ಸಾರಾಂಶ
ತಾಲೂಕಿನ ನರೀಪುರ ಗ್ರಾಮದ ಲೋಕೇಶ್ ಎಂಬುವರ ಪುತ್ರ ಐಟಿಐ ವಿದ್ಯಾರ್ಥಿ ಪ್ರೀತಮ್ ಕುಮಾರ್ (18) ಎಂಬಾತ ಮೃತ ಯುವಕ.
ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಚಾನಲ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ.
ತಾಲೂಕಿನ ನರೀಪುರ ಗ್ರಾಮದ ಲೋಕೇಶ್ ಎಂಬುವರ ಪುತ್ರ ಐಟಿಐ ವಿದ್ಯಾರ್ಥಿ ಪ್ರೀತಮ್ ಕುಮಾರ್ (18) ಎಂಬಾತ ಮೃತ ಯುವಕ. ಈತ ತನ್ನ ಕುಟುಂಬದ ಜೊತೆ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ವಾಸವಿದ್ದು ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೋದವನು ನಾಪತ್ತೆಯಾಗಿರುವುದಾಗಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ತಿಮ್ಮರಾಜೀಪುರ ಗ್ರಾಮದಲ್ಲಿ ಇಂದು ಮೃತ್ತ ದೇಹ ಮೇಲೆ ತೇಲಿ ಬಂದ ಹಿನ್ನೆಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವಕ ಪೋಷಕರನ್ನು ಕರೆಯಿಸಿದಾಗ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರೀತಮ್ ಈಜಲು ಹೋಗಿ ಅಥವಾ ಮಾನಸಿಕ ಖಿನ್ನತೆಗೆ ಒಳಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಲಾಗಿದೆ.
---- 9ಕೆಜಿಎಲ್ 22 ಪ್ರೀತಮ್ ಕುಮಾರ್