ವಿಜಯಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ತ್ಯಾಗ ಬಲಿದಾನ, ಸ್ವಾತಂತ್ರ್ಯದ ಮೌಲ್ಯವನ್ನು ಪ್ರತಿಯೊಬ್ಬರೂ ಅರಿತು, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದು ಎಂದು ಪುರಸಭಾಧ್ಯಕ್ಷೆ ಎಸ್.ಭವ್ಯಾ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪುರಸಭೆ ಹಮ್ಮಿಕೊಂಡಿದ್ದ ೮೦ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಪಾಲಿಸಬೇಕು. ಸ್ವಚ್ಛ, ಸುಂದರ ಮತ್ತು ಅಭಿವೃದ್ಧಿ ಹೊಂದಿದ ವಿಜಯಪುರ ನಿರ್ಮಾಣಕ್ಕೆ ಪುರಸಭೆ ಬದ್ಧವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ, ಪಿಎಸ್‌ಐ ಲಕ್ಷ್ಮೀನಾರಾಯಣ, ಪುರಸಭೆ ಸದಸ್ಯರಾದ ವಿ.ನಂದಕುಮಾರ್, ಹನೀಫುಲ್ಲಾ, ವಿಮಲಾಬಸವರಾಜ್, ಶಿಲ್ಪಾಅಜಿತ್ ಮಾತನಾಡಿದರು.

ಸಮಾರಂಭದಲ್ಲಿ, ನಿವೃತ್ತ ಶಿಕ್ಷಕರು, ಪೌರಕಾರ್ಮಿಕರು ಹಾಗೂ ಪ್ರತಿಭಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತಮಾತೆ, ಗಾಂಧೀಜಿ, ಡಾ.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಿದರು.


ಈ ವೇಳೆ ಪುರಸಭೆ ಸದಸ್ಯರಾದ ಎಂ.ಸತೀಶ್ ಕುಮಾರ್, ವಿ.ನಂದಕುಮಾರ್ ಎಂ.ಕೇಶವಪ್ಪ, ಎ.ಆರ್. ಹನೀಫುಲ್ಲಾ, ವಿಮಲಾಬಸವರಾಜ್, ಶಿಲ್ಪಾಅಜಿತ್, ಸಲ್ಮಾಖಾನಂ, ಮಂಜುಳಮ್ಮ,ಎಂ.ನಾರಾಯಣಸ್ವಾಮಿ, ಎಂ.ರಾಜಣ್ಣ, ಸೈಯದ್ ಎಕ್ಭಾಲ್, ಸಿ.ಎಂ.ರಾಮು, ಶ್ರೀರಾಮಣ್ಣ, ಸುಷ್ಮಾಮಹೇಶ್, ಆಯಿಷಾ ಸೈಫುಲ್ಲಾ, ಮುಖಂಡ ಕೆ.ಎಂ.ಮಧುಮಹೇಶ್, ಸೈಪುಲ್ಲಾ, ಪುರಸಭೆ ಸಿಬ್ಬಂದಿ, ಶಿಕ್ಷಕರು, ಪೋಷಕರು ಭಾಗಹಿಸಿದ್ದರು.೦೨ವಿಜೆಪಿ ೧೬

ವಿಜಯಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ, ೮೦ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಿದರು.