ನರಸಿಂಹರಾಜಪುರಇಂದಿನ ಮಕ್ಕಳೇ ಮುಂದಿನ ಪ್ರಜೆಗಳಂತೆ ಇಂದಿನ ಮಕ್ಕಳೇ ಮುಂದಿನ ವ್ಯವಹಾರಸ್ಥರಾಗಿದ್ದು ಈಗಿನಿಂದಲೇ ಮಕ್ಕಳು ಬ್ಯಾಂಕಿನ ಎಲ್ಲಾ ವ್ಯಹಹಾರಗಳನ್ನು ತಿಳಿದುಕೊಂಡಿರಬೇಕು ಎಂದು ಮದರ್ ಸ್ವಯಂ ಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆರ್ಥಿಕ ಪ್ರಸಾರಕಿ ಎಂ.ಪಿ.ಸುನೀತಾ ಕರೆ ನೀಡಿದರು.
- ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಇಂದಿನ ಮಕ್ಕಳೇ ಮುಂದಿನ ಪ್ರಜೆಗಳಂತೆ ಇಂದಿನ ಮಕ್ಕಳೇ ಮುಂದಿನ ವ್ಯವಹಾರಸ್ಥರಾಗಿದ್ದು ಈಗಿನಿಂದಲೇ ಮಕ್ಕಳು ಬ್ಯಾಂಕಿನ ಎಲ್ಲಾ ವ್ಯಹಹಾರಗಳನ್ನು ತಿಳಿದುಕೊಂಡಿರಬೇಕು ಎಂದು ಮದರ್ ಸ್ವಯಂ ಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆರ್ಥಿಕ ಪ್ರಸಾರಕಿ ಎಂ.ಪಿ.ಸುನೀತಾ ಕರೆ ನೀಡಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಸೋಮವಾರ ಸೋಷಿಯಲ್ ವೆಲ್ ಫೇರ್ ಸೊಸೈಟಿ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕ್ ವ್ಯವಹಾರ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳು ಅಂತರ್ಜಾಲದ ಮೂಲಕ ಮೊಬೈಲ್ ನಲ್ಲಿ ಯಾವುದೇ ರೀತಿ ಆಟಗಳನ್ನು ಆಡಬಾರದು. ಅಪರಿಚಿತ ಕರೆ ಬಂದಾಗ ಓಟಿಪಿ , ಬ್ಯಾಂಕಿನ ಖಾತೆ ನಂಬರ್, ಆಧಾರ್ ಸಂಖ್ಯೆ ಹೇಳಬಾರದು ಎಂದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಪ್ರಸಾರಕಿ ರಂಜಿತ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ 7 ರಿಂದ 8 ವಿಮೆ ಯೋಜನೆಗಳಿವೆ. ಪ್ರಧಾನ ಮಂತ್ರಿ ಸುರಕ್ಷಾ ಬೀಮ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ ಯೋಜನೆ ಇದೆ. ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಜೀರೋ ಅಕೌಂಟ್ ಖಾತೆ ತೆರೆಯಬಹುದು. ಜನ್ ಧನ್ ಖಾತೆ ತೆರೆಯು ವುದರಿಂದ ರುಫೆ ಎಂಬ ಎಟಿಎಂ ಕಾರ್ಡು ಸಿಗಲಿದೆ. ತಿಂಗಳಿಗೆ ಒಂದು ಬಾರಿ ಈ ಎಟಿಎಂ ಕಾರ್ಡು ಉಪಯೋಗಿಸುತ್ತಿದ್ದರೆ ಅಂತಹ ಖಾತೆದಾರರು ಅಕಸ್ಮಿಕವಾಗಿ ಮೃತಪಟ್ಟರೆ ₹50 ಸಾವಿರ ವಿಮೆ ಹಣ ಸಿಗಲಿದೆ ಎಂದರು.ಅತಿಥಿಯಾಗಿದ್ದ ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿ ಗಳು ಯಾವುದೇ ಹಿಂಜರಿಕೆ ಇಲ್ಲದೆ ಆತ್ಮವಿಶ್ವಾಸದಿಂದ ಜೀವನ ಮಾಡಬೇಕು ಎಂದರು. ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸಿನಿ ಮಾತನಾಡಿ, ಪ್ರೌಢ ಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳಿಗೂ ಸಮಸ್ಯೆ ಬಂದಾಗ ಮಹಿಳಾ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಹೇಳಿಕೊಂಡರೆ ನಾವು ಗುಪ್ತವಾಗಿ ಸಮಾಲೋಚನೆ ನಡೆಸಿ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್ ಮಾತನಾಡಿ, ಮಕ್ಕಳು ಬ್ಯಾಂಕಿನಲ್ಲಿ ಸಿಗುವ ಸಾಲ ಹಾಗೂ ರಿಯಾಯ್ತಿಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಬಗ್ಗೆ ಎಲ್ಲಾ ಮಕ್ಕಳು ಮಾಹಿತಿ ಪಡೆದುಕೊಳ್ಳಬೇಕು ಎಂದರು.ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರಸಾರಕರಾದ ಸೌಮ್ಯ, ನಿಷ್ಮಾ ಮಾಹಿತಿ ನೀಡಿದರು.ಸಭೆಯಲ್ಲಿ ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಶಿವಮೂರ್ತಿ ಉಪಸ್ಥಿತರಿದ್ದರು.