ಗ್ಯಾರಂಟಿಯಿಂದ ಭಾರ, ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ

| Published : Dec 26 2023, 01:32 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಸೋನಿಯಾ ಗಾಂಧಿ, ಪ್ರೀಯಾಂಕ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ಸ್ಪರ್ಧಿಸಲಿ ಎಂಬ ಒತ್ತಾಯ ಕೇಳಿಬರುತ್ತಿವೆ.

ಶಿರಸಿ:

ಗ್ಯಾರಂಟಿ ಯೋಜನೆಯಿಂದ ನಮಗೆ ಭಾರ ಬಿದ್ದಿದೆ. ಮುಖ್ಯಮಂತ್ರಿ ಚಾಣಾಕ್ಷ ನೀತಿಯಿಂದ ಇದನ್ನು ನೀಗಿಸುತಿದ್ದಾರೆ. ಹಲವು ಮೂಲಗಳಿಂದ ಹೆಚ್ಚು ಹಣ ಕ್ರೂಡೀಕರಿಸುವ ಮೂಲಕ ಸರಿದೂಗಿಸುತ್ತೇವೆ. ಜತೆಗೆ ಈ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ನಿಷೇಧ ತೆರವು ವಿಷಯ ಸುಪ್ರಿಂ ಕೋರ್ಟ್‌ನಲ್ಲಿರುವ ಕಾರಣ ಈ ಬಗ್ಗೆ ಯಾವುದೇ ಚರ್ಚೆ ನಡೆಸಲು ಸಿದ್ಧನಿಲ್ಲ. ಹಿಜಾಬ್ ಕುರಿತಂತೆ ಮುಖ್ಯಮಂತ್ರಿಗಳೂ ಸಹ ಸ್ಪಷ್ಟಪಡಿಸಿದ್ದಾರೆ ಎಂದರು.ಬಿ.ಕೆ. ಹರಿಪ್ರಸಾದ್ ಅವರನ್ನು ಸಮಾಧಾನಪಡಿಸುವ ಪ್ರಶ್ನೆಗೆ, ಅವರು ವರ್ಕಿಂಗ್ ಕಮಿಟಿ ಸದಸ್ಯರು. ಅವರನ್ನು ಸಮಾಧಾನಪಡಿಸುವುದಲ್ಲ, ಅವರು ನಮಗೆ ಸಮಾಧಾನಪಡಿಸಬೇಕು ಎಂದರು.146 ಸಂಸದರ ಅಮಾನತು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಹುದೊಡ್ಡ ಕೊಡಲಿ ಪೆಟ್ಟು. ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಯಲ್ಲಿ ಭಾರತವನ್ನು ಅವಮಾನಗೊಳಿಸಿರುವ ಬಿಜೆಪಿ ನೀತಿ ಖಂಡನೀಯ ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಂದಿರುವ ದೊಡ್ಡ ಭಯ ಎಂದು ಹೇಳಿದರು. ಇನ್ನು ಕೇಂದ್ರದ ಹಿರಿಯ ನಾಯಕರು ಕರ್ನಾಟಕದಲ್ಲಿ ಸ್ಪರ್ಧಿಸುವ ಕುರಿತು, ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆ ಮಾಡಿಲ್ಲ. ಆದರೆ ಬಹಳಷ್ಟು ಕಡೆ ಸೋನಿಯಾ ಗಾಂಧಿ, ಪ್ರೀಯಾಂಕ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ಬರಲಿ ಎಂಬ ಒತ್ತಾಯ ಇದೆ. ಇನ್ನೂ ಯಾವುದೇ ಚರ್ಚೆ ಆ ದಿಸೆಯಲ್ಲಿ ಆಗಿಲ್ಲ ಎಂದರು.