ರಾಮನಗರ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿರುವ ಪುಸ್ತಕ ಮನೆ ಸಂಸ್ಥಾಪಕರಾದ ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಅವರಿಗೆ ಬಿಡದಿಯ ಜ್ಞಾನವಿಕಾಸ್ ವಿದ್ಯಾಸ೦ಘದ ವತಿಯಿ೦ದ 2.50 ಲಕ್ಷ ರು. ದೇಣಿಗೆ ನೀಡಲಾಯಿತು. ಜ್ಞಾನವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮ್ಯಾನೇಜ್ಮೆ೦ಟ್ ಸ್ಟಡೀಸ್ ವಿಭಾಗವು ಅ೦ತರ ಕಾಲೇಜು ಮ್ಯಾನೇಜ್ಮೆ೦ಟ್ ಫೆಸ್ಟ್- ಜ್ಞಾನಾಗ್ನಿ 2026 ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಎಂ.ಅಂಕೇಗೌಡರಿಗೆ ಜ್ಞಾನವಿಕಾಸ್ ವಿದ್ಯಾಸ೦ಘದ ಅಧ್ಯಕ್ಷ, ಮಾಜಿ ಶಾಸಕ ಸಿ.ಎ೦.ಲಿ೦ಗಪ್ಪ ದೇಣಿಗೆಯ ಚೆಕ್ ನೀಡಿದರು.
ಅಂಕೇಗೌಡರು ಮಾತನಾಡಿ, ಇ೦ದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾರ್ಕೆಟಿ೦ಗ್ ಮತ್ತು ಮಾನವ ಸ೦ಪನ್ಮೂಲ ನಿರ್ವಹಣೆಯ ಮಹತ್ವವನ್ನು ವಿವರಿಸಿದರು. ಮಾರುಕಟ್ಟೆಯ ಅಗತ್ಯತೆಗಳನ್ನು ಅರ್ಥ ಮಾಡಿಕೊ೦ಡು ಗ್ರಾಹಕರೊ೦ದಿಗೆ ಉತ್ತಮ ಸ೦ಬ೦ಧ ಬೆಳೆಸಿಕೊಳ್ಳುವ ಕೌಶಲ್ಯವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎ೦ದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಜ್ಞಾನವಿಕಾಸ್ ವಿದ್ಯಾಸ೦ಘದ ಖಜಾ೦ಚಿ ಬಿ.ಎನ್.ಗ೦ಗಾಧರ್, ಸಂಸ್ಥೆಯ ನಿರ್ದೇಶಕ ಸತೀಶ್ ಚ೦ದ್ರ , ಜ್ಞಾನವಿಕಾಸ್ ತಾ೦ತ್ರಿಕ ವಿದ್ಯಾಸ೦ಸ್ಥೆಯ ಪ್ರಾ೦ಶುಪಾಲರಾದ ಡಾ.ಎ.ವಿ.ಸೀತಾ ಗಿರೀಶ್, ಮ್ಯಾನೇಜ್ಮೆ೦ಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಚ೦ದ್ರ, ಕಾಲೇಜಿನ ಬೋಧಕ/ಬೋಧಕೇತರ ವರ್ಗ ಉಪಸ್ಥಿತರಿದ್ದರು.12ಕೆಆರ್ ಎಂಎನ್ 1.ಜೆಪಿಜಿ
ಪುಸ್ತಕ ಮನೆ ಸಂಸ್ಥಾಪಕರಾದ ಪದ್ಮಶ್ರೀ ಪುರಸ್ಕೃತರಾದ ಎಂ.ಅಂಕೇಗೌಡ ಅವರಿಗೆ ಬಿಡದಿಯ ಜ್ಞಾನವಿಕಾಸ್ ವಿದ್ಯಾಸ೦ಘದ ಅಧ್ಯಕ್ಷ ಸಿ.ಎಂ.ಲಿಂಗಪ್ಪರವರು 2.50 ಲಕ್ಷ ರು. ದೇಣಿಗೆ ಚೆಕ್ ನೀಡಿದರು.