ಮಹಿಳಾ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Dec 17 2023, 01:45 AM IST

ಮಹಿಳಾ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಇನ್ನೊಂದೆಡೆ ಅತ್ಯಂತ ಅಪಾಯಕಾರಿ ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಶನಿವಾರ ಗದಗ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ಟೈರ್ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶಗದಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಇನ್ನೊಂದೆಡೆ ಅತ್ಯಂತ ಅಪಾಯಕಾರಿ ಹೆಣ್ಣು ಭ್ರೂಣಹತ್ಯೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಶನಿವಾರ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ರಾಜ್ಯದಲ್ಲಿ ಭ್ರೂಣ ಹತ್ಯೆಯ ಜಾಲಗಳು ತಾಂಡವಾಡುತ್ತಿರುವ ಘಟನೆಗಳು ಗೊತ್ತಿದ್ದರೂ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದಲ್ಲದೇ ಕಣ್ಣಿಗೆ ಕಾಣದಂತೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಬೆಳಗಾವಿಯ ವಂಟಿಮೂರಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಯಿಂದ ನೊಂದ ಸಂತ್ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಈ ಸರಕಾರ ದಲಿತರ ಕುರಿತು ಮೊಸಳೆ ಕಣ್ಣೀರು ಹಾಕುತ್ತಿದೆ. ರಾಜ್ಯದ ಆಡಳಿತ ಯಂತ್ರವೇ ಬೆಳಗಾವಿಗೆ ಆಗಮಿಸಿದಾಗ ಇಲ್ಲಿಯೇ ಇಂಥ ಘಟನೆ ನಡೆದಿರುವುದು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ. ಕಾನೂನು ಸಚಿವರು ಸಾಕಷ್ಟು ಭಾಷಣ ಮಾಡುತ್ತಾರೆ ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗಿ ಕಾನೂನು ಸುವ್ಯವಸ್ಥೆ ಇದೆಯೇ ಎನ್ನುವ ಸಂಶಯ ಜನರಲ್ಲಿ ಮೂಡುತ್ತಿದೆ ಎಂದು ಜಿಲ್ಲಾ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಮಾತನಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ರಾಜು ಕುರಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಸಿದ್ರಾಮಪ್ಪ ಮೊರಬದ, ಮಂಜುನಾಥ ಮೆಣಸಗಿ, ಬಿ.ಎಚ್. ಲದ್ವಾ, ನಗರ ಅಧ್ಯಕ್ಷ ಅನೀಲ ಅಬ್ಬಿಗೇರಿ, , ಅಶೋಕ ಸಂಕಣ್ಣವರ, ಎಂ.ಎಂ. ಹಿರೇಮಠ, ಡಾ. ಶೇಖರ ಸಜ್ಜನರ, ಶಿವು ಹಿರೇಮನಿಪಾಟೀಲ, ಭದ್ರೇಶ ಕುಸ್ಲಾಪೂರ, ಸಿದ್ದು ಪಲ್ಲೇದ, ಛಗನ ರಾಜಪುರೋಹಿತ, ಮಾಂತೇಶ ನಲವಡಿ, ಪ್ರಕಾಶ ಅಂಗಡಿ, ಅಶೋಕ ಕುಡತಿನಿ, ಬೂದಪ್ಪ ಹಳ್ಳಿ, ಈರ್ಷಾದ ಮಾನ್ವಿ, ಮುತ್ತಪ್ಪ ಮೂಲಿಮನಿ, ವಿನಾಯಕ ಮಾನ್ವಿ, ಹನಮಂತಪ್ಪ ದಿಂಡೆಣ್ಣವರ, ಮಾಧುಸಾ ಮೇರವಾಡೆ, ರಮೇಶ ಸಜ್ಜಗಾರ, ಶಂಕರ ಕರಬಿಷ್ಠಿ, ಮಂಜುನಾಥ ಶಾತಗೇರಿ, ಚಂದ್ರು ತಡಸದ, ಮಂಜು ಮುಳಗುಂದ, ಸುರೇಶ ಚಿತ್ತರಗಿ, ಜಯಶ್ರೀ ಉಗಲಾಟದ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮೀ ಮಾನ್ವಿ, ಕಮಲಾಕ್ಷಿ ಗೊಂದಿ, ರೇಖಾ ಬಂಗಾರಶೆಟ್ಟರ, ಅಕ್ಕಮ್ಮ ವಸ್ತ್ರದ, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ಶಂಕರ ಕಾಕಿ, ರಾಚಯ್ಯ ಹೊಸಮಠ, ಅಪ್ಪಣ್ಣ ಟೆಂಗಿನಕಾಯಿ, ಮಹಾದೇವಪ್ಪ ಚಿಂಚಲಿ, ಸಿದ್ರಾಮೇಶ ಹಿರೇಮಠ, ವಿನೋದ ಹಂಸನೂರ ಮುಂತಾದವರು ಹಾಜರಿದ್ದರು. ತಡವಾಗಿ ಆಗಮಿಸಿದ ಅಧ್ಯಕ್ಷರು:ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಜಿಲ್ಲಾ ಬಿಜೆಪಿ ಬೆಳಗ್ಗೆ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನಾ ಸ್ಥಳಕ್ಕೆ ಹಲವಾರು ಹಿರಿಯರು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಆದರೆ ನಗರಸಭೆ ಅಧ್ಯಕ್ಷೆ ಉಷಾ ದಾಸರ 12 ಗಂಟೆಯ ವೇಳೆಗೆ ಆಗಮಿಸಿದರು. ಇದು ಅಲ್ಲಿದ್ದ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಪಕ್ಷದ ಕೃಪೆಯಿಂದ ಅಧಿಕಾರದಲ್ಲಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಹುದ್ದೆ ಪಡೆದಿದ್ದಾರೆ. ಚಿಕ್ಕವರಾಗಿ ಸಮಯಕ್ಕಿಂತ ಮೊದಲೇ ಆಗಮಿಸಿ, ಹೋರಾಟ ಸಂಘಟಿಸುವುದು, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿಲ್ಲ ಹೀಗಾದರೇ ಹೇಗೆ? ಎಂದು ಅಲ್ಲಿದ್ದ ಪಕ್ಷ ನಿಷ್ಠರು ಬೇಸರ ವ್ಯಕ್ತ ಪಡಿಸಿದರು.