ಕಡೂರುತಾಲೂಕು ಪತ್ರಕರ್ತರ ಸಂಘ ಕಡೂರಿನ ನೂತನ ಅಧ್ಯಕ್ಷರಾಗಿ ಬೀರೂರಿನ ವರದಿಗಾರ ಎಂ.ರಾಜು ಅವಿರೋಧವಾಗಿ ಆಯ್ಕೆಯಾದರು.
ತಾಲೂಕು ಪತ್ರಕರ್ತರ ಸಂಘಕ್ಕೆ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕು ಪತ್ರಕರ್ತರ ಸಂಘ ಕಡೂರಿನ ನೂತನ ಅಧ್ಯಕ್ಷರಾಗಿ ಬೀರೂರಿನ ವರದಿಗಾರ ಎಂ.ರಾಜು ಅವಿರೋಧವಾಗಿ ಆಯ್ಕೆಯಾದರು. ಕರ್ನಾಟಕ ರಾಜ್ಯ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರ ನೇತೃತ್ವದಲ್ಲಿ, ಜಿಲ್ಲಾ ಪತ್ರಕರ್ತರ ಸಂಘ ಚಿಕ್ಕಮಗಳೂರು, ತಾಲೂಕು ಪತ್ರಕರ್ತರ ಸಂಘಕ್ಕೆ ಗುರುವಾರ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿ.ಎಂ.ರಾಜಶೇಖರ್ ಆಯ್ಕೆ ನಂತರ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿ, ಈಗಾಗಲೇ ಸಂಘ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಅಧ್ಯಕ್ಷ ಎಂ.ಎನ್.ಜಗದೀಶ್ ರಾಜೀನಾಮೆಯಿಂದ ತೆರ ವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿತ್ತು. ತಾಲೂಕು ಪತ್ರಕರ್ತರ ಸಂಘ ಕಡೂರಿನ ಸರ್ವಸದಸ್ಯರು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಂಘದ ಕಾರ್ಯದರ್ಶಿ ಸಮ್ಮುಖದಲ್ಲಿ ಆಯ್ಕೆ ನಡೆಸಲಾಗಿದೆ. ರಾಜ್ಯ ಸಂಘ ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ₹10 ಲಕ್ಷ ವಿಮೆ ಸೌಲಭ್ಯ, ಆಯುಷ್ಮಾನ್ ಸೌಲಭ್ಯ ಸೇರಿದಂತೆ ಸಂಘ ಡಿಜಿಟಲ್ ವ್ಯವಸ್ಥೆ ,ವೆಬ್ಸೈಟ್, ತಂತ್ರಜ್ಞಾನ ಕುರಿತಂತೆ ರಾಜ್ಯ ಸಂಘದ ಸೌಲಭ್ಯಗಳ ಮಾಹಿತಿ ನೀಡಿದರು. ಮುಂದಿನ ದಿನ ಗಳಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.ನೂತನ ಅಧ್ಯಕ್ಷ ಎಂ.ರಾಜು ಮಾತನಾಡಿ, ಸದಸ್ಯರೆಲ್ಲ ಒಮ್ಮತದಿಂದ ಸಂಘವನ್ನು ಸಂಘಟನೆ ಮೂಲಕ ಬೆಳೆಸಲು ಹಾಗೂ ರಾಜ್ಯ, ಜಿಲ್ಲಾ ಸಂಘದ ಚಟುವಟಿಕೆಗಳಲ್ಲಿ ತಾಲೂಕು ಸಂಘದ ಸದಸ್ಯರು ಭಾಗವಹಿಸಲು ಪೂರಕವಾಗುವಂತೆ ಯಾವ ಸದಸ್ಯರಿಗೂ ಲೋಪವಾಗದಂತೆ ಸರ್ವರನ್ನು ಸಮಾನವಾಗಿ ಕಂಡು ನನ್ನ ಅಧಿಕಾರ ಅವಧಿಯಲ್ಲಿ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ರಾಜು ಎಂ.ಅಧ್ಯಕ್ಷರು, ಉಪಾಧ್ಯಕ್ಷ ಮಂಜಪ್ಪ, ಬೀರೂರು ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಕಾರ್ಯದರ್ಶಿ ರೇಣುಕಪ್ಪ ಬಿ.ಕೆ., ಸಂಘಟನಾ ಕಾರ್ಯದರ್ಶಿಗಳಾಗಿ ಬೀರೂರು ಮುರುಗೇಶಪ್ಪ ಹೆಚ್.ಓಂಕಾರಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಮೆಣಸಿನಕಾಯಿ ಹೊಸಹಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಲ ದಾಳ್ ಕುಮಾರ್, ಕೆ.ಎನ್.ಕೃಷ್ಣಮೂರ್ತಿ, ಎ.ಜೆ.ಪ್ರಕಾಶಮೂರ್ತಿ,ಓಂಕಾರಮೂರ್ತಿ, ಬೀರೂರು ಗಿರೀಶ್(ಉದಯವಾಣಿ), ರೇಣುಕಾಪ್ರಸಾದ್, ಡಿ.ಡಿ. ಸೋಮಶೇಖರ್(ಅಂತರಂಗ), ಬೀರೂರು ಶಿವಣ್ಣ, ದೊ.ರಾ.ಬಸವರಾಜು, ಜಿಲ್ಲಾಜ್ವಾಲೆ ಜಗದೀಶ್, ವಕ್ಕಲಗೆರೆ ಶಿವು,ಪ್ರಭಾಕರ್, ರೇಣುಕಪ್ಪ, ನಾಗರಾಜನಾಯ್ಕ,ಬಾಲಣ್ಣ,ಅಜ್ಜಂಪುರ ತಾಲೂಕಿನ ಸಿದ್ದೇಗೌಡರು. ಗೌರವ್ ಇದ್ದರು.8ಕೆಕೆಡಿಯು2.ತಾಲೂಕು ಪತ್ರಕರ್ತರ ಸಂಘ ಕಡೂರಿನ ನೂತನ ಅಧ್ಯಕ್ಷರಾಗಿ ಬೀರೂರು ಎಂ.ರಾಜು ಅವಿರೋಧವಾಗಿ ಆಯ್ಕೆ ಯಾದರು. ರಾಜ್ಯ ಅಧ್ಯಕ್ಷ ಜಿ.ಎಂ.ರಾಜಶೇಖರ್,ಬ್ಯಾಲದಾಳ್ ಕುಮಾರ್,ಮಂಜುನಾಥ್,ಕಡೂರು ದೇವೇಂದ್ರ ಮತ್ತು ಸಂಘದ ಸದಸ್ಯರು ಇದ್ದರು.