ಹೊಸಕೋಟೆ: ಷೇರುದಾರರ ಸಹಕಾರ ಹಾಗೂ ಬ್ಯಾಂಕಿನ ಸದಸ್ಯರ ಸಹಕಾರದಿಂದ ದಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.28 ಕೋಟಿ ನಿವ್ವಳ ಲಾಭ ಹೊಂದಿದ್ದು, ಷೇರುದಾರರಿಗೆ ಶೇ.15ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಮಂಜುನಾಥ ತಿಳಿಸಿದರು.

ನಗರದ ಎಚ್‌ಜೆಎಸ್‌ಎಸ್ ಸಭಾಂಗಣದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ಸಭೆ ಹಾಗೂ 113ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಇದೀಗ ಬ್ಯಾಂಕ್ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿ ಹೊರಜಿಲ್ಲೆಯ ಮಾಲೂರು, ಚಿಂತಾಮಣಿ ಹಾಗೂ ಶೀಗೆಹಳ್ಳಿ ಒಟ್ಟು 6 ಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯಲು ಷೇರುದಾರರು ಸಲಹೆ ನೀಡಿದ್ದು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಒಟ್ಟು 17,181 ಸದಸ್ಯರಿದ್ದು, 11.68 ಕೋಟಿ ಷೇರು ಬಂಡವಾಳ, 297.04 ಕೋಟಿ ಠೇವಣಿ ಹೊಂದಿದೆ, ದುಡಿಯುವ ಬಂಡವಾಳ 367.66 ಕೋಟಿ, ಹೂಡಿಕೆ 187.11 ಕೋಟಿ ಇದೆ ಎಂದ ಹೇಳಿದರು.ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣಕ್ಕೆ ನಗರದ ಎಂ.ವಿ. ಬಡಾವಣೆಯಲ್ಲಿ ಸಿಎ ನಿವೇಶನ ನೀಡುವಂತೆ ಶಾಸಕ ಶರತ್ ಬಚ್ಚೇಗೌಡರಲ್ಲಿ ಮನವಿ ಮಾಡಿದ್ದೇವೆ ಎಂದರು.

ಸಭೆಯಲ್ಲಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎ.ನಾಗರಾಜ್ 2024-25ನೇ ಸಾಲಿನ ಲೆಕ್ಕ ಪತ್ರ ಓದಿ ಅನುಮೋದನೆ ಪಡೆದರು. ಉಪಾಧ್ಯಕ್ಷ ಅಕ್ಬರ್‌ಪಾಷಾ, ನಿರ್ದೇಶಕರಾದ ಎನ್.ನಾಗರಾಜ್, ಎಚ್‌ಎಸ್ ಗೋಪಾಲ್, ಎ ಅಪ್ಸರ್, ಕೆ ಮುರಳಿ, ಕೆ.ಕಿರಣ್‌ಕುಮಾರ್, ಬಿ.ನಾಗರಾಜ್, ಜಿಯು ವಿಷ್ಣು, ಎಸ್.ಮುರಳಿ, ಎನ್.ಬಾಲಚಂದ್ರನ್, ಬಿ ವೆಂಕಟಲಕ್ಷ್ಮೀ, ಸರೋಜಮ್ಮ ಬಚ್ಚಣ್ಣ, ವಿಕ್ರಮ್, ಆರ್.ಮಂಜುನಾಥ್ ಇತರರು ಹಾಜರಿದ್ದರು.

ಫೋಟೋ: 16 ಹೆಚ್‌ಎಸ್‌ಕೆ 1

ಹೊಸಕೋಟೆಯ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ ಸರ್ವ ಸದಸ್ಯರ ಮಹಾಸಭೆಯಲ್ಲಿ ಕಟ್ಟಡ ನಿವೇಶನಕ್ಕಾಗಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ ಅವರಿಗೆ ಬ್ಯಾಂಕ್ ಅಧ್ಯಕ್ಷ ಎಸ್.ಮಂಜುನಾಥ ಹಾಗೂ ಸದಸ್ಯರು ಮನವಿ ಪತ್ರ ಸಲ್ಲಿಸಿದರು.