17 ರಿಂದ ಅ. 2ರವರೆಗೆ ಬಿಜೆಪಿಯಿಂದ ಸೇವಾ ಪಾಕ್ಷಿಕ

| Published : Sep 14 2025, 01:04 AM IST

ಸಾರಾಂಶ

ಚಿಕ್ಕಮಗಳೂರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನ ಸೆ.17 ರಿಂದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವಾದ ಅ.2ರವರೆಗೆ ಜಿಲ್ಲಾ ಬಿಜೆಪಿಯಿಂದ ಭೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸೇವಾ ಪಾಕ್ಷಿಕ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನ ಸೆ.17 ರಿಂದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವಾದ ಅ.2ರವರೆಗೆ ಜಿಲ್ಲಾ ಬಿಜೆಪಿಯಿಂದ ಭೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸೇವಾ ಪಾಕ್ಷಿಕ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೇವಾ ಪಾಕ್ಷಿಕ ಕಾರ್ಯಕ್ರಮ ಯಶಸ್ವಿ ಗೊಳಿಸಲು ಜಿಲಗ್ಲಾ ಮಟ್ಟದಲ್ಲಿ 5 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ಜಿಲ್ಲಾ ಸಂಚಾಲಕರಾಗಿ ಬಿಜೆಪಿ ಮುಖಂಡ ಬೆಳವಾಡಿ ರವೀಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಶ್ ಕೋಟ್ಯಾನ್, ರಾಜೇಶ್ವರಿ, ವೆನಿಲಾ ಭಾಸ್ಕರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಮನೆ ಮನೆಗೂ ಸಂಪರ್ಕ ಸಾಧಿಸುವ ಮೂಲಕ ಪಕ್ಷ ಸಂಘಟಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ಮೋದಿಜೀ ಜನ್ಮದಿನ ಸೆ.17 ರಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನ ಅ.2ರವರೆಗೆ ಸೇವಾ ಪಾಕ್ಷಿಕ ಆನೇಕ ಕಾರ್ಯಕ್ರಮವನ್ನು ಬೂತ್ ನಿಂದ ಜಿಲ್ಲೆವರೆಗೂ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಕಾರ್ಯಕರ್ತರು, ಅಭಿಮಾನಿ ಗಳು ನಾಗರಿಕರನ್ನು ಒಳಗೊಂಡತ್ತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಸ್ವಚ್ಛತಾ ಅಭಿಯಾನ ಶಾಲೆ, ಕಾಲೇಜು, ಅಂಗನವಾಡಿ, ದೇವಾಲಯಗಳ ಆವರಣ, ಬಸ್ ಸ್ಟಾಂಡ್, ಆಸ್ಪತ್ರೆ, ಹಾಸ್ಟೆಲ್ಗಳು ಹಾಗೂ ಪಾರ್ಕ್‌ಗಳು ಹೀಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡುವ ಮೂಲಕ ಅಭಿಯಾನ ಪ್ರಾರಂಭಿಸಲಾಗುವುದು. ತಾಯಿ ಹೆಸರಿನಲ್ಲಿ ಸಸಿ ನೆಡುವುದು. ಸೆ. 25 ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಗಾಂಧೀಜಿ ಮತ್ತು ಮೋದಿಜೀ ಹೆಸರಿನಲ್ಲಿ ಸಸಿ ನೆಡಲಾಗುವುದು ಎಂದರು.ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ಮೋದಿಜೀರಿಗೆ 75ವರ್ಷ ತುಂಬಿದ ಈ ಸಂಧರ್ಭದಲ್ಲಿ 15 ಯೂನಿಟ್ ಗಿಂತಲೂ ಹೆಚ್ಚು ರಕ್ತದಾನವನ್ನು ಕಾರ್ಯಕರ್ತರ ಮುಖಾಂತರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪಕ್ಷದ ಕಡೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಗಳನ್ನು ಏರ್ಪಡಿಸಲಾಗುವುದು. ಎಲ್ಲಾ ಮಂಡಲ ಮತ್ತು ಜಿಲ್ಲೆಯಲ್ಲಿ ಮೋದಿಬೇ ಜೀವನ ಕುರಿತ ಸಾಕ್ಷ್ಯಚಿತ್ರ ಹಾಗೂ ಪ್ರದರ್ಶಿನಿಯನ್ನು ಸಾರ್ವಜನಿಕ ಸ್ಥಳಗಳಲ್ಲೂ ಏರ್ಪಡಿಸಲಾಗುವುದು ಎಂದರು.ಜಿಲ್ಲೆಯ ಆಯ್ದ ಭಾಗಗಳಲ್ಲಿ ಬೌದ್ಧಿಕ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಹಾಗೂ ಜಿಲ್ಲೆಯ ವಿಶೇಷ ಚೇತನರು, ದಿವ್ಯಾಂಗರು ಮತ್ತು ಗೌರವಾನ್ವಿತರಿಗೆ ಮೋದಿಜೀ ಕುರಿತಾದ ಆಯ್ದ ಪುಸ್ತಕವಿತರಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.ಪೋಕಲ್ ಫಾರ್ ಲೋಕಲ್ ಪ್ರಚಾರದ ಮೂಲಕ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಸಣ್ಣ ಸಣ್ಣ ಕೈಗಾರಿಕೆಗಳ ಉತ್ಪನ್ನ ಪ್ರಚಾರ ಹಾಗೂ ಮಾರಾಟ ಮಾಡಿಸುವುದು. ವಿಶ್ವ ಕರ್ಮ ಯೋಜನೆಯಡಿ ಕುಶಲಕರ್ಮಿಗಳು, ವೃತ್ತಿ ಪರರನ್ನು ಪ್ರೋತ್ಸಾಹಿಸುವುದು. ವಿಶೇಷವಾಗಿ ಮೋದಿ ವಿಕಾಸ್ ಮ್ಯಾರಥಾನ್ ವಿಕಸಿತ ಭಾರತ ಪರಿಕಲ್ಪನೆ ಚಿತ್ರ ಕಲಾ ಸ್ಪರ್ಧೆ ಹಾಗೂ ಸಂಸತ್ ಖೇಲ್ ಕ್ರೀಡಾ ಸ್ಪರ್ಧೆ ಆಯೋಜಿಸಲಾಗುವುದು. ಖಾದಿ ಗ್ರಾಮೋದ್ಯೋಗ ಪ್ರೋತ್ಸಾಹಿಸುವ ಮೂಲಕ ಖಾದಿ ಬಟ್ಟೆಗಳ ಖರೀದಿ ಮತ್ತು ಸ್ವದೇಶಿ ವಸ್ತು ಬಳಸಲು ಪ್ರೇರೇಪಿಸುವ ಮೂಲಕ ಸೇವಾ ಪಾಕ್ಷಿಕ ನಡೆಸಲಾಗುವುದು ಎಂದರು.ಮುಖಂಡ ಬೆಳವಾಡಿ ರವೀಂದ್ರ ಮಾತನಾಡಿ ಮದ್ದೂರಿನ ಘಟನೆಗೆ ಸಂಬಂಧಿಸಿದಂತೆ ಪೂರ್ವಾಗ್ರಹ ಪೀಡಿತವಾದ ರಾಜ್ಯ ಆಢಳಿತಾರೂಢ ಕಾಂಗ್ರೆಸ್ ಸರ್ಕಾರ ಸಿ.ಟಿ. ರವಿಯವರ ವಿರುದ್ದ ಎಫ್ ಐ ಆರ್ ದಾಖಲಿಸಿರುವುದನ್ನು ಕೂಡಲೇ ಹಿಂಪಡೆಯ ದಿದ್ದರೆ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಮುಗುಳವಳ್ಳಿ ದಿನೇಶ್, ಯುವ ಮೋರ್ಚಾ ಅಧ್ಯಕ್ಷ ಸಂತೋಶ್ ಕೋಟ್ಯಾನ್ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.