ಕುರಿ, ಮೇಕೆಗಳ ಕಳ್ಳರನ್ನು ಬಂಧಿಸಲು ಆಗ್ರಹ

| Published : Sep 10 2025, 01:03 AM IST

ಸಾರಾಂಶ

ಕಳ್ಳರು ತೋಟದ ಮನೆಗಳಿಗೆ ನುಗ್ಗಿ ಸಾಕು ಪ್ರಾಣಿಗಳಾದ ಕುರಿ ಮೇಕೆಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ರೈತರೇ ಪತ್ತೆಹಚ್ಚಿ ರಾಮಪುರ ಪೊಲೀಸ್ ಠಾಣೆಗೆ ಮೇಕೆ ಸಮೇತ ಆರೋಪಿಯನ್ನು ಸಹ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ರೈತರು ಒಪ್ಪಿಸಿರುವ ಘಟನೆ ಸಹ ಶನಿವಾರ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ದೇವಾಲಯ ಸೇರಿದಂತೆ ಕುರಿ, ಮೇಕೆಗಳನ್ನು ಕಳ್ಳತನ ಮಾಡುತ್ತಿರುವ ಕದೀಮರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಒತ್ತಾಯಿಸಿದರು.

ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಪುರ ರಸ್ತೆಯಲ್ಲಿ ಬರುವ ಕಣಿವೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳರು ಬಾಗಿಲು ಮುರಿದು ದೇವಾಲಯದ ಹುಂಡಿ ಕಳ್ಳತನವಾಗಿದ್ದು, ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿತ್ತು. ಹೀಗಾಗಿ ಕಳ್ಳತನವಾಗಿರುವ ಬಗ್ಗೆ ರಾಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಮೇಕೆ ಕುರಿ ಕೇಬಲ್ ಕಳ್ಳತನ ಕ್ರಮಕ್ಕೆ ಒತ್ತಾಯ:

ಪೊಲೀಸ್ ಠಾಣಾ ವ್ಯಾಪ್ತಿಯ ಸರಹತ್ತಿನ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಅಳವಡಿಸಲಾಗಿರುವ ಪಂಪ್‌ಸೆಟ್‌ಗಳ ಮೋಟಾರ್ ಸೇರಿದಂತೆ ಸ್ಟಾರ್ಟರ್ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ರಾಮಪುರ ಪೊಲೀಸ್ ಠಾಣೆಯಲ್ಲಿ ರೈತರು ದೂರು ಸಲ್ಲಿಸಿದ್ದಾರೆ. ಜೊತೆಗೆ ತೋಟದ ಮನೆಗಳಲ್ಲಿ ಇರುವ ಕುರಿ ಮೇಕೆಗಳನ್ನು ಸಹ ಕಳ್ಳರು ರಾತ್ರಿ ವೇಳೆ ಕದಿಯುತ್ತಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗಾಗಿರುವ ತೊಂದರೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕುರಿ ಮೇಕೆ ಕಳ್ಳರ ಟಾರ್ಗೆಟ್:

ತೋಟದ ಮನೆಗಳಲ್ಲಿ ರಾತ್ರಿ ವೇಳೆ ಕುರಿ ಮೇಕೆಗಳನ್ನು ಕಟ್ಟಿ ಹಾಕಿ ರೈತರು ಗ್ರಾಮಕ್ಕೆ ತೆರಳಿದಾಗ ರಾತ್ರಿ ಕಳ್ಳರು ತೋಟದ ಮನೆಗಳಿಗೆ ನುಗ್ಗಿ ಸಾಕು ಪ್ರಾಣಿಗಳಾದ ಕುರಿ ಮೇಕೆಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ರೈತರೇ ಪತ್ತೆಹಚ್ಚಿ ರಾಮಪುರ ಪೊಲೀಸ್ ಠಾಣೆಗೆ ಮೇಕೆ ಸಮೇತ ಆರೋಪಿಯನ್ನು ಸಹ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ರೈತರು ಒಪ್ಪಿಸಿರುವ ಘಟನೆ ಸಹ ಶನಿವಾರ ಜರುಗಿದೆ.

ಹೀಗಾಗಿ ಪೊಲೀಸ ಇಲಾಖೆ ದಿಟ್ಟ ಕ್ರಮ ತೆಗೆದುಕೊಳ್ಳುವ ಮೂಲಕ ರಾತ್ರಿ ವೇಳೆ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೇಳಿಕೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.---------

9ಸಿಎಚ್ಎನ್‌11 ಹನೂರು ತಾಲೂಕಿನ ಅಜ್ಜಿಪುರ ಕಣಿವೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ ವಿವಿಧಡೆ ಕಳ್ಳತನ ಆಗುತ್ತಿರುವ ಬಗ್ಗೆ ರೈತ ಸಂಘಟನೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.