ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಚ್ಚ ಬಾಳೆ ಹಣ್ಣಿನ ಬೆಲೆ ಪಾತಾಳಕ್ಕಿಳಿದಿದೆ. ಇದರಿಂದ ರೈತರು ನಷ್ಟದ ಜೊತೆಗೆ ಸಂಕಷ್ಟಕ್ಕೀಡಾಗಿದ್ದು, ಅನ್ನದಾತನ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.ತಾಲೂಕಿನ ಎಲ್ಲೆ ಮಾಳ ಗ್ರಾಮದ ರೈತ ಕುಮಾರಸ್ವಾಮಿ ತನ್ನ 5 ಎಕರೆ ಜಮೀನಿನಲ್ಲಿ ನಾಲ್ಕು ಎಕರೆಗೆ ಪಚ್ಚ ಬಾಳೆ ಜಿ. 9 ಬಾಳೆ ಬೆಳೆಯನ್ನು 4 ಸಾವಿರ ಗಿಡಗಳನ್ನು ಬೆಳೆದಿದ್ದಾರೆ. ಕಟಾವಿಗೆ ಬಂದಿದ್ದ ಬಾಳೆ ಬೆಳೆಯನ್ನು ಕೇಳುವವರು ಇಲ್ಲದಂತಾಗಿ ಜಮೀನಿನಲ್ಲಿಯೇ ಬಾಳೆಹಣ್ಣು ಕೊನೆಗಳಲ್ಲೇ ಕೊಳೆಯುವಂತ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಜಮೀನಿನಲ್ಲಿ ಕಟಾವಿಗೆ ಬಂದಿರುವ ಗೊನೆಗಳು ಉದುರುತ್ತಿವೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ರೈತನ ಅಳಲು:4-5 ಲಕ್ಷ ವೆಚ್ಚ ಮಾಡಿ ಬಾಳೆ ಬೆಳೆಯನ್ನು ರೈತ ಕುಮಾರಸ್ವಾಮಿ ಬೆಳೆದಿದ್ದು, ಬೆಲೆ ಇಲ್ಲದೆ ಬಾಳೆ ಬೆಳೆ ಜಮೀನಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪಚ್ಚ ಬಾಳೆ ಬೆಳೆಯ ಬೆಂಬಲ ಬೆಲೆ ಇಲ್ಲದೆ ರೈತನ ಸ್ಥಿತಿ ದುಸ್ತಾರವಾಗಿದೆ.
ಮಳೆ ಇಲ್ಲದೆ ಕಂಗಾಲಾಗಿರುವ ರೈತನ ಸ್ಥಿತಿ ತಾಲೂಕಿನಲ್ಲಿ ಜನ ಜಾನುವಾರುಗಳಿಗೂ ಕುಡಿಯುವ ನೀರು ಹಾಗೂ ಮೇವು ಇಲ್ಲದೆ ಪರದಾಡುವ ಸ್ಥಿತಿಯಲ್ಲಿ ಇದ್ದರೂ ಸಹ ಇಲ್ಲಿನ ರೈತ ಕುಮಾರಸ್ವಾಮಿ ತನ್ನ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಇರುವಷ್ಟು ಸ್ವಲ್ಪ ನೀರಾವರಿಯಲ್ಲಿ ಬಾಳೆಹಣ್ಣು ಹುಲಸಾಗಿ ಬೆಳದಿದ್ದರು. ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಬೆಲೆ ಇಲ್ಲದೆ ಜಮೀನಿನಲ್ಲೆ ಹಾಳಾಗಿರುವ ಬಾಳೆ ಫಸಲನ್ನು ಕಂಡು ಇತ್ತ ನಷ್ಟದ ಜೊತೆಗೆ ಸಂಕಷ್ಟಕೀರಾಗಿರುವ ರೈತನ ಸ್ಥಿತಿ ಹೇಳತೀರದಾಗಿದೆ.ಬೆಲೆ ಇಲ್ಲದೆ ಕಂಗಾಲಾಗಿರುವ ರೈತ ಜಮೀನಿನಲ್ಲಿ ಕೊಳೆಯುತ್ತಿರುವ ಬಾಳೆ ಫಸಲನ್ನು ನೋಡಲಾಗದೆ ರೋಟವೇಟರ್ ಯಂತ್ರದಿಂದ ಬಾಳೇಪಸಲನ್ನು ಉಳುಮೆ ಮಾಡಲು ರೈತ ಮುಂದಾಗಿದ್ದಾನೆ.
ಭಾರಿ ನಿರೀಕ್ಷೆಯೊಂದಿಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಜಮೀನಿನಲ್ಲಿ ನಾಲ್ಕು ಸಾವಿರ ಬಾಳೆ ಗಿಡಗಳನ್ನು ನೀಡಲಾಗಿದ್ದು, ಹುಲುಸಾಗಿ ಬೆಳೆದಿದ್ದು ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಬೆಲೆ ಇಲ್ಲದೆ ಜಮೀನಿನಲ್ಲಿ ಕೊಳೆಯುತ್ತಿರುವ ಹಣ್ಣುಗಳನ್ನು ನೋಡಿ ಕಣ್ಣೀರು ಬರುತ್ತಿದೆ. ಜೊತೆಗೆ ಸಾಲ ಮಾಡಿ ಜಮೀನಿಗೆ ಹಾಕಿರುವ ವ್ಯವಸಾಯದ ಖರ್ಚು ವೆಚ್ಚ ಸಹ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿರುವ ಬಗ್ಗೆ ಸರ್ಕಾರ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ನೆರವಿಗೆ ಧಾವಿಸಬೇಕು. ಕುಮಾರಸ್ವಾಮಿ, ರೈತ, ಎಲೆಮಾಳ ಗ್ರಾಮ9ಸಿಎಚ್ಎನ್12
ಹನೂರು ತಾಲೂಕಿನ ಎಲ್ಲೇ ಮಾಳ ಗ್ರಾಮದ ರೈತ ಕುಮಾರಸ್ವಾಮಿ ಜಮೀನಿನಲ್ಲಿ ಹುಲಸಾಗಿ ಬೆಳೆದಿರುವ ಬಾಳೆ ಪಸಲು ಕಟಾವಿಗೆ ಬಂದಿದ್ದು ಬೆಲೆ ಇಲ್ಲದೆ ಜಮೀನಿನಲ್ಲಿಯೇ ಹಣ್ಣಾಗಿ ಕೊಳೆಯುತ್ತಿದೆ.----------------------9ಸಿಎಚ್ಎನ್12 ಹನೂರು ತಾಲೂಕಿನ ಗೆಲ್ಲೇ ಗ್ರಾಮದ ರೈತ ಕುಮಾರಸ್ವಾಮಿ ಬೆಳೆದಿರುವ ಬಾಳೆ ಫಸಲಿಗೆ ಬೆಲೆ ಇಲ್ಲದೆ ಕಂಗಲಾಗಿರುವ ರೈತ ಕುಮಾರಸ್ವಾಮಿ.