ರಸ್ತೆ ಅಪಘಾತ: ಬಾಲಕಿ ಸಾವು

| Published : Dec 15 2023, 01:31 AM IST

ಸಾರಾಂಶ

ರಸ್ತೆ ಅಪಘಾತ: ಬಾಲಕಿ ಸಾವು

ತಿಕೋಟಾ: ಬಸ್-ಬೈಕ್ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಭವಾರ ಬೆಳಗ್ಗೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ವಡೇರಹಟ್ಟಿ ಗ್ರಾಮದ ಸವಿತಾ ಮದಗೂಂಡ ಪೂಜಾರಿ (15) ಮೃತ ಬಾಲಕಿ. ವಡೇರಹಟ್ಟಿಯಿಂದ ಅರಕೇರಿ ಜಾತ್ರೆಗೆ ಹೋಗುತ್ತಿದ್ದ ಸಮಯದಲ್ಲಿ ಜತ್ತ ಕಡೆಗೆ ಹೋಗುತ್ತಿದ್ದ ಮಹಾರಾಷ್ಟ್ರದ ಬಸ್ ಡಿಕ್ಕಿ ಹೊಡೆದಿದ್ದು, ಬಾಲಕಿ ಕೆಳಕ್ಕೆ ಬಿದ್ದು ಬಸ್ಸಿನ ಹಿಂದಿನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ತಿಕೋಟಾ ಠಾಣಿಯಲ್ಲಿ ಪ್ರಕರಣ ದಾಖಲೆವಾಗಿದೆ.