ದುಷ್ಟಶಕ್ತಿಗಳ ವಿರುದ್ಧ ಪ್ರತಿಯೊಬ್ಬರೂ ವೀರಭದ್ರನಂತೆ ಮೆಟ್ಟಿನಿಲ್ಲಬೇಕು: ರಂಭಾಪುರಿ ಶ್ರೀ

| Published : Feb 02 2025, 11:47 PM IST

ದುಷ್ಟಶಕ್ತಿಗಳ ವಿರುದ್ಧ ಪ್ರತಿಯೊಬ್ಬರೂ ವೀರಭದ್ರನಂತೆ ಮೆಟ್ಟಿನಿಲ್ಲಬೇಕು: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಶಕುನಿಗಳು, ದುಷ್ಟರು, ಹಿಂದು ಸಂಸ್ಕೃತಿಯನ್ನು ಅಲ್ಲಗಳೆಯವವರು ನಿರಂತರ ಸಮಾಜಕ್ಕೆ ತೊಂದರೆ ಕೊಡುತ್ತಿರುತ್ತಾರೆ. ಆದರೆ, ಪ್ರತಿಯೊಬ್ಬರೂ ವೀರಭದ್ರನಂತೆ ದುಷ್ಟಶಕ್ತಿಗಳ ವಿರುದ್ಧ ಮೆಟ್ಟಿನಿಲ್ಲುವಂತಾಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸಿಂಹಾನನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀ ನುಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶುಕ್ರವಾರ ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ, ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮಗಳನ್ನು ನೆರವೇರಿಸಿ ನಂತರ ವೇದಿಕೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರಗೊಳ್ಳುತ್ತದೆ ವ್ಯಕ್ತಿ ವೀರಭದ್ರನಂತಾದರೆ ಸಮಾಜ ಭದ್ರಗೊಳ್ಳುತ್ತದೆ. ಸುಂದರವಾದ ದೇವಾಲಯ, ದೇವ ಮೂರ್ತಿಗಳನ್ನು ನೋಡಿದಾಗ ನಾಸ್ತಿಕನೂ ಆಸ್ತಿಕನಾಗುತ್ತಾನೆ. ಮಕ್ಕಳನ್ನು ಜ್ಞಾನವಂತರನ್ನಾಗಿಸಬೇಕು. ಸಾತ್ವಿಕವಾದ ಸಂಸ್ಕಾರ, ಸದ್ವಿಚಾರಗಳನ್ನು ಬಾಲ್ಯದಲ್ಲಿ ಮಕ್ಕಳಿಗೆ ಕಲಿಸಬೇಕು ಎಂದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಟ್ಟಣಶೆಟ್ಟಿ ಪರಮೇಶ್ ಕುಟುಂಬವರು ಹಿಂದೆ ಮಠಕ್ಕೆ ಈ ಜಾಗವನ್ನು ದಾನ ಮಾಡಿದ್ದು, ಇದೀಗ ಇಲ್ಲಿ ನಮ್ಮ ಸಂಸ್ಥೆಯ ಶಾಲೆ, ಹಾಗೂ ವೀರಭದ್ರೇಶ್ವರ ಸ್ವಾಮಿ ದೇಗುಲವಾಗಿರುವುದು ಸಂತಸದ ಸಂಗತಿ. ದೇವಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.

ಮುಖ್ಯ ಅತಿಥಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಕುರುಬ ಸಮಾಜದ ಹಿರಿಯ ಎಚ್.ಬಿ.ಗಿಡ್ಡಪ್ಪ ಮಾತನಾಡಿದರು. ಮುಖಂಡ ಎಚ್.ಎ. ಉಮಾಪತಿ, ಪಂಚಮಸಾಲಿ ಸಮಾಜ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ, ಎಂ.ಪಿ.ಎಂ.ಚನ್ನಬಸಯ್ಯ,ಚನ್ನಯ್ಯ ಬೆನ್ನೂರುಮಠ್, ಹಳಕಟ್ಟೆ ಶಿವು ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟಣ ಶೆಟ್ಟಿ ಪರಮೇಶ್, ರಾಜಪ್ಪ, ಸಣ್ಣಕ್ಕಿ ಬಸವಗೌಡ, ಪ್ರೇಮ್ ಕುಮಾರ್, ಭಂಡಿಗಡಿ, ಕೋರಿ ದೀಪು, ಹಲವಾರು ಮುಖಂಡರು ಇದ್ದರು.

ಎಚ್.ಆರ್. ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನ ಉದ್ಘಾಟನೆ ನಿಮಿತ್ತ ಶುಕ್ರವಾರ ಬೆಳಗ್ಗೆ ರಂಭಾಪುರಿ ಜಗದ್ಗುರು ಅವರನ್ನು ಅದ್ಧೂರಿಯಾಗಿ ಅಲಂಕರಿಸಿದ ಸಾರೋಟ್‌ನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿವಿಧ ಕಲಾ ಮೇಳಗೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅನಂತರ ವೀರಭದ್ರೇಶ್ವರ ಮೂರ್ತಿಗೆ ಶ್ರೀಗಳು ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

- - - -31ಎಚ್.ಎಲ್.ಐ1:

ಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾಮಂದಿರ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ, ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮಗಳನ್ನು ರಂಭಾಪುರಿ ಶ್ರೀ ನೆರವೇರಿಸಿದರು. ಹಿರೇಕಲ್ಮಠ ಶ್ರೀ, ಶಾಸಕರು, ಮಾಜಿ ಸಚಿವರು ಇದ್ದರು.