ಸಾರಾಂಶ
ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಹೊಸಪೇಟೆ: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಗೂಂಡಾ ಕಾಯಿದೆಯಡಿ ಬಂಧಿಸುವ ಮೂಲಕ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ನಡೆಸಿರುವ ಕಾಂತರಾಜ್ ಜಾತಿಗಣತಿ ವರದಿ ಜಾರಿಗೊಳಿಸಬೇಕು.ಜಿಲ್ಲೆಯಲ್ಲಿ ದಲಿತರ ಮತ್ತು ಅಲೆಮಾರಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಬೇಕು. ದಲಿತರ ಮತ್ತು ಅಲೆಮಾರಿಗಳ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಅವರನ್ನು ಹೊಡೆದು ಬಡಿದು ಒಪ್ಪಿಸಿ ಹಳೇ ಕೇಸ್‌ಗಳಿಗೆ ಕಾರಣೀಭೂತರನ್ನಾಗಿ ಮಾಡಿ ಕೇಸ್‌ನಲ್ಲಿ ಸೇರ್ಪಡೆ ಮಾಡಿ ಜೈಲಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಅಲೆಮಾರಿಗಳ ಬದುಕು ಕಂಗಾಲಾಗಿದೆ. ಇದರ ಬಗ್ಗೆ ಗಮನಹರಿಸಿ ಸತ್ಯ, ಅಸತ್ಯದ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಸ್. ದುರುಗೇಶ್, ಕುಮಾರ್, ಲಲಿತಮ್ಮ, ಸಣ್ಣಮಾರೆಪ್ಪ ತೆಗ್ಗಿನಕೇರಿ ಕೊಟ್ರೇಶ್, ಉದಯ್ ಕುಮಾರ್, ಜಿ.ಟಿ. ಗುದ್ದಿ, ಕಂದಗಲ್ಲು ಪರಶುರಾಮ, ಶ್ರೀನಿವಾಸ್, ಕೋಗಳಿ ಉಮೇಶ್, ನಾಗರಾಜ ಗುಡೇಕೋಟೆ, ದೇವಪ್ರಿಯ, ಎಂ. ವಿರುಪಾಕ್ಷಿ, ಗಂಗಣ್ಣ, ಟಿ. ಹನುಮಂತಪ್ಪ, ಗಾಳೆಪ್ಪ, ಶಿವಕುಮಾರ್, ಮಾರುತಿ, ಪರಶುರಾಮಪ್ಪ, ಫಕ್ಕೀರಪ್ಪ, ಸಣ್ಣಜಂಬಯ್ಯ, ಕೊರವರ ಹಾಗೂ ನಾಗರಾಜ ಮತ್ತಿತರರಿದ್ದರು.