ಸಾರಾಂಶ
2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.
ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ಬೀದಿ ದೀಪ ಅಳವಡಿಸುವ ₹2 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು
ಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಮಂಗಳಾಪುರ ಕ್ರಾಸ್ ಬಳಿ 2024-25 ನೇ ಸಾಲಿನ ಮೈಕ್ರೋ ಜನರಲ್ ಯೋಜನೆಯಡಿಯಲ್ಲಿ ಕೊಪ್ಪಳ -ಗದಗ ಮುಖ್ಯ ರಸ್ತೆಯಿಂದ ಮಂಗಳಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63ರ ವರೆಗೆ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ಬೀದಿ ದೀಪಗಳನ್ನು ಅಳವಡಿಸುವ ₹2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಇದು ಬಹುದಿನಗಳ ಬೇಡಿಕೆ ಆಗಿತ್ತು. ಇಂದು ಈ ರಸ್ತೆಗೆ ₹ 2 ಕೋಟಿ ಅನುದಾನ ನೀಡಿದ್ದೇವೆ. ಗುಣಮಟ್ಟವಾದ ರಸ್ತೆ ನಿರ್ಮಿಸಿ ಬೀದಿ ದೀಪ ಅಳವಡಿಸಿ ಇಂದಿನಿಂದಲೇ ಕಾಮಗಾರಿ ಪ್ರಾರಂಭ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ನಮ್ಮ ಕ್ಷೇತ್ರದಲ್ಲಿ ಸದ್ಯ ₹150 ಕೋಟಿ ವೆಚ್ಚದಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಇನ್ನೂ ಹದಗೆಟ್ಟಿರುವ ಎಲ್ಲಾ ರಸ್ತೆಗಳಿಗೂ ಕೂಡ ಅನುದಾನ ನೀಡಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದೇವೆ. ಹಳ್ಳಿಗಳಿಂದ ನಗರಕ್ಕೆ ಬರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಪ್ರಸನ್ನ ಗಡಾದ್, ಗಾಳೆಪ್ಪ ಪೂಜಾರ್, ವಿರುಪಣ್ಣ ನವೋದಯ, ಅಜ್ಜಪ್ಪ ಸ್ವಾಮಿ, ವಸಂತ ವರತಟ್ನಾಳ, ಮಲ್ಲಿಕಾರ್ಜುನ ಪೂಜಾರ್, ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಶಾಸಕರ ಸೂಚನೆಯಂತೆ ಗುತ್ತಿಗೆದಾರರು ಇಂದಿನಿಂದಲೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಅರ್ಥ್ ವರ್ಕ್ ಕಾಮಗಾರಿ ಪ್ರಗತಿಯಲ್ಲಿದೆ.