ದೇವನಹಳ್ಳಿ: ಗಾಂಧೀಜಿಯರ ಚಿಂತನೆಗಳ ಬೆಳಕಲ್ಲಿಯೇ ನಾವೆಲ್ಲರೂ ಹೆಮ್ಮೆಪಡುವ ಸ್ವತಂತ್ರ ಭಾರತ ನಿರ್ಮಾಣಗೊಂಡಿದೆ ಎಂದು ಪಿಡಿಒ ಗಂಗರಾಜು ತಿಳಿಸಿದರು.

ಅಣ್ಣೇಶ್ವರ ಗ್ರಾಪಂ ಕಚೇರಿಯಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಮಾಜದ ಸ್ಥಿತಿಗತಿಗಳನ್ನು ಸಂಪೂರ್ಣ ಅರಿತಿದ್ದ ಗಾಂಧೀಜಿ ಅವರು ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕಾಗಿ ಹತ್ತು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಗ್ರಾಮ ಸ್ವರಾಜ್ಯ, ರೈತರ ಏಳಿಗೆ, ಕಾರ್ಮಿಕರ ಕಲ್ಯಾಣ, ಮಹಿಳೆಯರ ರಕ್ಷಣೆ, ಮೂಲ ಶಿಕ್ಷಣ, ಗ್ರಾಮ ಸ್ವಚ್ಛತೆ, ಆರ್ಥಿಕ ಸಮಾನತೆ, ಸಮುದಾಯದ ಐಕ್ಯತೆ, ಸಾರ್ವಜನಿಕ ಆರೋಗ್ಯ ಇವುಗಳಿಗೆ ಆದ್ಯತೆ ನೀಡಿದ್ದರು ಎಂದರು.

ಇದೇ ವೇಳೆ ಪಂಚಾಯತಿ ಗ್ರಾಮ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಅಣ್ಣೇಶ್ವರ ಗ್ರಾಪಂ ಮಾಜಿ ಅಧ್ಯಕ್ಷರಾದ ಉಮಾ, ಎ.ಚಂದ್ರಶೇಖರ್ ವೇಣುಗೋಪಾಲ್, ಮಾಜಿ ಉಪಾಧ್ಯಕ್ಷ ಮುನಿರಾಜಪ್ಪ, ಮಾಜಿ ಸದಸ್ಯರಾದ ಬಿ.ಕೆ.ಮುನಿಯಪ್ಪ, ರಾಜಣ್ಣ, ಮಂಜುಳ ಆರ್. ವೆಂಕಟೇಶ್, ರುಕ್ಮಿಣಮ್ಮ, ವಾಣಿಶ್ರೀ ವಿನೋದ್, ವೆಂಕಟೇಶ್, ಚೇತನ್, ವಿಶ್ವಾಸ್, ಮಂಜುನಾಥ್ ಸಿಬ್ಬಂದಿ ಇದ್ದರು.

೧೬ ದೇವನಹಳ್ಳಿ ಚಿತ್ರಸುದ್ದಿ ೦೧ :

ಅಣ್ಣೇಶ್ವರ ಗ್ರಾಪಂನಲ್ಲಿ ೮೦ನೇ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಪಿಡಿಒ ಗಂಗರಾಜು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.