ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಹಿರಿಯ ಸಾಹಿತಿ ಹಾಗೂ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಅರುಂಧತಿ ರಮೇಶ್ ಗೌರವಾರ್ಥ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆಯ ಜಂಟಿ ಸಹಯೋಗದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

- ಕುವೆಂಪು ಕನ್ನಡ ಭವನದಲ್ಲಿ ನುಡಿನಮನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಿರಿಯ ಸಾಹಿತಿ ಹಾಗೂ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಅರುಂಧತಿ ರಮೇಶ್ ಗೌರವಾರ್ಥ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆಯ ಜಂಟಿ ಸಹಯೋಗದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಅರುಂಧತಿ ರಮೇಶ್ ಅವರು ಶಿಕ್ಷಕಿ, ಸಾಹಿತಿ, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆಯಾಗಿ ಕನ್ನಡ ನಾಡು- ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ನೆನಪಿನಲ್ಲಿ ಸಂಸ್ಮರಣಾ ಗ್ರಂಥ ಹೊರತರುವುದರ ಮೂಲಕ ಅವರ ಬದುಕು, ಬರಹ, ನಾಡು- ನುಡಿಯ ಸೇವೆ ಕುರಿತು ಬೆಳಕು ಚೆಲ್ಲುವಂತೆ ಸಲಹೆ ನೀಡಿದರು.

ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಸ್.ಎಂ. ಮಲ್ಲಮ್ಮ ಮಾತನಾಡಿ, ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಐದು ದಶಕಗಳಿಗೂ ಹೆಚ್ಚಿನ ಕಾಲಾವಧಿಯಲ್ಲಿ ಅರುಂಧತಿ ಅವರು ಸೇವೆ ಸಲ್ಲಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಅವರಿಂದ ರಚಿಸಲ್ಪಟ್ಟ ಕೃತಿಗಳಾದ ಚಿತ್ತ ಚಾತಕ, ಮಡಿಲು, ಪರಿಸರ ಕಾವ್ಯ, ಪರಾಗಸ್ಪರ್ಶಕ್ಕೆ ಕಾದ ಕವನ ಮೊದಲಾದವುಗಳು ಸಾಹಿತ್ಯಪ್ರಿಯರ ಮೆಚ್ಚುಗೆಗೆ ಪಾತ್ರವಾಗಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಾಹಿತಿಗಳಾದ ಜಿ.ಎಸ್. ಸುಶೀಲಾ ದೇವಿ ರಾವ್, ಆರ್.ವಾಗ್ದೇವಿ, ಸಂಧ್ಯಾ ಸುರೇಶ್, ಓಂಕಾರಮ್ಮ ರುದ್ರಮುನಿ, ಟಿ.ಎಸ್. ಶೈಲಜಾ, ಡಾ.ಅನುರಾಧಾ ಬಕ್ಕಪ್ಪ, ಸತ್ಯಭಾಮ, ನಾಗವೇಣಿ, ರುದ್ರಮುನಿ ಹಿರೇಮಠ, ಉಮಾದೇವಿ, ಕುಸುಮಾ ಲೋಕೇಶ್, ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ನಾಗವೇಣಿ ಎ.ಎಲ್. ಕೆ.ಶಿವಶಂಕರ್, ಆನೆಕೊಂಡ ಲಿಂಗರಾಜ್, ಪನ್ನಾಲಾಲ್, ಕೆ.ಹಾಲಪ್ಪ, ಆರ್.ಸಿದ್ದೇಶಪ್ಪ, ಎಂ.ಷಡಾಕ್ಷರಪ್ಪ, ಗುರುಮೂರ್ತಿ, ಎಚ್.ಎಲ್. ಶ್ರೀನಿವಾಸ್ ಇತರರು ಇದ್ದರು.

- - -

-12ಕೆಡಿವಿಜಿ44:

ದಾವಣಗೆರೆಯಲ್ಲಿ ಕಸಾಪದಿಂದ ದಿ। ಅರುಂಧತಿ ರಮೇಶ ಅವರಿಗೆ ನುಡಿನಮನ ಸಲ್ಲಿಸಲಾಯಿತು.