವವರು ೨೨ ಕೋಟಿ ಆಗಿದೆ. ಸುಮಾರು ೭ ಕೋಟಿ ಉದ್ಯೋಗ ಸೇರ್ಪಡೆಯಾಗಿದೆ. ನೋಂದಾಯಿತ ಉದ್ಯಮಿಗಳ ಸಂಖ್ಯೆ ೬.೫ ಕೋಟಿ ದಾಟಿದೆ. ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಲ್ಲಿ ೭.೫ ಲಕ್ಷ ಉದ್ಯೋಗಿಗಳು ಉದ್ಯೋಗ ಪಡೆದಿದ್ದಾರೆ. ಎಚ್‌ಎಎಲ್ ಬಗ್ಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರು ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಿದ್ದರು. ಎಚ್‌ಎಎಲ್ ನಮ್ಮ ದೇಶದ ಹೆಮ್ಮೆಯ ಸಂಸ್ಥೆ. ₹೮೪ ಸಾವಿರ ಕೋಟಿ ಒಡಂಬಡಿಕೆ ಮಾಡಿಕೊಂಡು ಮುಂದುವರಿಯುತ್ತಿರುವ ದೇಶಗಳಿಗೆ ಯುದ್ಧ ವಿಮಾನ ತಯಾರಿಸಿ, ರಫ್ತು ಮಾಡುವ ಸಂಸ್ಥೆಯಾಗಿದೆ. ಈಗ ₹೫೦ ಸಾವಿರ ಕೋಟಿ ಒಡಂಬಡಿಕೆಯ ಹಂತದಲ್ಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಕ್ತಾರ ಸದಾನಂದ ಭಟ್, ಜಿಲ್ಲಾ ಖಜಾಂಚಿ ರಮಾಕಾಂತ ಭಟ್, ಪ್ರಮುಖರಾದ ಶ್ರೀರಾಮ ನಾಯ್ಕ, ರವಿ ಶೆಟ್ಟಿ ಇದ್ದರು.