ಸಾರಾಂಶ
ಹಾನಗಲ್ಲ: ಓಸ್ಯಾಟ್ ಸಂಸ್ಥೆಯ ಸಹಯೋಗದಲ್ಲಿ 50%-50%ಅನುಪಾತದಲ್ಲಿ ಒಟ್ಟು ₹7.30 ಕೋಟಿ ವೆಚ್ಚದಲ್ಲಿ ತಾಲೂಕಿನ 10 ಸರ್ಕಾರಿ ಶಾಲೆಗಳಿಗೆ ಅತ್ಯಾಧುನಿಕ ಮಾದರಿಯ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಅಮೆರಿಕದ ಓಸ್ಯಾಟ್ ಸಂಸ್ಥೆ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
10 ಶಾಲೆಗಳ ಕಟ್ಟಡಗಳ ನಿರ್ಮಾಣಕ್ಕೆ ತಗಲುವ ವೆಚ್ಚದಲ್ಲಿ ₹3.65 ಕೋಟಿ ವೆಚ್ಚವನ್ನು ಓಸ್ಯಾಟ್ ಸಂಸ್ಥೆ ಭರಿಸಲಿದ್ದು, ಇನ್ನುಳಿದ ₹3.65 ಕೋಟಿ ವೈಯಕ್ತಿಕ ಹಾಗೂ ದಾನಿಗಳ ನೆರವಿನಿಂದ ಭರಿಸಲು ಉದ್ದೇಶಿಸಲಾಗಿದೆ. ಆಧುನಿಕ ಜಗತ್ತಿಗೆ ನಮ್ಮ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸುಧಾರಣೆಗೆ ಗಮನ ನೀಡಲಾಗಿದೆ ಎಂದರು.ಓಸ್ಯಾಟ್ ಸಂಸ್ಥೆಯ ಪ್ರತಿನಿಧಿ ಕೆ.ಆರ್. ಮಂಜುನಾಥ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲ ಉದ್ದೇಶದೊಂದಿಗೆ ಓಸ್ಯಾಟ್ ಸಂಸ್ಥೆ 2003ರಲ್ಲಿ ಜನ್ಮ ತಳೆದಿದ್ದು, ಇದುವರೆಗೆ 123 ಶಾಲೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿದೆ. ಹಿಂದೆ ಮೈಸೂರು ಭಾಗದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ಬಾರಿ ಹಾವೇರಿ ಜಿಲ್ಲೆಯನ್ನು ಕ್ಲಸ್ಟರ್ ಮಾಡಿಕೊಳ್ಳಲಾಗಿದೆ. ದಾನಿಗಳು ನೀಡಿದ ಪ್ರತಿ ಪೈಸೆಯನ್ನೂ ಸದ್ಬಳಕೆ ಮಾಡಿಕೊಂಡು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಗುಣಮಟ್ಟದ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ ಶಾಲೆಗಳಿಗೆ ಭೇಟಿ ನೀಡಿ, ನಿರ್ವಹಣೆ ತೃಪ್ತಿಕರವಾಗಿದ್ದರೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಸಂಸ್ಥೆ ಗಮನ ನೀಡಲಿದೆ ಎಂದರು.ಗುತ್ತಿಗೆದಾರ ಸಂದೀಪ, ಎಸ್‌ಡಿಎಂಸಿ ಅಧ್ಯಕ್ಷ ಹೆಗ್ಗಪ್ಪ ಕಾಮನಹಳ್ಳಿ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪೂರ, ಪ್ರಭಾರ ಬಿಇಒ ಶಿವಯ್ಯ ಹಿರೇಮಠ, ಮುಖಂಡರಾದ ವಿಷ್ಣುಕಾಂತ ಜಾಧವ, ಪ್ರಭುಗೌಡ ಪಾಟೀಲ, ಕೆ.ಡಿ. ನಾಗೋಜಿ, ರಾಮಣ್ಣ ಓಲೇಕಾರ, ಶಿವಾಜಿ ಸಾಳುಂಕಿ, ಮಕ್ಬೂಲ್ ಬಡಗಿ, ಪ್ರಕಾಶ ಚೋಳಪ್ಪನವರ, ಪಿಡಿಒ ರಮೇಶ ತಾಂದಳೇಕರ, ಮುನೀರ್‌ಅಹ್ಮದ್ ಹಂಚಿನಮನಿ, ಹಯಾಜ್ ಚಿನ್ನಳ್ಳಿ, ವಿನೋದಾ ಸಾಳುಂಕಿ, ಮಂಜುಳಾ ಓಲೇಕಾರ, ಅಶೋಕ ಸಾಳುಂಕಿ, ಬಾಬು ಹಂಚಿನಮನಿ, ಮೃತ್ಯುಂಜಯ ಲೂತಿಮಠ, ಮುಖ್ಯೋಪಾಧ್ಯಾಯ ಸಿ.ಜಿ. ಪಾಟೀಲ ಸೇರಿದಂತೆ ಗ್ರಾಪಂ ಮತ್ತು ಎಸ್‌ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.
;Resize=(128,128))
;Resize=(128,128))
;Resize=(128,128))