ಬಿಜೆಪಿಯವರು ನಮ್ಮನ್ನು, ನಿಮ್ಮನ್ನು ಮಾರಬಹುದು

| Published : Apr 25 2024, 01:03 AM IST

ಸಾರಾಂಶ

ಬಿಜೆಪಿ ಅವರು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದು, ಮುಂದೆ ನಮ್ಮನ್ನು, ನಿಮ್ಮನ್ನು ಮಾರಾಟ ಮಾಡಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ಬಿಜೆಪಿ ಅವರು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದು, ಮುಂದೆ ನಮ್ಮನ್ನು, ನಿಮ್ಮನ್ನು ಮಾರಾಟ ಮಾಡಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.

ತಿಕೋಟಾ ಸಮೀಪದ ಜತ್‌ ರಸ್ತೆಯಲ್ಲಿ ರಾಜು ಆಲಗೂರು ಅವರ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಅಷ್ಟೇ ಸತ್ಯ. ರಾಜ್ಯದಲ್ಲಿ ಕಾಂಗ್ರೆಸ್ 18 ರಿಂದ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಎಂ.ಬಿ.ಪಾಟೀಲ ಮಾತನಾಡಿ, ನೀರಾವರಿಯಿಂದಾಗಿ ಬರದ ನಾಡಿನಲ್ಲಿ ಈಗ ದೊಡ್ಡ ಬದಲಾವಣೆಯಾಗಿದ್ದು, ಬರದ ಈ ಸಂದರ್ಭದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಟ್ಯಾಂಕರ್ ಮುಂದೆ ಹೋಗಿ ನಿಲ್ಲುವುದು ತಪ್ಪಿದೆ. ಮುಂಬರುವ ದಿನಗಳಲ್ಲಿ ತುಬಚಿ- ಬಬಲೇಶ್ವರಏತ ನೀರಾವರಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಳ್ಳಗಳಿಗೆ ನೀರು ಬಿಡುವ ಮೂಲಕ ಪ್ರತಿಯೊಬ್ಬ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಬನಿ ನಿಯಮಿತ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ, ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿದರು.

ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕ ಸಯ್ಯದ ಬುರಾನ, ವಿಧಾನ ಪರಿಷತ್‌ ಶಾಸಕ ಪ್ರಕಾಶ ರಾಠೋಡ ಮಾತನಾಡಿದರು.

ಇದೇ ವೇಳೆ ಜಿಪಂ ಬಿಜೆಪಿ ಮಾಜಿ ಸದಸ್ಯೆ ಶೋಭಾ ಹಲ್ಯಾಳ ಮತ್ತು ತಿಕೋಟಾ ತಾಲೂಕು ಬಿಜೆಪಿ ಕಾರ್ಯದರ್ಶಿ ಹಮೀದ ಬಾಗವಾನ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಿಕೋಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಗೊಂಡ ಬಿರಾದಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಕಾಂಗ್ರೆಸ್ ಅಬ್ದುಲ್‌ ಹಮೀದ್ ಮುಶ್ರಿಫ್, ಮುಖಂಡರಾದ ಸಿದ್ದಣ್ಣ ಸಕ್ರಿ, ಅರ್ಜುನ ರಾಠೋಡ, ಜಕ್ಕಪ್ಪಯಡವೆ, ಮಧುಕರ ಜಾಧವ, ಭಾಗೀರಥಿ ತೇಲಿ, ಯಾಕೂಬ ಜತ್ತಿ, ಪ್ರಭಾವತಿ ನಾಟಿಕಾರ, ಆರ್.ಜಿ.ಯರನಾಳ, ವಿ. ಎಸ್. ಪಾಟೀಲ, ಬಸವರಾಜ ಪಾಟೀಲ, ಟಪಾಲ್‌ಎಂಜಿನಿಯರ್, ಶಂಕರ ಚವ್ಹಾಣ, ಸುಜಾತಾ ಕಳ್ಳಿಮನಿ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಗೀತಾಂಜಲಿ ಪಾಟೀಲ, ಡಾ. ಮೈಶಾಳ, ಕಾಂತಾ ನಾಯಕ, ಎಂ. ಎಸ್. ಲೋಣಿ, ಸೋಮನಾಥ ಕಳ್ಳಿಮನಿ, ವಿ.ಎಸ್.ಪಾಟೀಲ, ಈರಗೊಂಡ ಬಿರಾದಾರ, ಜಾಕೀರ ಬಾಗವಾನ, ಡಿ. ಎಲ್. ಚವ್ಹಾಣ, ಪ್ರಶಾಂತ ಝಂಡೆ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ದಾಶ್ಯಾಳ ಗ್ರಾಮದ ವಯೋವೃದ್ಧೆಯೊರ್ವಳು ವೇದಿಕೆ ಬಳಿ ಬಂದು ಕಾಂಗ್ರೆಸ್‌ ಗ್ಯಾರಂಟಿಯಿಂದ ಅನುಕೂಲವಾಗಿದೆ ಎಂದು ಸಚಿವರ ಮುಂದೆ ತನ್ನ ಮನದ ಮಾತು ಹೇಳಿಕೊಂಡರು.

--ಕೋಟ್‌....

ಮತದಾರರಿಗೆ ಈಗ ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳ ಅರಿವಾಗಿದ್ದು, ಅವರೆಲ್ಲರೂ ಈಗ ಜಾಗೃತರಾಗಿದ್ದಾರೆ. ಅಷ್ಟೇ ಅಲ್ಲ, ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕುವ ಮೂಲಕ ಭರ್ಜರಿ ಗೆಲುವಿಗೆ ಕೈಜೋಡಿಸಲಿದ್ದಾರೆ ಎಂದು

-ಮಲ್ಲಿಕಾರ್ಜುನ.ಎಸ್. ಲೋಣಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ