ದಾಬಸ್‍ಪೇಟೆ: ಎಸ್‍ಎಸ್‍ಎಲ್ ಸಿ ಪರೀಕ್ಷೆ ಬರೆಯಲು ಸಿದ್ದವಾಗಿರುವ ಮಕ್ಕಳು ನಿರ್ಭಯವಾಗಿ ಓದಿರುವುದನ್ನು ಬರೆದು ಸುಲಭವಾಗಿ ಎದುರಿಸಿ, ರಾಜ್ಯದಲ್ಲಿಯೇ ಫಲಿತಾಂಶದಲ್ಲಿ ನೆಲಮಂಗಲ ತಾಲ್ಲೂಕಿಗೆ ಮೊದಲ ಸ್ಥಾನಕ್ಕೆ ತರಬೇಕು ಎಂದು ಕಾಂಗ್ರೇಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ತಿಳಿಸಿದರು.
ಪಟ್ಟಣದ ಸಿವಿಜಿ ಪ್ರೌಢಶಾಲೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ನೀಡಿರುವ ಎಸ್‍ಎಸ್‍ಎಲ್ ಸಿ ಪರೀಕ್ಷಾ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸ್ ಅವರು ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಪರೀಕ್ಷೆ ಬರೆಯಲಿರುವ ನೆಲಮಂಗಲ ಪಟ್ಟಣ, ಕಸಬಾ ಹೋಬಳಿಯ 1755 ವಿದ್ಯಾರ್ಥಿಗಳಿಗೆ, ತ್ಯಾಮಗೊಂಡ್ಲು ಹೋಬಳಿಯಲ್ಲಿ 483 ವಿದ್ಯಾರ್ಥಿಗಳಿಗೆ, ಸೋಂಪುರ ಹೋಬಳಿಯಲ್ಲಿ 713 ವಿದ್ಯಾರ್ಥಿಗಳು ಸೇರಿದಂತೆ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಪರಿಕರಣಗಳನ್ನು ವಿತರಿಸಿದ್ದಾರೆ. ತಾವು ಸಹ ಹೆಚ್ಚು ಅಂಕ ಪಡೆದು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಬೇಕು ಎಂದರು.
ಈ ಸಂದರ್ಭದಲ್ಲಿ ಇಸಿಒ ರಂಗನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷ ಸಿದ್ದರಾಜು, ವಿಎಸ್ ಎಸ್ ಎನ್ ನಿರ್ದೇಶಕ ಮಂಜುನಾಥ್, ಮುಖಂಡರಾದ ಪಾರ್ಥಣ್ಣ, ದಾದಾಪೀರ್, ಸಾಹಿಲ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪೋಟೋ 3 : ದಾಬಸ್‍ಪೇಟೆ ಪಟ್ಟಣದ ಸಿವಿಜಿ ಪ್ರೌಢಶಾಲೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ನೀಡಿರುವ ಎಸ್‍ಎಸ್‍ಎಲ್ ಸಿ ಪರೀಕ್ಷಾ ಪರಿಕರಗಳನ್ನು ಕಾಂಗ್ರೇಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ಹಾಗೂ ಮುಖಂಡರುಗಳು ವಿದ್ಯಾರ್ಥಿಗಳಿಗೆ ವಿತರಿಸಿದರು.