ಸಾರಾಂಶ
ಬೆಳ್ತಂಗಡಿ: ಕಾರ್ಮಿಕರನ್ನು ರಾಷ್ಟ್ರ ಚಿಂತನೆಯ ಕಡೆ ಬರುವ ಕಾರ್ಯವನ್ನು ನಮ್ಮ ಸಂಘ ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಹೇಳಿದ್ದಾರೆ.ಬಿಎಂಎಸ್‌ನ 70 ನೇ ವರ್ಷದ ಸಂದರ್ಭದಲ್ಲಿ ಬಧವಾರ ದೆಹಲಿಯಲ್ಲಿ ನಡೆದ ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ಸಂಘಟನೆಯ ತಾಲೂಕು ಸಮಿತಿಯು ಬೆಳ್ತಂಗಡಿಯಲ್ಲಿ ಆಯೋಜಿಸಲಾದ ಸಂದರ್ಭ ಅವರು ಮಾತನಾಡಿದರು. ಕಾರ್ಮಿಕ ವಲಯದಲ್ಲಿ ರಾಷ್ಟ್ರೀಯ ಚಿಂತನೆಯನ್ನು ತಂದು ಅವರನ್ನು ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೋಸ್ಕರ ನಮ್ಮ ಕಾರ್ಮಿಕ ಸಂಘಟನೆಯನ್ನು ಹಿರಿಯರು ಪ್ರಾರಂಭಿಸಿದರು. ಭಾರತೀಯ ಮಜ್ದೂರ್ ಸಂಘ ಯಾವುದೇ ರಾಜಕೀಯ ಪಕ್ಷದ ಅಡಿಯಾಳಾಗಿ ಕೆಲಸ ಮಾಡುವ ಸಂಘಟನೆ ಅಲ್ಲ, ಆದರೆ ರಾಷ್ಟ್ರೀಯ ಚಿಂತನೆ ಇರುವ ರಾಜಕೀಯ ಪಕ್ಷದ ಜೊತೆಗೆ ಸೇರಿಕೊಂಡು ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದೆ ಎಂದರು.ನಮ್ಮ ಸಂಘಟನೆ ಹಿಂಸೆಯ ರೂಪದ ಹೋರಾಟ ಮಾಡದೇ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುತ್ತಾ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿದೆ. ನಮ್ಮ ಸಂಘಟನೆಯಲ್ಲಿ ಬೆಳೆದ ಅನೇಕ ಜನರನ್ನು ಸಮಾಜದ ಬೇರೆ ಬೇರೆ ಕ್ಷೇತ್ರಕ್ಕೆ ಕೊಟ್ಟ ಸಂಘಟನೆ ನಮ್ಮ ಸಂಘಟನೆ. ನಮ್ಮ ಸಂಘಟನೆ ಕಾರ್ಮಿಕರಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿದೆ ಇನ್ನು ಮುಂದೆಯೂ ಮಾಡುತ್ತದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.ರಾ.ಸ್ವ.ಸಂಘದ ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಪುರೋಹಿತ ಮಾತನಾಡಿ, ಸಂಘಕ್ಕೆ ರಾಷ್ಟ್ರ ಚಿಂತನೆಯ ಆದ್ಯತೆ, ರಾಷ್ಟ್ರವನ್ನು ಬಿಟ್ಟು ಸಂಘಟನೆ ಇಲ್ಲ ಭಾರತೀಯ ಮಜ್ದೂರು ಸಂಘದ ದ್ಯೇಯವೇ ಶ್ರಮ. ಶ್ರಮದ ಮುಖಾಂತರ ಇಡೀ ದೇಶವನ್ನು ಕಾಮಿಕರನ್ನು ಒಟ್ಟಗೂಡಿಸಿ ಸಂಘ ಮುನ್ನಡೆಯುತ್ತಿದೆ ಎಂದರು.ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ ಕೆ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ಸಂಘ ಚಾಲಕ ಗಣೇಶ್ ಕಾಂತಾಜೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ್ ಉಜಿರೆ, ಆಟೋ ರಿಕ್ಷಾ ಯೂನಿಯನ್ ತಾಲೂಕು ಅಧ್ಯಕ್ಷ ಕೃಷ್ಣ ಬೆಳಾಲು, ರಬ್ಬರ್ ಟ್ಯಾಪರ್ ಮಜ್ದೂರು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಾರಾಜ ಪಿ. ಲಕ್ಷಣದಾಸ್ ಚಿರನ್, ರಾಜರಾಮ್, ಶಿವಪ್ರಸಾದ್, ವಿಜಯ ಆರಳಿ. ಶ್ರೇಷ್ಠ ಪಡಿವಾಳ್, ಶ್ರೀನಿವಾಸ ರಾವ್, ಜಯಾನಂದ ಗೌಡ, ಗಣೇಶ್ ಗೌಡ, ಜಯಂತ್ ಗೌಡ, ವಿಜಯ ಗೌಡ ವೇಣೂರು, ಸುಧಿರ್ ಸುವರ್ಣ, ಮಮತಾ ಶೆಟ್ಟಿ, ಗಣೇಶ್ ಲಾಯಿಲ, ಗಿರೀಶ್ ಡೋಂಗ್ರೆ , ಶರತ್ ಶೆಟ್ಟಿ, ಪ್ರಕಾಶ ಆಚಾರ್ಯ, ನೇಮಯ್ಯ ಕುಲಾಲ್, ಮಾದವ ಶಿರ್ಲಾಲ್, ಆನಂದ ಸಾಲ್ಯಾನ್, ಮೋಹನ್ ಅಂಡಿಜೆ ವಿ. ಹೆಚ್.ಪಿ ಯ ನವೀನ ನೆರಿಯ , ವಿಷ್ಣು ಮರಾಟೆ, ದಿನೇಶ್ ಚಾರ್ಮಾಡಿ, ಸಂತೋಷ ಅತ್ತಾಜೆ ನಿರಂಜನ ಕುಕ್ಕೆಡಿ, ರಕ್ಷಿತ ಸಾವ್ಯ ಪ್ರಭಾಕರ ಉಪ್ಪಡ್ಕ ಭಾಗವಹಿಸಿದ್ದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಡಾ ಮೋಹನ್ ಭಾಗವತ್ ಅವರ ಸಮಾರೋಪ ಭಾಷಣವನ್ನು ಬೆಳ್ತಂಗಡಿ ತಾಲೂಕಿನ ಅನೇಕ ಗಣ್ಯರ ಸಮ್ಮುಖದಲ್ಲಿ ಶ್ರೀ ಮಂಜುನಾಥೇಶ್ವರ ಪಿನಾಕೆ ಸಭಾಭವನ ಬೆಳ್ತಂಗಡಿಯಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಲಾಯಿತು.