ನೆಲಮಂಗಲ: ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆ, ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಗುಲಾಬಿ ರಿಬ್ಬನ್ ಅನ್ನು ಬಳಸಿಕೊಂಡು ಜಾಗತಿಕವಾಗಿ ಅಭಿಯಾನ ನಡೆಸಲಾಗುತ್ತದೆ ಎಂದು ರೋಟರಿ ನೆಲಮಂಗಲ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು

ನೆಲಮಂಗಲ: ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆ, ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಗುಲಾಬಿ ರಿಬ್ಬನ್ ಅನ್ನು ಬಳಸಿಕೊಂಡು ಜಾಗತಿಕವಾಗಿ ಅಭಿಯಾನ ನಡೆಸಲಾಗುತ್ತದೆ ಎಂದು ರೋಟರಿ ನೆಲಮಂಗಲ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ನಗರದ ಬಸವಣ್ಣದೇವರ ಮಠದ ಆವರಣದಲ್ಲಿತಾಲೂಕಿನ ಎಲ್ಲಾ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ರೋಟರಿ ನೆಲಮಂಗಲ, ರೋಟರಿ ಮಹಾಲಕ್ಷ್ಮೀ ಸೆಂಟ್ರಲ್ ರೋಟರಿ ಅರುಣೋದಯ ರೋಟರಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅರಿವು ಸ್ತನ ಕ್ಯಾನ್ಸರ್ ಜಾಗೃತಿ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಶಿಕ್ಷಣ ನೀಡುವು,ದು ಎಂದರು.

ಐಸಿಎಂಆರ್‌ ಬೆಳಗಾವಿಯ ಡಾ.ಓಂಕಾರ್ ಯಾದವ್ ದಯಾನಂದ್ ಸಾಗರ್ ಮಹಾವಿದ್ಯಾಲಯದ ಡಾ.ಪೂಜಾ, ರೋಟರಿ ನಿರ್ದೇಶಕರಾದ ರಾಜಶೇಖರ್, ರುದ್ರೇಗೌಡ, ರಾಮಕೃಷ್ಣಯ್ಯ, ರೋಟರಿ ಅರುಣೋದಯದ ಅಧ್ಯಕ್ಷ ಎಂ.ಗಂಗಣ್ಣ, ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಜಿ ಕಿರಣ್ ಕುಮಾರ್, ನಿರ್ದೇಶಕರಾದ ನಟರಾಜು, ಸುರೇಶ್, ರೋಟರಿ ಮಹಾಲಕ್ಷ್ಮೀ ಸೆಂಟ್ರಲ್‌ನ ಪೂರ್ಣಿಮಾ ಪ್ರಶಾಂತ್, ಇನ್ನರ್ ವೀಲ್ ಅಧ್ಯಕ್ಷರಾದ ಪೂರ್ಣಿಮ ಸುಗ್ಗರಾಜು, ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.

ಪೊಟೊ-27ಕೆಎನ್‌ಎಲ್‌ಎಮ್‌1-

ನೆಲಮಂಗಲದ ಬಸವಣ್ಣದೇವರ ಮಠದ ಆವರಣದಲ್ಲಿ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ರೋಟರಿ ನೆಲಮಂಗಲ ಅಧ್ಯಕ್ಷ ಜಿ.ಆರ್.ನಾಗರಾಜು ಉದ್ಘಾಟಿಸಿದರು.